ನವರಾತ್ರಿ ಉತ್ಸವದಲ್ಲಿ ಪ್ರೊ. ಎಂ.ಎಸ್.ಖೊದ್ನಾಪೂರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಹಂ ಮೇತಿ’ ಎಂಬಂತೆ ಎಲ್ಲವು ನಾನು, ನನ್ನದು, ನನ್ನಿಂದ ಎಂಬ ಮಮಕಾರ-ಅಹಂಭಾವ ತೊಲಗಲಿ. ‘ಪರೋಪಕಾರಂ ಇದಂ ಶರೀರಂ’ ಎಂಬ ಶ್ಲೋಕದಂತೆ ಜೀವನ ಇರುವುದು ನನಗಾಗಿ ಅಷ್ಟೇ ಅಲ್ಲದೇ ಈ ಸಮಾಜದ ಅಭ್ಯುದಯಕ್ಕಾಗಿ ಮತ್ತು ಸಹಾಯ ಬೇಡಿ ಬಂದವರಿಗೆ ಸಾಧ್ಯವಾದಷ್ಟು ಉಪಕಾರ ಮಾಡುವ ಮನೋಭಾವವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು ಎಂದು ಪ್ರೊ. ಎಂ.ಎಸ್.ಖೊದ್ನಾಪೂರ ಅಭಿಪ್ರಾಯಪಟ್ಟರು.
ಅವರು ನಗರದ ಹವಾಲ್ದಾರ ಕಾಲನಿಯ ಲಕ್ಷ್ಮಿ ದೇವಸ್ಥಾನದಲ್ಲಿ ನಡೆದ ನವರಾತ್ರಿ ಉತ್ಸವದಲ್ಲಿ ”ಶರಣರ ವಚನಗಳಲ್ಲಿ ಜೀವನ-ಮೌಲ್ಯಗಳು” ವಿಷಯ ಕುರಿತು ಆಯೋಜಿಸಿದ ಉಪನ್ಯಾಸದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಇಂದಿನ ಸಮೂಹ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವ ಮತ್ತು ಮಿತಿಮೀರಿದ ಬಳಕೆಯಿಂದ ಸಂಸ್ಕೃತಿ-ಸಂಸ್ಕಾರ, ಜೀವನ-ಮೌಲ್ಯಗಳು ಅಧಃಪತನಗೊಳ್ಳುತ್ತಿದೆ. ಮಾನವ ಕೇವಲ ಹಣ ಗಳಿಕೆಯತ್ತ ತನ್ನ ಜೀವನವನ್ನು ಸಾಗಿಸುತ್ತಾ, ಸಂಸಾರವೆಂಬ ಪ್ರಾಪಂಚಿಕ ಜಗತ್ತಿನಲ್ಲಿ ಮುಳುಗಿ ಹೋಗಿದ್ದಾನೆ. ಮನದಲ್ಲಿರುವ ಅಷ್ಟ ಅರಿಷಡ್ವರ್ಗಗಳಾದ ಮದ. ಮೋಹ. ಮತ್ಸರ, ಲೋಭ, ಮಮಕಾರ ಮತ್ತು ಮನದಲ್ಲಿ ಕಲ್ಮಶ ಭಾವನೆಗಳನ್ನು ತೊಲಗಿಸಿ, ಜೀವನದಲ್ಲಿ ಸಾಕ್ಷಾತ್ಕಾರವನ್ನು ಪಡೆಯಬೇಕು ಎಂದು ಖೊದ್ನಾಪೂರ ಹೇಳಿದರು.
ನಿವೃತ್ತ ಸೇನಾನಿ ರಾವಸಾಹೇಬ ಮೆಣಸಂಗಿ ಹಾಗೂ ಪ್ರೇಮಾ ಅಕ್ಕಿ ವೇದಿಕೆಯ ಮೇಲಿದ್ದರು.
ಕಾರ್ಯಕ್ರಮದಲ್ಲಿ ವಿಠ್ಠಲ ಜಗತಾಪ, ಬಿ.ಡಿ.ಕಡಕೋಳ, ಪ್ರೊ. ಬಸವರಾಜ ಕುಂಬಾರ, ರಾಜಶೇಖರ ಉಮರಾಣಿ, ನಿಂಗಪ್ಪ ನಿಂಬಾಳಕರ, ಗುರುಬಸಯ್ಯ ಹಿರೇಮಠ, ಸಾಬು ಅಗ್ರಾಣಿ, ಲಕ್ಷ್ಮಿ ದೇವಸ್ಥಾನದ ಅಧ್ಯಕ್ಷೆ ಶಾಂತಾ ಕಪಾಳಿ, ಉಪಾಧ್ಯಕ್ಷೆ ಶಕುಂತಲಾ ಅಂಕಲಗಿ, ಕಾರ್ಯದರ್ಶಿ ಶೋಭಾ ಚವ್ಹಾಣ, ಜ್ಯೋತಿ ಜೊಳ್ಳೆ, ಸಾವಿತ್ರಿ ಅಗ್ರಾಣಿ, ಜ್ಯೋತಿ ಹಿರೇಮಠ, ಭವಾನಿ ಜಾಧವ, ಸರೋಜಾ ಬಾಗಲಕೋಟ, ಭಾರತಿ ಕಿಚಡಿ ಇನ್ನಿತರರು ಉಪಸ್ಥಿತರಿದ್ದರು.
ಸರೋಜಾ ಬಾಗಲಕೋಟ ಪ್ರಾರ್ಥಿಸಿದರು. ಗುರುಬಸಯ್ಯ ಹಿರೇಮಠ ನಿರೂಪಿಸಿದರು,

