ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ಮುಸ್ಲಿಂ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಮೊಹರಂ ಹಬ್ಬ ಒಂದಾಗಿದ್ದು ರಂಜಾನ್ ನಂತರ ಎರಡನೇ ಪವಿತ್ರ ತಿಂಗಳೆಂದು ನಂಬಲಾಗಿದೆ ಯುದ್ದ ಮಾಡುವದನ್ನು ಅಲ್ಲಾನು ನಿಷೇದಿಸಿದ ಸಮಯವೇ ಮೊಹರಂ ಎಂದು ನಂಬಲಾಗಿದೆ.
ಶುಕ್ರವಾರರಂದು ಪಟ್ಟಣದಲ್ಲಿ ಮೊಹರಂ ಹಬ್ಬ ಕುರಿತು ವಿವಿದ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾದ ದೇವರ ದಫನ್ ಕಾರ್ಯಕ್ರಮವು ಅಸಂಖ್ಯಾತ ಭಕ್ತರ ಜನದಟ್ಟಣೆಯಲ್ಲಿ ಜರುಗಿತಲ್ಲದೇ ಬಾವೈಕ್ಯತೆಯೊಂದಿಗೆ ಜರುಗಿದ ಈ ಹಬ್ಬ ಕುರಿತು ಪ್ರತಿಷ್ಠಾಪಿಸಲಾದ ದೇವರಿಗೆ ಎಡೆ, ಕಾಯಿ, ಕರ್ಪೂರ, ಲೋಬಾನ, ಸಕ್ಕರೆಯನ್ನು ಸಹ ಈ ಹಿಂದಿನಿಂದಲೂ ಸಾಗಿಬಂದ ಪದ್ದತಿಯಂತೆ ಹಿಂದೂ ಜನಾಂಗದವರೂ ದೇವರಿಗೆ ನೀಡಿ ಭಕ್ತಿಭಾವ ಮೆರೆದರು.
ಪಟ್ಟಣದ ಮಕಾಂದಾರ ಗಲ್ಲಿ, ಬೇಪಾರಿ ಗಲ್ಲಿ, ಮಾಲಗಲ್ಲಿ, ಬಿಸ್ತಿ ಗಲ್ಲಿ, ಪಂಚೆಸೈಯದ್ ದರ್ಗಾ, ದವಲ್ ಮಲೀಕ್ ದರ್ಗಾ, ಮಿಲತ್ ನಗರ, ಆಶ್ರಯ ಕಾಲನಿ ಒಳಗೊಂಡು ಸುಮಾರು ೬ ಬಡಾವಣೆಗಳಲ್ಲಿ ಮೊಹರಂ ದೇವರ ಪ್ರತಿಷ್ಠಾಪನೆ ಮಾಡಲಾಗಿತ್ತು.
ತಾಳಿಕೋಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ೬೪ ಗ್ರಾಮಗಳನ್ನೊಳಗೊಂಡು ೨೭೧ ಪಂಜಗಳು, ೫೬ ಡೋಲಿಗಳು, ಅಲ್ಲದೇ ತಾಳಿಕೋಟೆಯಲ್ಲಿ ೬ ಬಡಾವಣೆಗಳಲ್ಲಿ ದೇವರು ಪ್ರತಿಷ್ಠಾಪಿಸಲಾಗಿತ್ತು.
ಒಟ್ಟಿನಲ್ಲಿ ಮೊಹರಂ ಹಬ್ಬವು ಭಾವೈಕ್ಯತೆಯೊಂದಿಗೆ ಶಾಂತ ರೀತಿಯಲ್ಲಿ ಜರುಗಿತು.
ತಾಳಿಕೋಟೆಯಲ್ಲಿ ಕತ್ರಿ ಬಜಾರ್ ಪಂಚೆಸೈಯದ್ ದರ್ಗಾ ಮುಂಭಾಗದಲ್ಲಿ ಜನದಟ್ಟಣೆಯು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಮೊಹರಂ ಹಬ್ಬದಲ್ಲಿ ಪ್ರತಿಷ್ಠಾಪಿಸಲಾದ ದೇವರನ್ನು ನೋಡಿ ಕಣ್ತುಂಬಿಕೊಂಡರು.
ಈ ಮೊಹರಂ ಹಬ್ಬ ಕುರಿತು ಆಯ್.ಆರ್.ಬಿ. ಪೋಲೀಸ್ ತುಕಡಿಯನ್ನು ನಿಯೋಜಿಸಲಾಗಿತ್ತು. ಡಿಎಸ್‌ಪಿ ನಂದಾರೆಡ್ಡಿ, ಸಿಪಿಐ ಮೊಹ್ಮದಮೊಸಿನ್ ಇವರ ಮಾರ್ಗದರ್ಶನದೊಂದಿಗೆ ಪಿಎಸ್‌ಐ ಜ್ಯೋತಿ ಖೋತ್, ಅಪರಾಧ ವಿಭಾಗ ಪಿಎಸ್‌ಐ ಪಡಶೆಟ್ಟಿ ತಮ್ಮ ಸಿಬ್ಬಂದಿಗಳೊಂದಿಗೆ ಬಂದೋಬಸ್ತ್ ಏರ್ಪಡಿಸಿದ್ದರು.

