ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಭೀಮಾ ನದಿಯ ಪ್ರವಾಹಕ್ಕೆ ಒಳಗಾಗಿರುವ ಗ್ರಾಮಗಳಿಗೆ ಅಧಿಕಾರಿಗಳು ಮೊಳಕಾಲು ಉದ್ಧದ ನೀರಿನಲ್ಲಿ ತೆವಳುತ್ತ ಸಾಗಿ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ
ಆಲಮೇಲ ತಾಲೂಕಿನ ದೇವಣಗಾಮ ಗ್ರಾಮದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂಜೀವಕುಮಾರ್ ದೊಡ್ಡಮನಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಎಂ ಕೆ ಪೂಜಾರಿ ಅವರು ಭೀಮಾ ನದಿಯ ಪ್ರವಾಹಕ್ಕೆ ಒಳಗಾಗಿರುವ ಶಂಬೇವಾಡಿ ಗ್ರಾಮದ ಮುಖ್ಯರಸ್ತೆಯ ಮೇಲೆ ಟೊಂಕದವರೆಗೆ ನೀರು ಬಂದಿದ್ದರೂ ಕೂಡ ಧೃತಿಗಡದೆ ಅದೇ ನೀರಲ್ಲಿ ತಮ್ಮ ಪ್ಯಾಂಟನ್ನು ಕಳಚಿ ಕೈಯಲ್ಲಿ ಹಿಡಿದುಕೊಂಡು ಸಾಗಿ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ ಶಂಭೇವಾಡ ಗ್ರಾಮದ ತೋಟದ ವಸ್ತಿಯಲ್ಲಿರುವ ಹಾಗೂ ಹಳೆ ಗ್ರಾಮದಲ್ಲಿರುವ ಎಲ್ಲಾ ಜನರಿಗೆ ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿ ನಂತರ ಅಗತ್ಯವಿದ್ದರೆ ಕಾಳಜಿ ಕೇಂದ್ರ ಕೂಡ ತೆರೆಯುವ ಮೂಲಕ ತಮ್ಮೊಂದಿಗೆ ಅಧಿಕಾರಿ ವರ್ಗ ಸದಾ ಸಹಾಯಕ್ಕೆ ಇರುತ್ತದೆ ಯಾವುದೇ ಸಂದರ್ಭದಲ್ಲಿ ತೊಂದರೆ ಉಂಟಾದಾಗ ನಮಗೆ ಫೋನ್ ಮೂಲಕ ತಿಳಿಸಿ ಎಂದು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ ಅಧಿಕಾರಿಗಳ ಈ ಕಾರ್ಯ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ
ಇದೇ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರ ಪ್ರತಿನಿಧಿ ಪುಂಡಲಿಕ ನಡುವಿನಕೆರಿ, ಯುವ ಮುಖಂಡ ಸಿದ್ದಾರ್ಥ ಮೇಲಿನಕೇರಿ, ಅಮರ ಅಳ್ಳಗಿ, ರಾಹುಲ್ ಅಣ್ಣನವರ್, ಮಲ್ಕಣ್ಣ ವಾಲಿಕಾರ ಇದ್ದರು

