ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಶ್ರೀಕೃಷ್ಣ ವಾದಿರಾಜ ಮಠದಲ್ಲಿ ಗುರುವಾರ ಸಂಜೆ ದಿ. ಎಸ್ ಎಲ್ ಭೈರಪ್ಪನವರಿಗೆ ಶೃದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮ ಜರುಗಿತು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ) ವಿಜಯಪುರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ದಿ.ಭೈರಪ್ಪನವರ ಕೃತಿಗಳ ಬಗ್ಗೆ ಅವರು ಸಾಹಿತ್ಯದ ಬಗ್ಗೆ ಅವರ ಸಮಗ್ರ ಕಾದಂಬರಿಗಳ ಚರ್ಚೆ ಮಾಡುವ ಮೂಲಕ ಆಗಲಿದ ಧೀಮಂತ ಮೇರು ಸಾಹಿತಿ ದಿ. ಭೈರಪ್ಪನವರಿಗೆ ನುಡಿನಮನ ಸಲ್ಲಿಸಲಾಯಿತು.
ಪ್ರಾಸ್ತಾವಿಕವಾಗಿ ಆನಂದ ಗೋಡ್ಸೆ ಮಾತನಾಡಿ, ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ಬಾರದೆ ಇರುವುದು ದೊಡ್ಡ ಪ್ರಮಾದ, ಮರಣೋತ್ತರವಾಗಿಯಾದರೂ ಸರ್ಕಾರ ಶೀಘ್ರದಲ್ಲೇ ಜ್ಞಾನಪೀಠ ಪ್ರಶಸ್ತಿ ಘೋಷಣೆ ಮಾಡಬೇಕು ಎಂದು ಹೇಳಿದರು.
ಆನಂದ ಕುಲಕರ್ಣಿ, ಶರಣು ಹೀರಾಪುರ, ಸುಧೀರ್ ಟಂಕಸಾಲಿ ನಾಯಕೋಡಿ ದೀಪಕ ಪಟವರ್ಧನ್ R T ಕುಲಕರ್ಣಿ ಸರಾಫ್ ವಿವೇಕ ಕುಲಕರ್ಣಿ ಹಾಗೂ ಡಾ.ಕೃಷ್ಣ ಅಗರಖೇಡ ಮುಂತಾದವರು ಭೈರಪ್ಪನವರ ವಿವಿಧ ಕಾದಂಬರಿಗಳ ಬಗ್ಗೆ ಮಾತನಾಡಿದರು.
ನಿವೃತ್ತ ಪ್ರಾಂಶುಪಾಲ G R ಕುಲಕರ್ಣಿ ಮಾತನಾಡಿದರು. ಅಭಾಸಾಪ ಜಿಲ್ಲಾ ಅಧ್ಯಕ್ಷ ನಾರಾಯಣ ಬಾಬಾನಗರ ಮಾತನಾಡುತ್ತ, ಒಂದು ಕಾದಂಬರಿ ಬರೆಯುವ ಪೂರ್ವತಯಾರಿಯೇ ಒಂದು ಪುಸ್ತಕವಾಗುವ ಹಾಗೆ ಬರೆಯಬಹುದು. ಇದು ದಿ.ಭೈರಪ್ಪನವರ ಕೃತಿಗಳ ವೈಶಿಷ್ಟ್ಯ ಎಂದರು.
ಶ್ರೀರಂಗ ಕುಲಕರ್ಣಿ ನಿರೂಪಿಸಿದರು.
ವಿವೇಕ ಕುಲಕರ್ಣಿ , ಶ್ರೀರಂಗ ಪುರಾಣಿಕ, ಅನಿಲ ಬಳ್ಳುಂಡಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

