ಉದಯರಶ್ಮಿ ದಿನಪತ್ರಿಕೆ
ಚಡಚಣ: ಮಹಾರಾಷ್ಟ್ರದ ಅಹಿಲ್ಯಾ ನಗರ,ಸೊಲಾಪೂರ ಮತ್ತು ಭೀಮಾನದಿ ತೀರದ ಎಲ್ಲ ಪ್ರದೇಶಗಳಲ್ಲಿ ಸತತವಾಗಿ
ಸುರಿಯುತ್ತಿರುವ ಧಾರಾಕಾರ ಮಹಾ ಮಳೆಯಿಂದಾಗಿ ಉಜ್ಜನಿ ಹಾಗೂ ಸೀನಾ, ವೀರ ಜಲಾಶಯಗಳಿಂದ ಸುಮಾರು ೪ ಲಕ್ಷ ಕ್ಯೂಸೆಕ್ಸಕ್ಕು ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದೆ. ಮತ್ತು ೨ ಲಕ್ಷ ೨೦ ಸಾವೀರ ದಷ್ಟು ನೀರು ಚಣೆಗಾಂವ ಹತ್ತಿರ ಇರುವ ಭೀಮಾನದಿ ಹಾಗೂ ಸೀನಾನದಿಗಳ ಸಂಗಮವಾಗಿರುವ ಕೂಡಲದಲ್ಲಿ ಸೀನಾ ನದಿಯ ನೀರು ಬಂದಿದ್ದರಿಂದ ಭಿಮಾನದಿಯ ನೀರಿನ ರಭಸ ಹಾಗೂ ಸಿನಿನದಿಯ ನೀರಿನ ರಭಸಕ್ಕೆ ಭೀಮಾನದಿಯ ಆಪಾರ ಪ್ರಮಾಣದ ನೀರು ಒಮ್ಮೆಲೆ ಭೀಮಾತೀರದ ಅಕ್ಕಪಕ್ಕದ ಗ್ರಾಮಗಳಿಗೆ ಹಾಗೂ ಹೊಲದಲ್ಲಿ ನೀರು ನುಗ್ಗಿ ಅಪಾರ ಪ್ರಮಾಣದ ಹೊಲಗದ್ದೆಗಳು ಬೇಳೆದ ಬೇಳೆಯೊಂದಿಗೆ ನದಿ ಪಾಲಾಗಿದೆ ಮತ್ತು ನದಿ ತೀರದ ಜನರ ನಿದ್ದೆಕೆಡಸಿದೆ ಮತ್ತು ಜನರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.
ಮುಂಬೈ ದಿಂದ ಬೆಂಗಳೂರು ಹಾಗೂ ಮಂಗಳೂರು ಸೇರಿದಂತೆ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಚತುಷ್ಪತ ಹೆದ್ದಾರಿ ಮಹಾರಾಷ್ಟ್ರದ ವಡಕಬಾಳ ಗ್ರಾಮದ ಸೇತುವೆ ಬಳಿಯಲ್ಲಿ ಸುಮಾರು ಎರಡು ಅಡಿ ಸೇತುವೆಗಿಂತ ಎತ್ತರದಲ್ಲಿ ನೀರು ಹರಿದು ಹೋಗುತ್ತಿದೆ. ಹೀಗಾಗಿ ರಾಷ್ಟ್ರಿಯ ಹೆದ್ದಾರಿ ಯಾವುದೇ ಅನಾಹುತಗಳು ಸಂಭವಿಸದಂತೆ ಮಹಾರಾಷ್ಟ್ರ ರಾಜ್ಯದ ಪೊಲೀಸ್ ಅಧಿಕಾರಿಗಳು ರಸ್ತೆ ಸಂಪರ್ಕವನ್ನು ಸಂಪೂರ್ಣ ಬಂದ ಮಾಡಿ ಕ್ರಮಕೈಗೊಂಡಿದ್ದಾರೆ.ಇದರಿಂದ ಸೇತುವೆ ಎರಡು ಬದಿ ವಾಹನಗಳು, ಸಾರ್ವಜನಿಕರು ಸಾಲುಗಟ್ಟಿ ನಿಲ್ಲುವಂತಾಗಿದೆ.
ಈ ಭಾಗದಲ್ಲಿ ಹಳ್ಳ ಕೊಳ್ಳಗಳು ಕೂಡಾ ತುಂಬಿ ಹರಿಯುತ್ತಿದ್ದು ರೈತರ ಜಮೀನುಗಳಿಗೆ ನೀರು ನುಗ್ಗಿ ಕೃಷಿ ಬೆಳೆಗಳಾದತೊಗರಿ, ಮತ್ತೆಚೊಳ, ಸಜ್ಜೆ ಹಾಗೂ ತೋಟಗಾರಿಕೆ ಬೆಳೆಗಳಾದ ಕಲ್ಲು ಬಾಳೆ ಇರುಳಿ ಸೇರಿದಂತೆ ಇತರ ಬೆಳೆಗಳು ಜಲಾವೃತ್ತವಾಗಿ ರೈತರು ಕಂಗಾಲಾಗಿದ್ದಾರೆ.
ಪ್ರವಾಹ ಹೆಚ್ಚಾದ ಹಿನ್ನೆಲೆ ಜಿಲ್ಲಾಡಳಿತದ ವತಿಯಿಂದ ಗಂಜಿ ಕೇಂದ್ರಗಳು ತೆರೆಯಲಾಗಿದ್ದು ತಾಲೂಕು ನೋಡಲ್ ಅಧಿಕಾರಿ ರಾಜಶೇಖರ ಡಂಬಳ ಆಯುಕ್ತರು ವಿಜಯಪುರ ರವರು ಗುರುವಾರ ಭೀಮಾ ನದಿಯಿಂದ ಹಾನಿಯಾದ ಸಂತ್ರಸ್ತರಿಗೆ ಬರಗುಡಿ ಗ್ರಾಮದಲ್ಲಿ ತೆರೆದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಹಾಗೂ ಪ್ರವಾಹದ ಕುರಿತು ಪರಿಶೀಲನೆ ಮಾಡಿದರು ನೋಡಲ್ ಅಧಿಕಾರಿ ಮಹಾದೇವಪ್ಪ ಏವೂರ ಎಡಿಎ ಅಧಿಕಾರಿಗಳು ಇಂಡಿ ಮತ್ತು ಪಿ ಜೆ ಕೊಡಹೊನ್ನ ಕಂದಾಯ ನಿರೀಕ್ಷಕರು ಬಳ್ಳೊಳ್ಳಿ ಬಸು ಅವಜಿ ಗ್ರಾ.ಆ.ಅಧಿಕಾರಿ ಲಚ್ಯಾಣ, ಬಂದು ತಾಂಬೋಳಿ ಪಂಚಾಯಿತಿ ಕಾರ್ಯದರ್ಶಿ ಗ್ರಾಮಸ್ಥರು ಇದ್ದರು.

