ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಲೈನ್‌ಮ್ಯಾನ್ ನಿರ್ಲಕ್ಷ್ಯದಿಂದ ರೈತ ಬಲಿಯಾದ ದಾರುಣ ಘಟನೆ ಅಫಜಲಪುರ ತಾಲ್ಲೂಕಿನ ಅಳ್ಳಗಿ (ಕೆ) ಗ್ರಾಮದಲ್ಲಿ ನಡೆದಿದೆ.
ವಿದ್ಯುತ್ ತಂತಿ ತಗುಲಿ ರೈತ ಬಸಪ್ಪ ಮಹಾದೇವಪ್ಪ ಪೂಜಾರಿ ಅವರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.
ಘಟನೆಗೆ ಹೊಣೆಗಾರರಾದ ಲೈನ್‌ಮ್ಯಾನ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಮೃತರ ಕುಟುಂಬಕ್ಕೆ ಸಮರ್ಪಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಈ ವೇಳೆ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.
ಸುಮಾರು 5 ಗಂಟೆಗಳ ಕೆಂತಲು ಹೆಚ್ಚು ಕಾಲ ರಸ್ತೆಗೆತಗೊಳಿಸಿರುವುದರಿಂದ ಸಂಚಾರ ಅಸ್ತವ್ಯಸ್ತಗೊಂಡಿತ್ತು, ಮಹಾರಾಷ್ಟ್ರದಿಂದ ಗಾಣಗಾಪುರ ತೆರಳುವ ಯಾತ್ರಿಕರಿಗೆ ಹಾಗೂ ಸೊಲ್ಲಾಪುರ ಕಲಬುರಗಿ ವಿಜಯಪುರ ಮುಂತಾದ ನಗರಗಳಿಗೆ ತೆರಳುವ ಎಲ್ಲಾ ಪ್ರಯಾಣಿಕರಿಗೆ ತೊಂದರೆ ಉಂಟಾಯಿತು.

