ಉದಯರಶ್ಮಿ ದಿನಪತ್ರಿಕೆ
ಎಚ್.ಡಿ.ಕೋಟೆ: ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ಇಂದು ಸಿಲಿಕಾನ್ ಸಿಟಿ, ಉದ್ಯಾನ ನಗರಿಯಾಗಿ, ಕರ್ನಾಟಕದ ರಾಜಧಾನಿ ಜೊತೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಸಿದ್ದಿ ಪಡೆದು ಇಡೀ ದೇಶವೆ ಬೆಂಗಳೂರು ಕಡೆ ತಿರುಗುವಂತೆ ಭದ್ರ ಬುನಾದಿ ಹಾಕಿ ಕೊಟ್ಟಿರುವುದಕ್ಕೆ ಎಲ್ಲರೂ ಹೆಮ್ಮೆ ಪಡುವಂತಾಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜನೆ ಮಾಡಿದ ನಾಡಪ್ರಭು ಕೆಂಪೇಗೌಡ ಅವರ 517ನೇ ಜಯಂತಿಯ ಕಾರ್ಯಕ್ರಮದಲ್ಲಿ ನಾಡಪ್ರಭು ಕೆಂಪೇಗೌಡ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಬೆಂಗಳೂರು ನಗರದಲ್ಲಿ ಸುಮಾರು ಒಂದುವರೆ ಕೋಟಿ ಜನಸಂಖ್ಯೆ ಇದೆ. ಹಳ್ಳಿಯಿಂದ ಬೆಂಗಳೂರಿಗೆ ಹೋದವರು ಉದ್ಯೋಗ ಪಡೆದು ಉತ್ತಮ ಜೀವನವನ್ನು ಮಾಡಬಹುದು. ನಮ್ಮ ತಂದೆ ದಿ. ಚಿಕ್ಕಮಾದು ಅವರು ಶಾಸಕರಾಗಲು ಒಕ್ಕಲಿಗ ಸಮುದಾಯ ಪ್ರಮುಖ ಕಾರಣ. ನಾನು ತಾಲೂಕಿನಲ್ಲಿ ಎಂದಿಗೂ ರಾಜಕಾರಣ ಮಾಡುತ್ತಿಲ್ಲ ಬದಲಾಗಿ ಜನಸೇವೆ ಮಾಡುತ್ತಿದ್ದೇನೆ. ಒಕ್ಕಲಿಗ ಸಮುದಾಯದ ನಾಯಕರು ವಿಧಾನಸೌಧ, ಸುವರ್ಣ ಸೌಧವನ್ನು ಕಟ್ಟಿದವರು. ತಾಲೂಕಿನ ಬಹುಮುಖ್ಯ ಬೇಡಿಕೆಯಾದ ಕೆಂಪೇಗೌಡರ ಭವನವನ್ನು ನಿರ್ಮಿಸಲು ಈಗಾಗಲೇ 32 ಕುಂಟೆ ಜಾಗವನ್ನು ಸಂತೆಮಾಳದಲ್ಲಿ ಕೂಡುವುದಾಗಿ ಹೇಳಿದ್ದೆ. ಆದರೆ ಡಾಕ್ಯುಮೆಂಟ್ ಸಮಸ್ಯೆಗಳು ಇದ್ದು ಬೇರೆ ಸೂಕ್ತವಾದ ಸ್ಥಳದಲ್ಲಿ ಜಾಗವನ್ನು ಮಂಜೂರು ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು..
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹರೀಶ್ ಗೌಡ ಮಾತನಾಡಿ, ಕೆಂಪೇಗೌಡರು ಒಂದು ಜನಾಂಗಕ್ಕೆ ಸೀಮಿತವಾದವರಲ್ಲ. ಅವರು ಸರ್ವ ಜನಾಂಗದ ನಾಯಕ ಎಂದರು.
ನಾಡಪ್ರಭು ಕೆಂಪೇಗೌಡರ ಹುಟ್ಟು ಜೀವನ ಸಾಧನೆಯ ಬಗ್ಗೆ ಪ್ರಾಧ್ಯಾಪಕ ಎಸ್.ಪಿ. ಪ್ರಕಾಶ್ ವಿಚಾರ ಮಂಡಿಸಿದರು.
ತಹಶೀಲ್ದಾರ್ ಶ್ರೀನಿವಾಸ್, ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್, ಇಓ ರವಿಚಂದ್ರ, ಮೈಮುಲ್ ಮಾಜಿ ಅಧ್ಯಕ್ಷ ಕೆ. ಈರೇಗೌಡ, ಕೃಷ್ಣೆಗೌಡ, ಶಂಬೇಗೌಡ, ಪ್ರಕಾಶ್, ಭಾಸ್ಕರ್, ಜೆಡಿಎಸ್ ತಾಲೂಕು ಅಧ್ಯಕ್ಷ ರಾಜೇಂದ್ರ, ಸುರೇಂದ್ರೇಗೌಡ, ನಟರಾಜು, ಬಾಲಕೃಷ್ಣ, ನಟರಾಜು, ಸೋಮಣ್ಣ, ಪುಟ್ಟೇಗೌಡ, ಶಿವರಾಜ್, ಮಾದೇಗೌಡ, ದೇವೇಗೌಡ, ರವಿ, ಗಣೇಶ್, ಪ್ರಕಾಶ್ ಗೆಂಡತ್ತೂರು, ಬೈರೇಗೌಡ, ತಮ್ಮಣ್ಣ, ನಾಗರಾಜ್, ಮಹೇಶ್, ನಾಗರಾಜ್, ವೇಣು, ಲೋಕೇಶ್, ಮಹದೇವು, ಗಿರಿ, ಜಯರಾಂ, ಮಹದೇವು, ಸತೀಶ್, ಕೃಷ್ಣೇಗೌಡ, ಚಂದ್ರೇಗೌಡ, ಮಹೇಂದ್ರ, ಚಲುವರಾಜು, ಶಿಕ್ಷಕಿ ರೂಪ, ಶಿವಯ್ಯ, ಶಿವಕುಮಾರ್, ಸೇರಿದಂತೆ ಒಕ್ಕಲಿಗ ಸಮುದಾಯದ ಮುಖಂಡರು ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

