ಇಂದು ಪುರಾಣ ಮಂಗಲ-ಉಡಿತುಂಬುವ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರ ನಗರದ ಜೋರಾಪೂರ ಪೇಠದ ಶ್ರೀ ಶಕ್ತಿ ತರುಣ ಸಂಘದ 50 ನೇ ವರ್ಷದ ಸುವರ್ಣ ಮಹೋತ್ಸವ ಅಂಗವಾಗಿ ವಿವಿಧ ಧಾಮಿ೯ಕ ಕಾರ್ಯಕ್ರಮಗಳು ಅದ್ದೂರಿಯಾಗಿ ಸಂಭ್ರಮ, ಸಡಗರದಿಂದ ಜರುಗಿವೆ.
ಹಲ ಧಾಮಿ೯ಕ ಕೈಂಕರ್ಯಗಳು ಕಳೆದ 22 ರಿಂದ ವೈಭವೋಪೇತವಾಗಿ ಜರುಗುತ್ತಿವೆ.ಈಗ 27 ರಂದು ಶನಿವಾರ ಶ್ರೀ ಶಕ್ತಿ ತರುಣ ಸಂಘದ ಸುವರ್ಣ ಮಹೋತ್ಸವ ಪ್ರಯುಕ್ತ ಮುಂಜಾನೆ 11 ಗಂಟೆಗೆ ಅಂಬಾಭವಾನಿ ಶ್ರೀದೇವಿಯ ಪುರಾಣ ಮಂಗಲ ಹಾಗೂ ಮಧ್ಯಾಹ್ನ 1 ಗಂಟೆಗೆ ಸುಮಂಗಲೆಯರ ಉಡಿತುಂಬುವ ಕಾರ್ಯಕ್ರಮ ಮತ್ತು ಅನ್ನಪ್ರಸಾದ ಸೇರಿದಂತೆ ಸಂಜೆ 4 ಗಂಟೆಗೆ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ನಡೆಯಲಿವೆ.
ಬಸವನ ಬಾಗೇವಾಡಿ ಸಂಸ್ಥಾನ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜರುಗುವ ಈ ಕಾರ್ಯಕ್ರಮದಲ್ಲಿ ಶ್ರೀ ಶಕ್ತಿ ತರುಣ ಸಂಘದ ಅಧ್ಯಕ್ಷ ಅಶೋಕ ಶಿರೋಳಕರ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವ ಎಂ.ಬಿ.ಪಾಟೀಲ, ಶಾಸಕ ಬಸನಗೌಡ ಪಾಟೀಲ (ಯತ್ನಾಳ), ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅಗಮಿಸಲಿದ್ದಾರೆ.ತಡವಲಗಾದ ಶಿವಾನಂದ ಹಿರೇಮಠ ಶಾಸ್ತ್ರೀಗಳು ಪ್ರವಚನ ನೀಡಲಿದ್ದಾರೆ. ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಸದ್ಭಕ್ತರು ಪಾಲ್ಗೊಳ್ಳಬೇಕೆಂದು ಶ್ರೀ ಶಕ್ತಿ ತರುಣ ಸಂಘ ಕೋರಿದೆ.
