ಉದಯರಶ್ಮಿ ದಿನಪತ್ರಿಕೆ
ಇಂಡಿ: ಕೃಷಿ ವಿಜ್ಞಾನ ಕೇಂದ್ರ ಇಂಡಿ, ವಿಜಯಪುರದ ಕೃಷಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪುರಸಭೆಯ ಆರೋಗ್ಯ ನಿರೀಕ್ಷಕರು ಹಾಗೂ ಪೌರ ಕಾರ್ಮಿಕರ ಮತ್ತು ನೌಕರರ ಸಹಯೋಗದೊಂದಿಗೆ “ಸ್ವಚ್ಛತೆಯೇ ಸೇವೆ” ಅಭಿಯಾನದ ರ‍್ಯಾಲಿ ಹಾಗೂ ಮಾನವ ಸರಪರಳಿಯನ್ನು ಆಯೋಜಿಸಿಲಾಗಿತ್ತು.
ಇಂಡಿಯ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಶಿವಶಂಕರಮೂರ್ತಿ ಎಂ. ಅವರ ನೇತೃತ್ವದಲ್ಲಿ, ರ‍್ಯಾಲಿಯು ಕೆ.ವಿ.ಕೆ ಕಚೇರಿಯಿಂದ ಪ್ರಾರಂಭವಾಗಿ ಬಸವೇಶ್ವರ ವೃತ್ತದವರೆಗೆ ಸಾಗಿತು. ಕೃಷಿ ಮಹಾವಿದ್ಯಾಲಯ ವಿಜಯಪುರದ ಬಿ.ಎಸ್ಸ.ಸಿ. ಕೃಷಿ ವಿದ್ಯಾರ್ಥಿಗಳು ಮತ್ತು ಕೆ.ವಿ.ಕೆ ಸಿಬ್ಬಂದಿ, ಶುದ್ಧ ಮತ್ತು ಆರೋಗ್ಯಕರ ಪರಿಸರದ ಬಗ್ಗೆ ತಮ್ಮ ಸಾಮೂಹಿಕ ಬದ್ಧತೆಯನ್ನು ಸಂಕೇತಿಸಲು ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿಯನ್ನು ರಚಿಸಿದರು.
ಡಾ. ಪ್ರಸಾದ್ ಎಂ. ಜಿ. ಸಂಘಟಿಸಿದ್ದರು. ಡಾ. ಪ್ರಕಾಶ್ , ಡಾ. ಪ್ರೇಮಚಂದ್ ಡಾ. ವೀಣಾ ಚಂದಾವರಿ ಮತ್ತು ಡಾ. ಬಾಲಾಜಿ ನಾಯಕ್ ಭಾಗವಹಿಸಿದ್ದರು.
ವಿಜಯಪುರದ ಕೃಷಿ ವಿಜ್ಞಾನ ಕಾಲೇಜಿನ ಸಹಯೋಗವನ್ನು ರಾವೆ ಸಂಯೋಜಕರಾದ ಡಾ. ಎಂ. ವೈ. ತೆಗ್ಗಿ ಮತ್ತು ಡಾ. ಸಿದ್ಧರಾಮ ಪಾಟೀಲ ಹಾಗೂ ಕೃಷಿ ಮಹಾವಿದ್ಯಾಲಯ ವಿಜಯಪುರದ ವಿದ್ಯಾರ್ಥಿಗಳು ಸುಗಮಗೊಳಿಸಿದರು. ಈ ಕಾರ್ಯಕ್ರಮವು ಕೃಷಿ ಪದ್ಧತಿಗಳನ್ನು ಮುಂದುವರಿಸುವುದಲ್ಲದೆ, “ಸ್ವಚ್ಛತೆಯೇ ಸೇವೆ” ಅಭಿಯಾನದಂತಹ ಉಪಕ್ರಮಗಳ ಮೂಲಕ ಸಾಮಾಜಿಕ ಜವಾಬ್ದಾರಿ ಮತ್ತು ಸಮುದಾಯದ ಯೋಗಕ್ಷೇಮವನ್ನು ಉತ್ತೇಜಿಸಲು ಐ.ಸಿ.ಎ.ಆರ್-ಕೆವಿಕೆ, ಇಂಡಿಯ ನಡೆಯುತ್ತಿರುವ ಪ್ರಯತ್ನಗಳನ್ನು ಒತ್ತಿ ಹೇಳಿತು.

