Author: editor.udayarashmi@gmail.com

ಸಿಂದಗಿಯಲ್ಲಿ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಭರವಸೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಬನ್ನೆಟ್ಟಿ ಪಿಎ ಗ್ರಾಮದ ಪರಿಶಿಷ್ಟ ಜಾತಿಯ ಮಹಾದೇವಪ್ಪ ಪೂಜಾರಿ (ಹರಿಜನ) ಕೊಲೆಗೆ ಸಂಬಂಧಿಸಿದಂತೆ ಆರೋಪಿ ಯಾರೆ ಆಗಿರಲಿ, ಎಷ್ಟೇ ಪ್ರಭಾವಿಯಾಗಿರಲಿ ತೀವ್ರ ಗತಿಯಲ್ಲಿ ಬಂಧಿಸಿ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಭರವಸೆ ನೀಡಿದರು.ಸಿಂದಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಬನ್ನೆಟ್ಟಿ ಪಿಎ ಗ್ರಾಮದ ಪರಿಶಿಷ್ಟ ಜಾತಿಯ ವ್ಯಕ್ತಿಯ ಕೊಲೆ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಈಗಾಗಲೇ ಪ್ರಕರಣವು ತನಿಖೆಯ ಹಂತದಲ್ಲಿದೆ. ಹೋರಾಟಗಾರರು ಆರೋಪಿಸುತ್ತಿರುವಂತೆ ಇಲ್ಲಿ ಯಾವುದೇ ಪ್ರಭಾವಕ್ಕೆ ಒಳಗಾಗದೇ ನ್ಯಾಯ ಸಮ್ಮತವಾದ ತನಿಖೆ ನಡೆಸಲಾಗುತ್ತಿದೆ. ಮೃತ ವ್ಯಕ್ತಿಯ ಶವವು ಕೊಳೆತ ಸ್ಥಿತಿಯಲ್ಲಿ ದೊರಕಿದಾಗ ವೈಜ್ಞಾನಿಕ ಪರೀಕ್ಷೆಗೊಳಪಡಿಸಿದಾಗ ತಲೆಗೆ ಬಲವಾದ ಗಾಯ ಹಾಗೂ ಶರೀರದ ಮೇಲೂ ಗಾಯವಾಗಿರುವುದು ಗಮನಕ್ಕೆ ಬಂದಾಗ ಇದೊಂದು ಕೊಲೆ ಪ್ರಕರಣವೆಂದು ದಾಖಲಿಸಿಕೊಳ್ಳಲಾಯಿತು.ಎಲ್ಲ ಕೊಲೆ ಪ್ರಕರಣಗಳು…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲೂಕಿನ ಹಳೆ ತಾರಾಪುರ ಗ್ರಾಮಕ್ಕೆ ಭೀಮ ನದಿಯ ಪ್ರವಾಹದ ನೀರು ಸುತ್ತುವರೆದಿದ್ದು ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣ ನೀರಿನಿಂದ ಆವೃತವಾಗಿದೆ ಅಂತಹ ನೀರಿನಲ್ಲಿ ತೆವಳುತ್ತ ಸಾಗಿ ಪ್ರವಾಹ ಸಂತ್ರಸ್ತರನ್ನು ಮಾಜಿ ಶಾಸಕ ರಮೇಶ ಭೂಸನೂರ ಭೇಟಿ ಮಾಡಿದರು.ಭೀಮಾ ನದಿಯ ಪ್ರವಾಹಕ್ಕೆ ಒಳಗಾಗಿರುವ ಹಳೆಯ ತಾರಾಪುರ ಗ್ರಾಮದಲ್ಲಿ ಇನ್ನೂ ಹಲವಾರು ಕುಟುಂಬಗಳು ವಾಸವಿದ್ದು ಅವರಿಗೆ ಮೊಳಕಾಲಕ್ಕಿಂತ ಮೇಲೆ ಇರುವ ಪ್ರವಾಹದ ನೀರಿನಲ್ಲಿ ತೆರಳಿ ಅವರಿಗೆ ಧೈರ್ಯ ತುಂಬುವ ಜೊತೆಗೆ ತಾವುಗಳು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಮೊದಲು ಎಲ್ಲರೂ ಸುರಕ್ಷಿತವಾಗಿರಬೇಕು, ತಮ್ಮ ಕಷ್ಟ ಸುಖಗಳಿಗೆ ನಾನು ಸದಾ ಭಾಗಿಯಾಗಿರುತ್ತೇನೆ. ಸರ್ಕಾರದ ಮೇಲೆ ಒತ್ತಡ ಹೇರಿ ತಮಗೆ ದೊರೆಯಬೇಕಾಗಿರುವ ಎಲ್ಲ ಸವಲತ್ತುಗಳನ್ನು ದೊರಕಿಸಿ ಕೊಡಲು ತಮ್ಮೊಂದಿಗೆ ನಾನು ಸದಾ ಕೈ ಜೋಡಿಸುತ್ತೇನೆ. ಹಳೆ ತಾರಾಪುರದಲ್ಲಿರುವ ಕುಟುಂಬಗಳನ್ನು ಸ್ಥಳಾಂತರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಅಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.ಪ್ರವಾಹದ ಸಂದರ್ಭದಲ್ಲಿ ಹಗೆ (ಹಿಂದಿನ ಕಾಲದ ಧಾನ್ಯ ಸಂಗ್ರಹಿಸುವ ಸ್ಥಳ)ದಲ್ಲಿ ಸಿಲುಕಿ…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಕಳೆದ 8-10 ದಿನಗಳಿಂದ ಏರುತಲೇ ಸಾಗಿದ್ದ, ನೆರೆ ಪ್ರವಾಹ ಪರಿಸ್ಥಿತಿ ಉಂಟುಮಾಡಿದ್ದ ಭೀಮಾನದಿಯಲ್ಲಿ ಇಂದು ಪಂಚೆ ಇಳಿಮುಖ ಕಂಡಿದ್ದು ಜನರಲ್ಲಿ ಆತಂಕ ದೂರು ಮಾಡುವಂತೆ ಆಗಿದೆ. ಆದರೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಜನರನ್ನು ಮತ್ತೆ ಆತಂಕ ಈಡಾಗುವಂತೆ ಮಾಡಿದೆ.ಶುಕ್ರವಾರ ದಿವಸ 3 ಲಕ್ಷ 55 ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿತ್ತು ಶನಿವಾರ ಭಿಮಾನದಿಯಲ್ಲಿ 3 ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿದ್ದು ಕೊಂಚ ಮಟ್ಟಿಗೆ ಕಡಿಮೆಯಾಗಿದೆ ಎನ್ನಬಹುದು ಆದರೆ ಈಗಲೂ ಕೂಡ ಇನ್ನೂ ಹಲವಾರು ಮನೆಗಳಲ್ಲಿ ದೇವಸ್ಥಾನಗಳಲ್ಲಿ ನೀರು ಇದೆ ಇನ್ನೂ ಕಡಿಮೆಯಾದರೆ ಮಾತ್ರ ಜನರು ನಿರಾಳರಾಗಬಹುದು.ಶನಿವಾರ ದಿವಸ 3 ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿದ್ದು ರವಿವಾರ ಸ್ವಲ್ಪ ಕಡಿಮೆಯಾಗಬಹುದೆಂದು ಅಂದಾಜು ಇದ್ದು ಮಹಾರಾಷ್ಟ್ರದ ಭೀಮಾ ನದಿ ಪಾತ್ರದಲ್ಲಿ ಮತ್ತೆ ಮಳೆ ಸುರಿಯಲು ಆರಂಭಿಸಿದ್ದು ಉಜನಿ ಜಲಾಶಯದಿಂದ ಒಂದು ಲಕ್ಷ, ಸೀನಾ ನದಿಯಿಂದ ರೂ.1 ಲಕ್ಷ 50 ಸಾವಿರ ಕ್ಯೂಸೆಕ್ಸ್ ಹಾಗೂ ಕರ್ನಾಟಕದ ಮಹಾರಾಷ್ಟ್ರದ ನದಿ…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲೂಕಿನ ಶಂಬೆವಾಡ ಗ್ರಾಮದ ಹಳೆ ಗ್ರಾಮದಲ್ಲಿದ್ದ ಮೂರು ಜನ ಗರ್ಭಿಣಿಯರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.ದೇವಣಗಾಂವ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಸಂಜೀವಕುಮಾರ ದೊಡಮನಿ, ಗ್ರಾಮ ಲೆಕ್ಕಾಧಿಕಾರಿ ಎಂ ಕೆ ಪೂಜಾರಿ ಅವರ ನೇತೃತ್ವದ ತಂಡ ಇಂದು ಶಂಭೇವಾಡ ಗ್ರಾಮಕ್ಕೆ ತೆರಳಿಹೆರಿಗೆಗಾಗಿ ತವರು ಮನೆಗೆ ಆಗಮಿಸಿದ 9 ತಿಂಗಳ ತುಂಬು ಗರ್ಭಿಣಿಯರಾದ ಸಂತೋಷಿ ನಾಗೇಶ ಕೋಳಿ, ಸವಿತಾ ಚಂದ್ರಕಾಂತ ಕೋಳಿ, ಸುನಂದಾ ಆಕಾಶ ತಳವಾರ ಅವರುಗಳನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಿಕೊಡಲಾಗಿದೆಪ್ರವಾಹ ಪೀಡಿತ ಗ್ರಾಮದಲ್ಲಿ ರುವುದನ್ನು ಮನಗಂಡು ಅವರಿಗೆ ಮನವೊಲಿಸಿ ಇಂಥ ಪರಿಸ್ಥಿತಿಯಲ್ಲಿ ತಾವುಗಳು ಸುರಕ್ಷಿತ ತಳದಲ್ಲಿರಬೇಕು, ಹೆರಿಗೆ ನೋವು ಕಾಣಿಸಿಕೊಂಡರೆ ತಮಗೆ ಹೋಗುವುದಕ್ಕೆ ದಾರಿಯ ಅನಾನುಕೂಲತೆ ಇದೆ ಆದ ಕಾರಣ ಈಗಲೇ ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಮನವೊಲಿಸಿ ಅವರನ್ನು ಬೋಟ್ ಗಳಲ್ಲಿ ಪ್ರವಾಹದ ನೀರನ್ನು ದಾಟಿಸಿ ನಂತರ ದೇವಣಗಾವದ ಆರೋಗ್ಯ ಉಪ ಕೇಂದ್ರಕ್ಕೆ ಆರೋಗ್ಯ ತಪಾಸಣೆ ಮಾಡಿಸಿ ತಾಲೂಕ ಆಸ್ಪತ್ರೆಗೆ ಸ್ಥಳಾಂತರಿಸುವುದಾಗಿ ಹೇಳಿದಾಗ ಗರ್ಭಿಣಿಯರು ಮತ್ತು ಅವರ…

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಬೆಂಗಳೂರಿನ ಭಾರತ ಸ್ಕೌಟ್ಸ ಆಂಡ ಗೈಟ್ಸöನ್ ಕೊಂಡೊಜ್ಜಿ ಬಸಪ್ಪ ಭವನದಲ್ಲಿ ನಡೆದ ಸಮಾರಂಭದಲ್ಲಿ ತಾಲೂಕಿನ ರತ್ನಾಪೂರ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಸುಲೋಚನಾ ಲ ಹೊನ್ನುಟಗಿ ಅವರು ಅತ್ಯುತಮ ಶಿಕ್ಷಕಿ ಪ್ರಶಸ್ತಿಗೆ ಬಾಜನರಾದರು.ಪ್ರಭಾರಿ ಮುಖ್ಯ ಗುರುಮಾತೆ ಸುಲೋಚನಾ ಅವರು ಪ್ರಶಸ್ತಿಗೆ ಭಾಜನರಾಗಿ ರತ್ನಾಪೂರ ಗ್ರಾಮದ ಶಾಲೆಗೆ ಗೌರವ ತಂದಿದ್ದಾರೆ ಎಂದು ಎಸ್ಡಿಎಮ್ಸಿ ಅದ್ಯಕ್ಷ ಮಹೇಶ ಕರ್ಚೆ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದ್ದಾರೆ.ಇದೆ ಸಂದರ್ಭದಲ್ಲಿ ತಾಜಪೂರ ಕ್ಲಸ್ಟರ ಸಿಆರಪಿ ಬಸವರಾಜ ತೇಲಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮಲ್ಲಿಕಾರ್ಜುನ ಭೂಸಗೊಂಡ, ಮತ್ತು ಜಿಲ್ಲಾದ್ಯಕ್ಷ ಕಣಕಾಲಮಠ, ನಿವೃತ್ತ ಮುಖ್ಯ ಶಿಕ್ಷಕ ಆರ ಜಿ ಕೋಟ್ನಾಳ, ಕನ್ನಡ ಸಾಹಿತ್ಯ ಪರಿಷತ್ತಿನ ತಿಕೋಟಾ ತಾಲೂಕಾದ್ಯಕ್ಷ ಜಗದೀಶ ಬೋಳಸುರ, ರಾಜ್ಯ ನೌಕರರ ಸಂಘದ ತಿಕೋಟಾ ತಾಲೂಕಾದ್ಯಕ್ಷ ಚನ್ನಯ್ಯಾ ಮಠಪತಿ ಅಭಿನಂದಿಸಿ ಶುಭ ಕೋರಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಪಟ್ಟಣದ ಅಂಬಾಭವಾನಿ ದೇವಸ್ಥಾನ, ಅಂಬಾಭವಾನಿ ತರುಣ ಮಂಡಳಿ ಚಾವಡಿ ಓಣಿ, ಭುವನೇಶ್ವರಿ ತರುಣ ಮಂಡಳಿ ಕುಂಬಾರ ಓಣಿ, ದುರ್ಗಾ ಪರಮೇಶ್ವರಿ ತರುಣ ಮಂಡಳಿ ಭೀರಪ್ಪ ನಗರ ದಲ್ಲಿ ಮಹಿಳೆಯರಿಂದ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.ಮಹಿಳೆಯರಿಗೆ ಎಲೆ, ಅಡಿಕೆ, ಕುಪ್ಪಸ, ಬಾಳೆಹಣ್ಣು, ಅಕ್ಕಿ ಮತ್ತು ಸಿಹಿ ಪದಾರ್ಥ ಕೊಟ್ಟು ಉಡಿ ತುಂಬಿದರು.ಕುಂಬಾರ ಓಣಿಯಲ್ಲಿ ರೇಣುಕಾ ಯಲ್ಲಮ್ಮಾ ಮಹಾತ್ಮೆ ನಾಟಕ ಪ್ರದರ್ಶನಗೊಂಡಿತು.ಜಮಖಂಡಿ ಹುಣಚ್ಯಾಳ ಗ್ರಾಮದ ಮತ್ತು ರಬಕವಿ ಬನಹಟ್ಟಿಯವರಿಂದ ಚೌಡಕಿ ಪದಗಳು ಭರಾಟೆ ನಡೆಯಿತು.ಪ್ರತಿದಿನ ಎಲ್ಲ ಕಡೆ ಪೂಜೆ ಅಭಿಷೇಕ ದೇವಿಗೆ ಅಲಂಕಾರ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯುತ್ತಿವೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗದಗ ನಗರದ ನಿಜಶರಣ ಅಂಬಿಗರ ಚೌಡಯ್ಯನವರ ಸಮಾಜದ ವತಿಯಿಂದ ಸಮಾಜದ ಸಂಚಾಲಕ ದೇವೇಂದ್ರ ಅಂಬಿಗೇರ ಇವರು ಇದೇ ೧೨ನೇ ಆಕ್ಟೋಬರ್ ೨೦೨೫ರ ರವಿವಾರ ರಂದು ವಧು-ವರರ ಸಮಾವೇಶವನ್ನು ಹಮ್ಮಿಕೊಂಡಿದ್ದಾರೆ.ವಧು-ವರ ಸಮಾವೇಶವು ಗದಗ ನಗರದ ಹುಬ್ಬಳ್ಳಿ ರಸ್ತೆಯ ಮಾರ್ಗದಲ್ಲಿರುವ ಮುಳಗುಂದ ನಾಕಾ ಹತ್ತಿರದ ಹೊಟೆಲ್ ಕ್ಲಾರ್ಕ್ಇನ್ ಸ್ಟಾರ್ ಹೊಟೆಲ್‌ನಲ್ಲಿ ನಡೆಸಲಾಗುತ್ತಿದೆ.ಸಮಾವೇಶದಲ್ಲಿ ವಧು-ವರರ ಫೋಟೊ ಮೂಲಕ ಇಮೇಜ್ ಹಾಗೂ ವೀಡಿಯೋ ಮೂಲಕ ಪ್ರದರ್ಶನ ಮಾಡಲಾಗುವುದು. ೨೦೨೫ನೇ ಆಕ್ಟೋಬರ ೧ರ ವರೆಗೆ ವಧು-ವರರು ತಮ್ಮ ಹೆಸರುಗಳನ್ನು ನೋಂದಣಿ ಮಾಡಬಹುದಾಗಿದೆ. ಆಸಕ್ತ ಯುವಕ-ಯುವತಿಯರ, ನಿಜಶರಣ ಅಂಬಿಗರ ಚೌಡಯ್ಯನವರ ಸಮಾಜದ ಸಂಚಾಲಕರಾದ ದೇವೇಂದ್ರಅಂಬಿಗೇರ ಇವರ ವಾಟ್ಸ್ಆಪ್ ನಂಬರ ೯೮೮೦೬೩೮೩೭೯ಗೆ ತಮ್ಮ ಇತ್ತೀಚಿನ ಫೋಟೊ ಹಾಗೂ ಬಯೋಡಾಟಾವನ್ನು ಕಳುಹಿಸಿಕೊಡುವಂತೆ ಕೋರಿರುವುರು. ಸಮಾವೇಶದಲ್ಲಿ ವಧು-ವರರ ಜೊತೆಗೆ ಪಾಲಕರು ಭಾಗವಹಿಸಬಹುದಾಗಿದೆ. ವಿಜಯಪುರ ಜಿಲ್ಲೆಯಿಂದ ವಧು-ವರರು ಹಾಗೂ ಅವರೊಂದಿಗೆ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿಜಯಪುರ ಜ್ಞಾನಗಂಗಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎಸ್.ಎಮ್ ಗಾಣೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಚಿತ್ರಕಲಾ ಶಿಬಿರಕ್ಕೆ ಚಾಲನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಾವು ಆದಿಕಾಲದಲ್ಲಿ ಗಿಡ ಮರಗಳ ಅಡಿಯಲ್ಲಿ ವಿವಿಧ ಪ್ರಕಾರಗಳ ವೈವಿದ್ಯಮಯ ಆಟ ಪಾಟ, ವಿದ್ಯಾಭ್ಯಾಸದ ಜೊತೆಗೆ ಇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂತೋಷವನ್ನು ಹಂಚಿಕೊಳ್ಳುವ ಪ್ರಸಂಗ ಇಂದು ಮರಳಿ ನೆನಪಿಸುವಂತಾಗಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಧಾರವಾಡ ವೃತ್ತದ ಅಧೀಕ್ಷಕ ಪುರಾತತ್ವವೀಧರರಾದ ರಮೇಶ ಮೂಲಿಮನಿ ಹೇಳಿದರು.ನಗರದ ಗೋಳಗುಮ್ಮಟ ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಜೈನ್ ವಿಶ್ವವಿದ್ಯಾಲಯ ಬೆಂಗಳೂರು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಪ್ರವಾಸೋದ್ಯಮ ಮಂತ್ರಾಲಯ ಬೆಂಗಳೂರು ಹಾಗೂ ಕ್ಯಾನವಾಸ್ ಆರ್ಟ್ ಫೌಂಡೇಶನ್ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ ಚಿತ್ರಕಲಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಬೆಂಗಳೂರಿನ ಚಿಂತಾಮಣಿ ಕಲಾಕೇಂದ್ರದ ಜೈನ್(ಡೀಮ್-ಟು ಬಿ) ವಿಶ್ವವಿದ್ಯಾಲಯ ಡೀನ್ ಡಾ. ಅವಿನಾಶ ಕಾಟೆ ಅವರು ಮಾತನಾಡಿ, ಇಂದು ಹಲವಾರು ಚಿತ್ರಕಲಾ ವಿದ್ಯಾಲಯಗಳು ಮುಚ್ಚುವ ಸ್ಥಿತಿಯಲ್ಲಿವೆ. ಈ ಚಿತ್ರಕಲೆಯನ್ನು ಸಂರಕ್ಷಿಸಿ ಬೆಳೆಸುವ ಅವಶ್ಯಕತೆ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ೩೫೦೦ ಶೇರು ಸದಸ್ಯರನ್ನು ಹೊಂದಿರುವ ಬರಡೋಲ ಪ್ರಾಥಮಿಕ ಕೃಷಿ ಪತ್ತಿನ ಸಂಘವು ಈ ವರ್ಷ ರೂ ೩೧ ಲಕ್ಷ ಲಾಭಗಳಿಸಿದೆ. ಈ ಲಾಭಾಂಶದಲ್ಲಿ ಶೇ.೩ ರಷ್ಟನ್ನು ಸದಸ್ಯರಿಗೆ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ವಿಶ್ವನಾಥ ಬಿರಾದಾರ ಹೇಳಿದರು.ಬರಡೋಲ ಗ್ರಾಮದಲ್ಲಿ ಗುರುವಾರ ಜರುಗಿದ ಕೃಷಿ ಪತ್ತಿನ ಸಂಘದ ೭೮ ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.ಶೇರುದಾರರು ಮರಣ ಹೊಂದಿದ ಸಂದರ್ಭದಲ್ಲಿ ಅವರ ಅಂತ್ಯಕ್ರಿಯೆಗೆ ಸಂಘದ ವತಿಯಿಂದ ಈ ಹಿಂದೆ ರೂ.೫,೦೦೦ಗಳನ್ನು ನೀಡಲಾಗುತ್ತಿತ್ತು. ಈಗ ಅದನ್ನು ೭,೦೦೦ ಕ್ಕೆ ಹೆಚ್ಚಿಸಿದೆ ಎಂದರು.ಸಂಘದ ವ್ಯವಸ್ಥಾಪಕ ಮಲ್ಲಿಕಾರ್ಜುನ ಸಿಂದಗಿ ಅಢಾವೆ ಪತ್ರಿಕೆ ಕುರಿತು ವಿವರಿಸಿದರು.ಸಂಘದ ನಿರ್ದೇಶಕ ಎಸ್ ಎಲ್ ಮೇತ್ರಿ , ಸದಸ್ಯ ಮಹೇಶ ಕುಲಕರ್ಣಿ ರೈತರ ಸಮಸ್ಯೆಗಳ ಕುರಿತು , ನಿರ್ದೇಶಕ ಗೋಪಾಲ ಗುಮಾಸ್ತೆ ಸಂಘದ ಅಭಿವೃದ್ಧಿ ಕುರಿತು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಾಪುರಾಯ ಬಿರಾದಾರ , ಮಾಜಿ ತಾ.ಪಂ ಸದಸ್ಯ ರಾಜು ಝಳಕಿ ,…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣದ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಕನ್ನಡ ವಿಭಾಗದ ಅಡಿಯಲ್ಲಿ ಶಬ್ದಮಣಿದರ್ಪಣ ಪ್ರಾತ್ಯಕ್ಷಿಕೆ ವಿಷಯದ ಕುರಿತು ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಆಶಯ ನುಡಿ ಪ್ರಸ್ತುತ ಪಡಿಸಿದ ಯೋಜನಾ ನಿರ್ದೇಶಕರು ಕನ್ನಡ ಶಾಸ್ತ್ರೀಯ ಅತ್ಯುನ್ನತ ಅಧ್ಯಯನ ಕೇಂದ್ರ ಮೈಸೂರ, ಡಾ. ನೀಲಗಿರಿ ತಳವಾರ್ ಅವರು, ಶಬ್ದಮಣಿದರ್ಪಣ ಇದು ಕನ್ನಡದಲ್ಲಿ ದೊರಕಿದ ಮೊದಲ ಸಮಗ್ರ ವ್ಯಾಕರಣಗ್ರಂಥ. ಈ ಗ್ರಂಥವನ್ನು ಅವರು ಕಂದ ಪದ್ಯದಲ್ಲಿ ಬರೆದಿದ್ದಾರೆ. ಕೃತಿಯಲ್ಲಿ ಪ್ರತಿ ಸೂತ್ರಕ್ಕೆ ವೃತ್ತಿ (ವಿವರಣೆ) ಮತ್ತು ಪ್ರಯೋಗ (ಉದಾಹರಣೆ)ಗಳನ್ನು ಸೇರಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳು ವ್ಯಾಕರಣವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆ ಎಂದರು.ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಡಾ ಕೆ ತಿಮ್ಮಯ್ಯ ಮಾತನಾಡಿ, ಕೇಶಿರಾಜನ ಪರಿಚಯ, ಅವನು ಬರೆದ ವ್ಯಾಕರಣ ಕೃತಿಯಾದ ಶಬ್ದಮಣಿದರ್ಪಣದ ಮಹತ್ವವನ್ನು ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆಯ ಆಡಳಿತಾಧಿಕಾರಿ ಡಾ .ಎಸ್ ಎಸ್ ಚೋರಗಿ ಮಾತನಾಡಿ, ಕನ್ನಡ ಸಾಹಿತ್ಯ ಕೇವಲ ಕಾವ್ಯಗಳಿಂದ ಕೂಡಿಲ್ಲ. ಶಾಸ್ತ್ರಗ್ರಂಥ, ಲಕ್ಷಣಗ್ರಂಥ, ಛಂದಸ್ಸು ಮತ್ತು ವ್ಯಾಕರಣ ಕೃತಿಗಳನ್ನು ಹೊಂದುವುದರ ಮೂಲಕ…

Read More