ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ-೨೦೨೬ | ವಿಜಯಪುರ ಜಿಲ್ಲಾಧಿಕಾರಿ & ಜಿಲ್ಲಾ ಚುನಾವಣಾಧಿಕಾರಿ ಡಾ.ಆನಂದ ಕೆ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ-೨೦೨೬ ಪ್ರಕ್ರಿಯೆಯು ಪ್ರಸ್ತುತ ಜಾರಿಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಇದೇ ಜೂನ್.೩೦ ರಿಂದ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ-ಮನೆ ಭೇಟಿ ನೀಡಲಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ.ಆನಂದ ಕೆ ಅವರು ತಿಳಿಸಿದ್ದಾರೆ.
ದಿನಾಂಕ: ಜೂ.೩೦ರಿಂದ ಜುಲೈ.೨೯ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಅವರು ಜಿಲ್ಲೆಯ ಮನೆ-ಮನೆಗೆ ಭೇಟಿ ನೀಡಲಿದ್ದಾರೆ. ಭೇಟಿಯ ಸಂದರ್ಭದಲ್ಲಿ ಅಧಿಕಾರಿಗಳು ಎನ್ಯೂಮರೇಷನ್ ಫಾರ್ಮ್ ಗಳನ್ನು ದ್ವಿ-ಪ್ರತಿಯಲ್ಲಿ ಪ್ರತಿಯೊಬ್ಬ ಮತದಾರರಿಗೆ ನೀಡಲಿದ್ದಾರೆ. ಮತದಾರರು ಈ ಫಾರ್ಮ್ಗಳನ್ನು ಭರ್ತಿ ಮಾಡಿ, ಮರಳಿ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ
(ಬಿಎಲ್‌ಒ )ಅವರಿಗೆ ಹಿಂದಿರುಗಿಸುವಂತೆ ತಿಳಿಸಿದ್ದಾರೆ.
ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ-೨೦೨೬ ರ ಕುರಿತು ಹೆಚ್ಚಿನ ಮಾಹಿತಿ ಮತ್ತು ವಿವರವನ್ನು ಚುನಾವಣಾ ಆಯೋಗದ ಅಧಿಕೃತ ಅಂತರಜಾಲ ತಾಣಗಳಾದ Voters Service Portal: https://voters.eci.gov.in/ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ ಇವರ ಜಾಲತಾಣ ಛಿeoಞಚಿಡಿಟಿಚಿಣಚಿಞಚಿ.gov.iಟಿ ಹಾಗೂ ವಿಜಯಪುರ ಜಿಲ್ಲಾ ವೆಬ್ ಪೋರ್ಟಲ್ https://vijayapura.nic.in/en ವೀಕ್ಷಿಸಬಹುದಾಗಿದೆ.
ಯಾವುದೇ ಅಗತ್ಯ ಮಾಹಿತಿ, ಸಲಹೆಗಳನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಜಿಲ್ಲಾ ಮತದಾರರ ಸಹಾಯವಾಣಿ: ೧೯೫೦ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

