Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಾಗಲಕೋಟೆ ರಸ್ತೆಯ ಸಿದ್ದೇಶ್ವರ ಲೇಔಟ್ ಕೆ ಎಚ್ ಬಿ ಯಲ್ಲಿ ಶ್ರಾವಣ ಮಾಸದಲ್ಲಿ ನಡೆಯುವ ಶ್ರೀ ಕೊರವಂಜಿ ದೇವಿ ಜಾತ್ರಾ ಮಹೋತ್ಸವ ಶನಿವಾರ ಆದ್ದೂರಿಯಿಂದ ನಡೆಯಿತು.ನಗರದ ಮಧ್ಯ ಭಾಗದಲ್ಲಿರುವ ಸಿದ್ದೇಶ್ವರ ಲೇಔಟ್ ಆವರಣದಲ್ಲಿ ಕೊರವಂಜಿ ದೇವಿ ವಿಗ್ರಹವನ್ನು ದೇವಸ್ಥಾನದ ಪ್ರಧಾನ ಆರ್ಚಕರಿಂದ ಸ್ವಚ್ಫಗೊಳಿಸಿ ನಾನಾ ಬಗೆಯ ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಮಹಾ ಮಂಗಳಾರತಿ ನೆರವೇರಿಸಲಾಯಿತು.ನಂತರ ಭಕ್ತರಿಗೆ ದರ್ಶನ ಪಡೆದರು. ನೂರಾರು ಭಕ್ತರು ತಮ್ಮ ಮನೆಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಕೊಂಡು ಎಡೆ ಇಟ್ಟು ಕೊರವಂಜಿ ದೇವಿ ವಿಗ್ರಹ ಮುಂದೆ ಪೂಜೆ ಸಲ್ಲಿಸಿದರು.51 ಮುತ್ತೈದೆ ಮಹಿಳೆಯರು ಕುಂಭ ಹೊತ್ತು ಸಿದ್ದೇಶ್ವರ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ವಾದ್ಯಗೋಷ್ಠಿ, ತಮಟೆ ಸೇರಿದಂತೆ ನಾನಾ ಕಲಾತಂಡಗಳಿಂದ ಮೆರವಣಿಗೆ ನಡೆಸಲಾಯಿತು.ಬಳಿಕ ಮಹಿಳೆಯರು ತಮ್ಮ ಮನೆಗಳ ಮುಂಭಾಗದಲ್ಲಿ ಮೆರವಣಿಗೆ ಸಾಗುವ ದಾರಿಯೂದ್ದಕ್ಕೂ ಸರತಿ ಸಾಲಿನಲ್ಲಿ ನಿಂತು ಕೊರವಂಜಿ ದೇವಿಯ ದರ್ಶನ ಪಡೆದರು.ನಂತರ ದೇವಸ್ಥಾನದಲ್ಲಿ ಮುತ್ತೈದೆಯರಿಗೆ ಉಡಿ ತುಂಬಿ ದೇವಸ್ಥಾನದ ಆವರಣದಲ್ಲಿ…

Read More

ಸಂಗ್ರಹ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ 30 ನೆಯ ದಿನದ ಶರಣ ಮಾಲಿಕೆಯಲ್ಲಿ ಶಂಕರ ಕುಪ್ಪಸ್ತ ಅವರು ಶಂಕರ ದಾಸಿಮಯ್ಯ ಅವರ ಕುರಿತು ತಮ್ಮ ಅನುಭಾವವನ್ನು ಹಂಚಿಕೊಂಡರು.ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಂದಕಲ್ಲು ಗ್ರಾಮದಲ್ಲಿ ಗೋವಿಂದ ಭಟ್ಟನೆಂಬ ನಾಮದಿಂದ ಜನಿಸಿ, ದುಮ್ಮವ್ವೆ ಎಂಬ ಸತಿಯೊಡನೆ ಕಾಶಿಯಾತ್ರೆಗೆಂದು ಹೊರಟು ಕೃಷ್ಣಾ ತೀರದ ನವಿಲೆಗೆ ಬಂದು ಅಲ್ಲಿಯ ಜಡೆಯ ಶಂಕರನ ಕೃಪೆಯಿಂದ ಶಂಕರ ದಾಸಿಮಯ್ಯನಾಗಿ ಹೊಸ ಹುಟ್ಟನ್ನು ಪಡೆದದ್ದನ್ನು, ಸೂಜಿ ಕಾಯಕದ ಕಾಯಕವನ್ನು, ಅವರು ನಿಜಗುರು ಶಂಕರ ದೇವಾ ಅಂಕಿತದಲ್ಲಿ ಐದು ವಚನಗಳು ಬರೆದದ್ದನ್ನು, ಶಂಕರ ದಾಸಿಮಯ್ಯನವರ ಬಗೆಗೆ ತೆಲುಗು ಬಸವ ಪುರಾಣ ಸೋಮೇಶ್ವರ ಪುರಾಣ, ಭೈರವೇಶ್ವರ ಕಾವ್ಯ ರಗಳೆ ಶಂಕರ ದಾಸಿಮಯ್ಯನ ಪುರಾಣಗಳಲ್ಲಿ ಮಾಹಿತಿ ಲಭ್ಯವಾಗುತ್ತದೆ ಎಂಬುದನ್ನು, ಶಿವನಿಂದ ಹಣೆಗಣ್ಣು ಪಡೆದ ಸಂಗತಿ, ಕಲ್ಯಾಣದಲ್ಲಿ ವಿಷ್ಣುವಿನ ವಿಗ್ರಹ ದಹಿಸಿದ ಘಟನೆ,ಮುದೇನೂರಿನಲ್ಲಿ ಜೇಡರ ದಾಸಿಮಯ್ಯನವರ ಅಹಂಕಾರವನ್ನು ಮುರಿದ ಪ್ರಸಂಗಗಳು ಚರಿತ್ರೆಯ ರೂಪದಲ್ಲಿ ಪುರಾಣಗಳಲ್ಲಿ ಕಾಣಸಿಗುತ್ತವೆ ಎಂದು ಅವರ ಐದು…

Read More

ವಿಮೆಯಲ್ಲಿ ರೈತರ ಜೀವನದ ಜೊತೆ ಚಲ್ಲಾಟ ಆಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸಂಗಮೇಶ ಸಗರ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಫಸಲ್ ಭೀಮಾ ಯೋಜನೆಯಡಿ ಕೋರವಾರ ಗ್ರಾಮದಲ್ಲಿ ನಡೆದ ಮಧ್ಯವರ್ತಿಗಳಿಂದ ರೈತರಿಗೆ ಆಗಿರುವ ಮೋಸವನ್ನು ತನಿಖೆ ಮಾಡಿ ಶಾಮಿಲಾಗಿರುವ ಇಲಾಖೆ ಅಧಿಕಾರಿಗಳು, ವಿಮಾ ಕಂಪನಿಯ ಅಧಿಕಾರಿಗಳು ಹಾಗೂ ಸಿ.ಎಸ್.ಸಿ ಸೇಂಟರ್ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಜೊತೆಗೆ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಡಲೆ ವಿಮೆಯಲ್ಲಿ ೬೦*೪೦ ಅನುಪಾತದಲ್ಲಿ ಸುಮಾರು ೫ ಕೋಟಿ ಭ್ರಷ್ಠಾಚಾರದ ರೂವಾರಿಗಳನ್ನು ಜೈಲಿಗೆ ಕಳಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸದರುಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಮನವಿ ಸಲ್ಲಿಸಿ ಮಾತನಾಡುತ್ತಾ, ಕಳೆದ ವರ್ಷ ದೇವರಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದಲ್ಲಿ ರೈತರಿಗೆ ಗೊತ್ತಾಗದಂತೆ ಅಧಿಕಾರಿಗಳ ಶಾಮಿಲಿನಿಂದಾಗಿ ೨೫ ಲಕ್ಷಕ್ಕೂ ಅಧಿಕ ಹಣವನ್ನು ಮಧ್ಯವರ್ತಿ ಶಿವರಾಜ…

Read More

ವಿಜಯಪುರದ ಶಿವಾಲಯ ದೇವಸ್ಥಾನದಲ್ಲಿ ಜರುಗಿದ “ಬುತ್ತಿ ಜಾತ್ರೆ” ಉದ್ಘಾಟಿಸಿದ ಶಿರಹಟ್ಟಿಯ ಫಕೀರ ಸಿದ್ದರಾಮ ಶಿವಯೋಗಿಗಳ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಿಂದೂ ಸಂಸ್ಕೃತಿಯಲ್ಲಿ ಶ್ರಾವಣ ಮಾಸವು ಒಂದು ವಿಶಿಷ್ಟವಾದ ಆಚರಣೆಯಾಗಿದೆ. ಈ ಮಾಸದಲ್ಲಿ ನಾವು ಪ್ರತಿದಿನವು ಶಿವ ಧ್ಯಾನ, ತಪಸ್ಸು, ಪ್ರಾರ್ಥನೆ, ದೇವರ ನಾಮಸ್ಮರಣೆ, ಪುರಾಣ, ಪ್ರವಚನ, ಕೀರ್ತನೆ ಮತ್ತು ಜೀವನ ಸಂದೇಶ ನೀಡುವ ಅಧ್ಯಾತ್ಮಿಕತೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ದೇವರನ್ನು ಭಕ್ತಿ-ಭಾವದಿಂದ ಪೂಜಿಸಿದರೆ ನಮ್ಮೆಲ್ಲ ಸಂಕಷ್ಟಗಳು ದೂರಾಗಲಿವೆ. ಜೀವನದಲ್ಲಿ ಸುಖ-ಶಾಂತಿ, ನೆಮ್ಮದಿ ಮತ್ತು ಸಾರ್ಥಕ ಬದುಕಿನ ಸತ್ಯವನ್ನು ಅರಿಯಲು ಮತ್ತು ಮನದಲ್ಲಿರುವ ಕಲ್ಮಶಗಳನ್ನು ಹೋಗಲಾಡಿಸಲು ಶ್ರಾವಣ ಮಾಸವು ಪ್ರಯೋಜನಕಾರಿ ಎಂದು ಭಾವೈಕ್ಯತೆಯ ಮಠವೆಂದೇ ಹೆಸರುವಾಸಿಯಾದ ಶಿರಹಟ್ಟಿಯ ಫಕೀರ ಸಿದ್ದರಾಮ ಶಿವಯೋಗಿಗಳು ತಮ್ಮ ಆಶೀರ್ವಚನದಲ್ಲಿ ಹೇಳಿದರು.ಅವರು ನಗರದ ನವರಸಪುರದ ಸೇನಾ ನಗರದ ಶಿವಾಲಯ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪುರಾಣ ಮಂಗಲ ಪ್ರಯುಕ್ತ ಆ.೨೧ ರಂದು ಜರುಗಿದ “ಬುತ್ತಿ ಜಾತ್ರೆ” ಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು.ಅವರು ಮಾತನಾಡುತ್ತಾ, ಇಂದು ಮನುಷ್ಯ ಆಧುನಿಕತೆ ಭರಾಟೆಯಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವರದಿ: ಸಿದ್ರಾಮ ಮಾಳಿರೇವತಗಾಂವ: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ಲಕ್ಷಾಂತರ ಕ್ಯೂಸೆಕ್ ನೀರು ಬಿಟ್ಟಿರುವದರಿಂದ ರಾಜ್ಯ ಗಡಿ ಅಂಚಿನಲ್ಲಿ ಹಾದು ಹೋಗಿರುವ ಭೀಮಾ ನದಿಯಲ್ಲಿ ಪ್ರವಾಹ ಭೀತಿ ಎದುರಾಗಿದೆ.ಭೀಮಾ ನದಿಗೆ ಕರ್ನಾಟಕ ಮಹಾರಾಷ್ಟ್ರ ಸರ್ಕಾರಗಳು ಜಂಟಿಯಾಗಿ ನಿರ್ಮಿಸಿರುವ ೮ ಬಾಂದಾರ ಕಮ್ ಬ್ರಿಜ್‌ಗಳು ಜಲಾವೃತಗೊಂಡಿವೆ. ಈ ಬಾಂದಾರಗಳ ಮೂಲಕ ಮಹಾರಾಷ್ಟ್ರ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸಂಪರ್ಕ ಕಡಿತಗೊಂಡಿವೆ.ಈ ಹಿನ್ನಲೆಯಲ್ಲಿ ಶುಕ್ರವಾರದಂದು ತಾಲೂಕು ಮುಖ್ಯ ಯೋಜನಾಧಿಕಾರಿ ಹಾಗೂ ವಿಪತ್ತು ನಿರ್ವಹಣಾಧಿಕಾರಿಗಳಾದ ವ್ಹಿ.ಬಿ.ಕುಂಬಾರ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ ಖಡಗೇಕರ. ಸಾಹಾಯಕ ನಿರ್ದೇಶಕರಾದ ಎಸ್.ಆರ್.ಕೊಟ್ಟಲಗಿ, ತಾಲೂಕಿನ ನೋಡಲ್ ಅಧಿಕಾರಿಗಳು, ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಚಡಚಣ ತಹಶಿಲ್ದಾರ್ ಸಂಜಯ ಇಂಗಳೆಯವರು ಮಾತನಾಡುತ್ತ. ಭೀಮಾ ನದಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿರುವದರಿಂದ ನದಿ ತೀರದಲ್ಲಿ ವಾಸವಾಗಿರುವ ಜನರಿಗೆ ಸುರಕ್ಷಿತ ತಾಣಗಳತ್ತ ತೆರಳಲು ಈಗಾಗಲೇ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದಲ್ಲಿ ಶುಕ್ರವಾರ ತಾಲೂಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ರೈತರಿಗೆ ಯೂರಿಯಾ ಗೊಬ್ಬರ ಮತ್ತು ಬೆಳೆ ಪರಿಹಾರ ನೀಡಲು ಜಿಲ್ಲಾ ಅಧಿಕಾರಿಗಳಿಗೆ ತಹಶೀಲ್ದಾರ ಎಸ್.ಎಂ. ಮ್ಯಾಗೇರಿ ಮುಖಾಂತರ ಮನವಿಯನ್ನು ಸಲ್ಲಿಸಿದರು.ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಅಧ್ಯಕ್ಷ ಸೋಮು ಬಿರಾದಾರ ಮಾತನಾಡಿ, ಕೊಲ್ಹಾರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ರೈತರಿಗೆ ಯೂರಿಯಾ ಗೊಬ್ಬರ ಒದಗಿಸಿಕೊಡುವುದು ಹಾಗೂ ಮೆಕ್ಕೆಜೋಳ, ಇರುಳ್ಳಿ ಬೆಳೆ ಹಾನಿಗೆ ಫರಿಹಾರ ಕೊಡಬೇಕು ಸದರಿ ರೈತರಾದ ನಾವು ಒಂದು ತಿಂಗಳಿಂದ ನಮಗೆ ಸಮರ್ಪಕವಾಗಿ ನಮ್ಮ ಜಮೀನಿಗೆ ಯೂರಿಯಾ ಗೊಬ್ಬರ ದೊರಕುತ್ತಿಲ್ಲ. ಇದರಿಂದ ನಮಗೆ ತುಂಬಾ ತೊಂದರೆಯಾಗಿರುತ್ತದೆ.ಅದರಂತೆ ಸತತವಾಗಿ 20-25 ದಿನಗಳಿಂದ ಸತತವಾಗಿ ಅತೀ ಮಳೆಯಿಂದ ಈರುಳ್ಳಿ, ಮೆಕ್ಕೆಜೋಳ ನಾಶವಾಗುತ್ತಿದ್ದು, ಇದರಿಂದ ನಮ್ಮ ರೈತರಿಗೆ ತುಂಬಾ ಹಾನಿಯಾಗಿದ್ದು, ಕಾರಣ ತಾವು ವಿಜಯಪುರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೈತರಿಗೆ ಸಹಾಯ ಸಹಕಾರ ನೀಡಲು ವಿಜಯಪುರ ಜಿಲ್ಲಾಧಿಕಾರಿಗಳು ಹಾಗೂ ಜಂಟಿ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ದೇವಾಲಯದ ಸಿಬಿಎಸ್ಇ ಶಾಲಾ ಆವರಣದಲ್ಲಿರುವ ನಂದೀಶ್ವರ ರಂಗಮಂದಿರದಲ್ಲಿ ಶ್ರಾವಣ ಮಾಸದಂಗವಾಗಿ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ, ಬಸವೇಶ್ವರ ಜಾತ್ರಾ ಉತ್ಸವ ಸಮಿತಿ ಹಾಗೂ ಬಸವೇಶ್ವರ ಸೇವಾ ಸಮಿತಿ ಸಹಯೋಗದಲ್ಲಿ ಒಂದು ತಿಂಗಳ ಕಾಲ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿಯವರಿಂದ ಹಮ್ಮಿಕೊಂಡಿದ್ದ ಬಸವ ಸಂಸ್ಕ್ರತಿ ಪ್ರವಚನದ ಮಂಗಲ ಮಹೋತ್ಸವ ಆ.೨೪ ರಂದು ಸಂಜೆ ೬ ಗಂಟೆಗೆ ಹಮ್ಮಿಕೊಳ್ಳಲಾಗಿದೆ.ಮಂಗಲ ಮಹೋತ್ಸವದ ದಿವ್ಯ ಸಾನಿಧ್ಯವನ್ನು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಸಾನಿಧ್ಯವನ್ನು ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಮುಖ್ಯ ಅತಿಥಿಗಳಾಗಿ ಸಚಿವ ಶಿವಾನಂದ ಪಾಟೀಲ, ಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಅತಿಥಿಗಳಾಗಿ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗುರುನಾಥ ದಡ್ಡೆ, ಬಸವೇಶ್ವರ ಸೇವಾ ಸಮಿತಿ ಉಪಾಧ್ಯಕ್ಷ ಬಸವರಾಜ ಹಾರಿವಾಳ, ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ಬಸವೇಶ್ವರ ಸೇವಾ ಸಮಿತಿಯ ಕಾರ್ಯದರ್ಶಿ ಬಸವರಾಜ ಗೊಳಸಂಗಿ, ಬಸವೇಶ್ವರ ಸೇವಾ ಸಮಿತಿ ಸದಸ್ಯ ಅನಿಲ ಅಗರವಾಲ, ಎಪಿಎಂಸಿ ಮಾಜಿ ಅಧ್ಯಕ್ಷ…

Read More

ಜಿಡಗಾ-ಮುಗಳಖೋಡ ಮಠದ ಡಾ.ಮುರುಘೇಂದ್ರ ಸ್ವಾಮೀಜಿ ಅಭಿಮತ ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಮನುಷ್ಯನಲ್ಲಿ ನಡೆ-ನುಡಿ, ಆಚಾರ-ವಿಚಾರ ಧರ್ಮದಿಂದ ಕೂಡಿದ್ದರೆ ಅಂತಹವರನ್ನು ಭಗವಂತನು ಇಷ್ಟ ಪಡುತ್ತಾನೆ. ಇದನ್ನು ವಿಶ್ವಗುರು ಬಸವೇಶ್ವರರು ನಿಷ್ಪತಿ ಎಂಬ ಹಣ್ಣು ಕಳಚಿ ಬೀಳುವಲ್ಲಿ ತನಗೆ ಬೇಕೆಂದು ಎತ್ತಿಕೊಂಡ ಎಂಬ ವಚನವೊಂದರಲ್ಲಿ ಹೇಳಿದ್ದಾರೆ ಎಂದು ಜಿಡಗಾ-ಮುಗಳಖೋಡ ಮಠದ ಡಾ.ಮುರುಘೇಂದ್ರ ಸ್ವಾಮೀಜಿ ಹೇಳಿದರು.ಪಟ್ಟಣದ ಮಸಬಿನಾಳ ರಸ್ತೆಯ ಗಣೇಶ ನಗರದಲ್ಲಿರುವ ಯಲ್ಲಾಲಿಂಗ ಮಹಾರಾಜರ ಮಠದಲ್ಲಿ ಶ್ರಾವಣ ಮಾಸದ ಕೊನೆಯ ದಿನವಾದ ಶುಕ್ರವಾರ ಹಮ್ಮಿಕೊಂಡಿದ್ದ ದಿವ್ಯದರ್ಶನ ಹಾಗೂ ಶ್ರೀಗಳ ಪಾದಪೂಜೆ ಸಮಾರಂಭದ ಸಾನಿಧ್ಯ ವಹಿಸಿ ಸದ್ಭಕ್ತರ ಪಾದಪೂಜೆ ಸ್ವೀಕರಿಸಿ ಮಾತನಾಡಿದ ಅವರು, ಮನುಷ್ಯನಿಗೆ ಬಟ್ಟೆ, ಆಭರಣಗಳಿಂದ ಬೆಲೆ ಬರುವುದಿಲ್ಲ.ಮನುಷ್ಯನಿಗೆ ಒಳ್ಳೆಯ ನಡತೆ,ಒಳ್ಳೆಯ ಗುಣ, ಒಳ್ಳೆಯ ಆಚಾರ-ವಿಚಾರ, ಶ್ರೇಷ್ಠ ಭಕ್ತಿಯಿದ್ದರೆ ಮಾತ್ರ ಬೆಲೆ ಬರುತ್ತದೆ ಎಂಬುವದನ್ನು ಅರಿತುಕೊಳ್ಳಬೇಕಿದೆ ಎಂದರು.ರಾಜ್ಯದಲ್ಲಿರುವ ನಮ್ಮ ಶ್ರೀಮಠದ ಎಲ್ಲ ಶಾಖಾಮಠದಲ್ಲಿ ಪಾದಪೂಜೆ ನೆರವೇರುತ್ತವೆ. ಶ್ರಾವಣ ಮಾಸದ ಕೊನೆಯ ದಿನ ಮುಗಳಖೋಡ ಮಠದಲ್ಲಿ ಪಾದಪೂಜೆ ನೆರವೇರುತ್ತಿತ್ತು. ಆದರೆ ಈ ವರ್ಷದ ಪಾದಪೂಜೆ ಬಸವನಬಾಗೇವಾಡಿಯ ಮಠದಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರ /ಅರ್ಹ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳುವಂತೆ ಆಗ್ರಹಿಸಿ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಬಸವೇಶ್ವರ ವೃತ್ತದ ವರೆಗೆ ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಅಡಿಯಲ್ಲಿ ಬರುವ 432 ಪದವಿ ಕಾಲೇಜುಗಳಲ್ಲಿ 6,000 ಖಾಯಂ ಉಪನ್ಯಾಸಕರಲ್ಲಿ 3000 ಕ್ಕಿಂತ ಹೆಚ್ಚು ಉಪನ್ಯಾಸಕರು ಈಗಾಗಲೇ ನಿವೃತ್ತಿ ಪಡೆದಿದ್ದು, ಇನ್ನು ಕೇವಲ 3000 ಖಾಯಂ ಉಪನ್ಯಾಸಕರೊಂದಿಗೆ 12,000 ಅತಿಥಿ ಉಪನ್ಯಾಸಕರ ಸೇವಾ ನೆರವಿನಿಂದ ಪದವಿ ತರಗತಿಗಳು ಜರುಗುತ್ತಿವೆ. ಕರ್ನಾಟಕದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಪಡೆಯುವುದು ವಿದ್ಯಾರ್ಥಿಗಳ ಹಕ್ಕು ಮುಂದುವರೆದು ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ಆದರೆ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮರೆತಂತಿರುವ ರಾಜ್ಯ ಸರ್ಕಾರ ಪದವಿ ಹಂತದಲ್ಲಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯಗಳ ಅವಶ್ಯಕತೆ ಇದೆ ಮತ್ತು ಮಕ್ಕಳ ಬೆಳವಣಿಗೆಯಲ್ಲಿ ತಾಯಿ ಪಾತ್ರ ಮಹತ್ವದ್ದು. ತಾಯಿ ಮನೆಯ ಮೊದಲ ಡಾಕ್ಟರ್ ಇದ್ದಂಗ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಬಾಲಗೊಂಡ ಹೇಳಿದರು.ಪಟ್ಟಣದ ಶ್ರೀ ವಿಠ್ಠಲ ಮಂದಿರ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ ಹಾಗೂ ತಾಲೂಕು ಮಹಿಳಾ ಜ್ಞಾನ ವಿಕಾಸ ಸಹಯೋಗದಲ್ಲಿ ಪೌಷ್ಟಿಕ ಆಹಾರ ಮೇಳ ಶುಕ್ರವಾರ ಹಮ್ಮಿಕೊಂಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣದ ಜೋತೆಗೆ ಆಹಾರ ಮೇಳ ಹಮ್ಮಿಕೊಂಡಿದ್ದು ಆಹಾರ ಮತ್ತು ಶುಚಿತ್ವದ ಬಗ್ಗೆ ಮಾಹಿತಿ ನೀಡಲು ಉತ್ತಮ ವೇದಿಕೆ ಯಾಗುತ್ತದೆ ಎಂದರು.ತಾಲೂಕು ಜ್ಞಾನ ವಿಕಾಸ ಕೇಂದ್ರ ಮುಖ್ಯಸ್ಥರು ಶ್ರೀದೇವಿ ಕಾಳಿಸಿಂಗೆ ಮಾತನಾಡಿ ಕುಟುಂಬ ಸದಸ್ಯರ ಕಲ್ಯಾಣ ಮನೆಯ ಒಡತಿಯ ಕೈಯಲ್ಲಿ ಇದೆ. ಆಧುನಿಕ ಯುಗದಲ್ಲಿ ಉತ್ತಮ ಆರೋಗ್ಯ ಉತ್ತಮ ಸಂಪತ್ತು ಇದ್ದ ಹಾಗೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ತಾಲೂಕು ಪಂಚ ಗ್ಯಾರಂಟಿ ಸಮಿತಿ ಸದಸ್ಯೆ…

Read More