ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಕ್ರೀಢೆ ಸಹಕಾರಿಯಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮಿಷ್ಠದ ಕ್ರೀಢೆಗಳಲ್ಲಿ ಭಾಗವಹಿಸುವ ಮೂಲಕ ಆರೊಗ್ಯವಂತರಾಗಬೇಕೆಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಗ್ರಾಮದ ಶ್ರೀ ಪ್ರಭುಲಿಂಗೇಶ್ವರ ಇಂಟರ್‌ನ್ಯಾಷನಲ್ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ೧೪ರ ವಯೋಮಿತಿಯ ಕ್ರೀಢಾಕೂಟದಲ್ಲಿ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ತಾಲೂಕಾ ಮಟ್ಟದಲ್ಲಿ ಜಯಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿನಿಯರನ್ನು ಸತ್ಕರಿಸಿ, ಅಭಿನಂದಿಸಿ ಮಾತನಾಡಿದ ಅವರು ಕ್ರೀಢೆಗಳಲ್ಲಿ ವಿಜಯಿಯಾಗುವುದು ಎಷ್ಟು ಮುಖ್ಯವೋ ಅದರಲ್ಲಿ ಭಾಗವಹಿಸುವುದು ಅಷ್ಟೇ ಮುಖ್ಯ, ಕ್ರೀಢೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳ ಶಾರಿರೀಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.
ಸಂಸ್ಥೆಯ ಕಾರ್ಯದರ್ಶೀ ವಿದ್ಯಾಧರ ಸವದಿ, ಹಿಪೊಕ್ಯಾಂಪಸ್ ನಿರ್ದೆಶಕ ರಾಹುಲ್, ಪ್ರಾಚಾರ್ಯ ರಮೇಶ ಪೂಜಾರಿ, ದೈಹಿಕ ಶಿಕ್ಷಕ ಸುನಿಲ್ ಗುಬಚಿ, ಕಬ್ಬಡ್ಡಿ ತರಬೇತುದಾರ ಭಿಮಾನಂದ ಒಂಟಗೂಡಿ, ಶ್ರೀಧರ ಹಿಡಕಲ್, ಸಂಯೋಜಕ ಶ್ರೀಶೈಲ ಚಿಕ್ಕಣ್ಣವರ, ಆಡಳಿತ ಮಂಡಳಿಯ ಗಿರೀಶ ಕಂಬಿ, ರಮೇಶ ಪಾಟೀಲ, ಶ್ರೀಶೈಲ ಅಳ್ಳಿಗಿಡದ, ನಿಂಗಣ್ಣ ತೇಲಿ ಶಿವಪ್ಪ ಮಧುರಖಂಡಿ, ವಿಜಯ ಬೆಂಡವಾಡ ಹಾಗೂ ಶಿಕ್ಷಕವೃಂದ ಉಪಸ್ಥಿತರಿದ್ದರು.

