ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಕಳೆದ ನಾಲ್ಕೈದು ದಿನಗಳಿಂದ ಏರು ಮಟ್ಟದಲ್ಲಿ ಸಾಗುತ್ತಿರುವ ಭೀಮಾನದಿಯ ಪ್ರವಾಹ ಪರಿಸ್ಥಿತಿ ಇಂದು ಮತ್ತಷ್ಟು ರುದ್ರ ರೂಪ ತಾಳಿದೆ
ಗುರುವಾರ ಬೆಳಿಗ್ಗೆಯಿಂದಲೇ ಏರುತ್ತಾ ಸಾಗಿರುವ ನೀರಿನ ಮಟ್ಟ ಸಾಯಂಕಾಲದವರೆಗೂ ಇರುತ್ತಲೇ ಇತ್ತು. ಇಂದು ನದಿಯ ರುದ್ರಾವತಾರ ಹೆಚ್ಚಾಗಿತ್ತು. ಎಲ್ಲೆಂದರಲ್ಲಿ ತಗ್ಗು ಪ್ರದೇಶಗಳಿಗೆ ನುಗುವ ಮೂಲಕ ಬೆಳೆಗಳಲ್ಲಿ ನುಗ್ಗಿ ಅವಾಂತರ ಸೃಷ್ಟಿಸಿದೆ ಗ್ರಾಮಗಳ ಅಂಚಿನಲ್ಲಿರುವ ಮನೆಗಳಲ್ಲಿ ನುಗ್ಗಿ ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ.
ಬುಧವಾರ ದಿವಸ 2 ಲಕ್ಷ 90 ಸಾವಿರ ಕ್ಯೂಸೆಕ್ಸ್ ಇದ್ದ ನೀರಿನ ಹರಿವಿನ ಪ್ರಮಾಣ ರಾತ್ರಿ ಇಡಿ ಏರು ಮಟ್ಟದಲ್ಲಿ ಸಾಗಿ ಗುರುವಾರ ಇಡೀ ದಿವಸ ಏರು ಮಟ್ಟದಲ್ಲಿಯೇ ಸಾಗಿದೆ
ಗುರುವಾರ ದಿವಸ ದೇವಣಗಾಂವ ಸಮೀಪದ ಸೊನ್ನ ಬ್ಯಾರೇಜ್ ನಲ್ಲಿ 3 ಲಕ್ಷ 50 ಸಾವಿರ ಒಳಹರಿವು ಮತ್ತು28 ಗೇಟ್ ಗಳ ಮೂಲಕ ಅಷ್ಟೇ ಪ್ರಮಾಣದ ಹೊರಹರಿವು ಇದೆ ಎಂದು ಅಫಜಲಪುರದ ಕೆಎನ್ಎನ್ಎಲ್ ಎ ಇ ಇ ಸಂತೋಷ ಕುಮಾರ ಸಜ್ಜನ ತಿಳಿಸಿದ್ದಾರೆ
ಕರ್ನಾಟಕದಲ್ಲಿ ಎರಡು ದಿನಗಳಿಂದ ಮಳೆಯ ಪ್ರಮಾಣ ತಗ್ಗಿದೆ ಮಹಾರಾಷ್ಟ್ರದಲ್ಲಿಯೂ ಕಡಿಮೆಯಾಗಿದೆ ಎಂಬ ಮಾಹಿತಿ ಇದೆ, ಆದ್ದರಿಂದ ನಾಳೆಯಿಂದ ನೀರು ಹರಿವಿನ ಪ್ರಮಾಣದಲ್ಲಿ ಸ್ವಲ್ಪ ಕಡಿಮೆಯಾಗಬಹುದು ಎಂದು ಅವರು ತಿಳಿಸಿದ್ದಾರೆ
ದಿನವಿಡೀ ಏರು ಮಟ್ಟದಲ್ಲಿ ಸಾಗಿದ್ದರಿಂದ ಗ್ರಾಮದ ಅಂಚಿನಲ್ಲಿರುವ ಮನೆಗಳ ಜನರು ತಮ್ಮ ತಮ್ಮ ಸಾಮಾನು ಸರಂಜಾಮುಗಳನ್ನು ಸುರಕ್ಷಿತ ಸ್ಥಳಗಳಿಗೆ ತೆಗೆದುಕೊಂಡು ಹೋಗುತ್ತಿರುವುದು ಕಂಡುಬಂದಿವೆ
ತಾರಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ನೀರು ತುಂಬಿರುವ ಪರಿಣಾಮ ಸಂಪೂರ್ಣ ನಡುಗಟ್ಟೇಯಾಗಿ ಮಾರ್ಪಡಾಆಗಿತ್ತು.
ಕಡ್ಲೆವಾಡ, ಶಂಬೆವಾಡ, ತಾವರಖೇಡ, ಬ್ಯಾಡಗಿಹಾಳ ಗ್ರಾಮಗಳ ಮುಖ್ಯರಸ್ತೆಯ ಮೇಲೆ ಬಹಳಷ್ಟು ನೀರು ನುಗ್ಗಿರುವುದರಿಂದ ಸಂಪರ್ಕ ಕಡಿತಗೊಂಡಿದೆ
ದೇವಣಗಾಂವ ಗ್ರಾಮದಲ್ಲಿ ಹನುಮಾನ್ ದೇವಸ್ಥಾನ, ಅಂಬಿಗರ ಚೌಡಯ್ಯ ದೇವಸ್ಥಾನ, ಶಾಂತೇಶ್ವರ ದೇವಸ್ಥಾನ ಸೇರಿದಂತೆ ಅನೇಕ ಮನೆಗಳು ನೀರಿನಲ್ಲಿ ಮುಳುಗಿವೆ.
ದೇವಣಗಾಂವ ಆಲಮೇಲ ರಸ್ತೆ ಸಂಪರ್ಕಿಸುವ ಮುಖ್ಯರಸ್ತೆಯ ಪಕ್ಕದಲ್ಲಿ ನೀರು ಎರಡು ಬದಿಗೆ ತುಂಬಿ ನಿಂತಿದ್ದು ಒಂದು ಅರ್ಧ ಅಡಿ ಎಷ್ಟು ನೀರು ಹೆಚ್ಚಾದರೆ ಸಾಕು ರಾಜ್ಯ ಹೆದ್ದಾರಿಯ ಕಲಬುರಗಿ ವಿಜಯಪುರ ಮುಖ್ಯ ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ.
ಕುಮಸಗಿ ಗ್ರಾಮದ ಅಂಚಿನಲ್ಲಿರುವ ಮನೆಗಳಿಗೆ ನೀರು ನುಗ್ಗಿವೆ.
ಫೋಟೋದ ವಸ್ತುಗಳಲ್ಲಿರುವ ಜನರ ಬದುಕು ಅಯೋಮಯವಾಗಿದೆ
ತಗ್ಗು ಹಾಗೂ ಹಳ್ಳ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ನೀರು ನುಗ್ಗಿ ಹತ್ತಿ ತೊಗರಿ ಕಬ್ಬು ಬೆಳೆಗಳು ನೀರಿನಲ್ಲಿ ನಿಂತಿವೆ.
ಭೀಮಾ ತೀರದ ಆಲಮೇಲ ತಾಲೂಕಿನ ಗ್ರಾಮಗಳಾದ ಕಡಣಿ,ಕುರುಬತಹಳ್ಳಿ ,ಮಡ್ನಳ್ಳಿ, ಬಗಲೂರ, ಚಿಕ್ಕಹಾವಳಗಿ, ಕಕ್ಕಳಮೇಲಿ, ಶಿರಸಗಿ, ಕುಳೆಕುಮಟಗಿ ಸೇರಿದಂತೆ ಅನೇಕ ಗ್ರಾಮಗಳ ಜನರ ಜಮೀನುಗಳಲ್ಲಿ ನೀರು ನುಗ್ಗಿದ್ದು ಬೆಳೆಗಳು ಆಹುತಿಯಾಗಿವೆ.
ಆಲಮೇಲ ತಹಶೀಲ್ದಾರ್ ಧನಪಾಲ ಶೆಟ್ಟಿ ಪ್ರವಾಪಿಡಿತ ಸ್ಥಳಗಳಿಗೆ ಭೇಟಿ ನೀಡಿ ಸಂತ್ರಸ್ತರಲ್ಲಿ ಧೈರ್ಯ ತುಂಬಿದರು. ದೇವಣಗಾಂವ ಪಿಡಿಒ ಸಂಜೀವಕುಮಾರ ದೊಡ್ಡಮನಿ, ಗ್ರಾಮ ಲೆಕ್ಕಾಧಿಕಾರಿ ಎಂ ಕೆ ಪೂಜಾರಿ ಇದ್ದ
“ದೇವಣಗಾಂವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ದೇವಣಗಾಂವ, ಬ್ಯಾಡಗಿಹಾಳ, ಕುರುಬತಹಳ್ಳಿ, ಶಂಭೇವಾಡ , ಕಡ್ಲೆವಾಡ ಗ್ರಾಮಗಳಲ್ಲಿ ನದಿತೀರದ ಅಂಚಿನಲ್ಲಿರುವ ಕುಟುಂಬಗಳಿಗೆ ಭೇಟಿ ನೀಡಿ ಸುರಕ್ಷಿತವಾಗಿರುವಂತೆ ತಿಳಿಸಿದ್ದೇನೆ. ಅಲ್ಲದೆ ಅಗತ್ಯ ಬಿದ್ದರೆ ಕಾಳಜಿ ಕೇಂದ್ರ ತೆರೆಯುವ ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವೆ. ಎರಡು ದಿನಗಳಿಂದ ಮಳೆ ಕಡಿಮೆಯಾಗಿದ್ದು ಪ್ರವಾಹ ಕಡಿಮೆಯಾಗಬಹುದು, ಎಲ್ಲರೂ ಧೈರ್ಯದಿಂದ ಇರಬೇಕು. ನಾವು ತಮ್ಮ ಜೊತೆಗಿದ್ದೇವೆ ಎಂದು ಧೈರ್ಯ ತುಂಬಿದ್ದೇನೆ.”
– ಸಂಜೀವಕುಮಾರ ದೊಡ್ಡಮನಿ
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ

