ಕೃಷಿ ಇಲಾಖೆಯ ಯಡವಟ್ಟು | ರೈತ ಶೀತಲ ಮುತ್ತಿನ ಅವರ ೨೦ ಎಕರೆ ನೀರಿನಲ್ಲಿ ನಿಂತ ಬೆಳೆ | ಪರಿಹಾರದ ನಿರೀಕ್ಷೆಯಲ್ಲಿ ರೈತ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಮಹಾರಾಷ್ಟ್ರದ ಗಡಿಯಲ್ಲಿರುವ ಸೊಡ್ಡಿರಸ್ತೆಯಲ್ಲಿಯ ರೈತ ಶೀತಲ ಮುತ್ತಿನ ಇವರ ಜಮೀನಿನಲ್ಲಿರುವ ಫಲವತ್ತಾದ ಕರಿಮಣ್ಣು ಮಳೆಯ ರಭಸದ ನೀರಿಗೆ ಕೊಚ್ಚಿಕೊಂಡು ಹೋಗಿದೆ. ಸೊಡ್ಡಿ ಗ್ರಾಮದ ಹಳ್ಳದ ಮತ್ತು ಇನ್ನಿತರ ಜಮೀನುಗಳಲ್ಲಿಯ ನೀರು ಹರಿದು ಬಂದು ಬೆಳೆಗಳು ಸರ್ವನಾಶವಾಗಿದೆ ಇದರಿಂದ ರೈತ ಕಂಗಾಲಾಗಿರುವನು.
ಕೃಷಿ ಇಲಾಖೆಯ ಎಡವಟ್ಟು: ಇವರ ಜಮೀನಿನ ಹಿಂದೆ ಕೃಷಿ ಇಲಾಖೆಯವರು ಅವೈಜ್ಞಾನಿಕವಾಗಿ ಚಿಕ್ಕಡ್ಯಾಮ ನಿರ್ಮಿಸಿರುವರು. ಅದಕ್ಕೆ ಮಳೆಯ ನೀರು ಸರಾಗವಾಗಿ ಹೋಗಲು ರಂಧ್ರಗಳು ಬಿಟ್ಟಿಲ್ಲ ಹಿಗಾಗಿ ನೀರು ಅದರ ಮೇಲೆ ಹರಿದು ಬಂದು ಜಮೀನು ಒಂದು ನದಿಯಂತೆ ಕಾಣಿಸುತ್ತದೆ ಎಂದು ರೈತ ಶೀತಲ ಮುತ್ತಿನ ಆರೋಪಿಸಿದ್ದಾರೆ.
ಸಾವಯವ ಪದ್ದತಿಯನ್ನು ಕೃಷಿಯಲ್ಲಿ ಅಳವಡಿಸಿಕೊಂಡು ರೈತ ಫಲವತ್ತಾದ ಬೆಳೆಯನ್ನು ಬೆಳೆಯುತ್ತಿದ್ದ. ಈಗ ಎಲ್ಲವು ಹಾಳಾಗಿ ಮತ್ತಷ್ಟು ಹಾನಿಯಾಗಿದೆ ಈ ಹಾನಿ ಹೇಗೆ ನಿಭಾಯಿಸುವದು ಎಂಬ ಚಿಂತೆ ಕಾಡುತ್ತಿದೆ ಎಂದರು. ಇದರಿಂದ ಫಲವತ್ತಾದ ಮಣ್ಣು ಮಾಯವಾಗಿದೆ ಉತ್ತರಿಮಳೆಯ ರಭಸಕ್ಕೆ ರೈತನ ಜಮೀನಿನಲ್ಲಿರುವ ಸುಮಾರು ಒಂದು ಸಾವಿರ ಟಿಪ್ಪರ ಫಲವತ್ತಾದ ಕರಿಮಣ್ಣು ಕೊಚ್ಚಿಕೊಂಡುಹೊಗಿದೆ ಆಮಣ್ಣಿನಿಂದಲೇ ರೈತರು ಲಾಭದಾಯಕ ಬೆಳೆಬೆಳೆದು ಮಾದರಿ ರೈತನಾಗಿದ್ದನು. ಬೆಲೆಬಾಳುವ ಮಣ್ಣು ಬಂಗಾರಕಿಂತ ಹೆಚ್ಚು ಎಂದು ರೈತ ಶೀತಲ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.
ಸರಕಾರವು ಹಾನಿಯ ಸಮೀಕ್ಷೆಯನ್ನು ಸಮರ್ಪಕವಾಗಿ ಮಾಡಿ ತುರ್ತು ಪರಿಹಾರ ನೀಡಬೇಕು ಮಳೆಯಿಂದ ವಿಪರೀತ ಹಾನಿಯಾಗಿದೆ ಮೇಲಾಧಿಕಾರಿಗಳು ಸರಕಾರ ರೈತರ ನೆರವಿಗೆ ಬರಬೇಕೆಂದು ರೈತ ಶೀತಲ ಮುತ್ತಿನ ಮನವಿಮಾಡಿರುವ
೨೦ ಎಕರೆ ಬೆಳೆನಾಶ
“ನೀರಿನ ರಭಸಕ್ಕೆ ೨೦ ಎಕರೆ ತೊಗರಿ, ಮೆಕ್ಕೆಜೋಳ ಇನ್ನಿತರ ಮುಂಗಾರು ಬೆಳೆಗಳು ಜಲಾವೃತಗೊಂಡಿವೆ. ಬೆಳೆಗಳು ಕಾಣಿಸದಂತೆ ನೀರು ಬಂದುಬಿಟ್ಟಿದೆ. ಮುಂದೆ ಈ ನೀರು ಎಲ್ಲ ಜಮೀನುಗಳು ಮುಖಾಂತರ ಚಡಚಣ ಕೆರೆಗೆ ಸಂಗಮವಾಗುವದು. ವಿಪರೀತ ಮಳೆಗೆ ಜಮೀನು ಹಾಳಾಗಿದ್ದು ನೀರಿನಲ್ಲಿ ಬೆಳೆನಿಂತಿವೆ. ಅಲ್ಲದೆ ನೀರಿನ ರಭಸಕ್ಕೆ ಫಲವತ್ತಾದ ಮಣ್ಣು ಕೊಚ್ಚಿಹೋಗಿದೆ. ಅವೈಜ್ಞಾನಿಕವಾಗಿ ನಿರ್ಮಿಸಿದ ಚಿಕ್ಕಡ್ಯಾಮ ಜಮೀನಿಗೆ ನೀರು ಬರಲು ಕಾರಣವಾಗಿದೆ. ಸರಕಾರ ಸಮೀಕ್ಷೆ ಕೈಗೊಂಡು ಸೂಕ್ತ ಪರಿಹಾರ ನೀಡಿ ರೈತನ ಬದುಕು ಹಸನಾಗಿಸಬೇಕೆಂದು ಮನವಿ”
*- ಶೀತಲ ಮುತ್ತಿನ
ರೈತ, ಚಡಚಣ

