ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲೂಕಿನ ಶಂಬೆವಾಡ ಗ್ರಾಮದ ಹಳೆ ಗ್ರಾಮದಲ್ಲಿದ್ದ ಮೂರು ಜನ ಗರ್ಭಿಣಿಯರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ದೇವಣಗಾಂವ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಸಂಜೀವಕುಮಾರ ದೊಡಮನಿ, ಗ್ರಾಮ ಲೆಕ್ಕಾಧಿಕಾರಿ ಎಂ ಕೆ ಪೂಜಾರಿ ಅವರ ನೇತೃತ್ವದ ತಂಡ ಇಂದು ಶಂಭೇವಾಡ ಗ್ರಾಮಕ್ಕೆ ತೆರಳಿ
ಹೆರಿಗೆಗಾಗಿ ತವರು ಮನೆಗೆ ಆಗಮಿಸಿದ 9 ತಿಂಗಳ ತುಂಬು ಗರ್ಭಿಣಿಯರಾದ ಸಂತೋಷಿ ನಾಗೇಶ ಕೋಳಿ, ಸವಿತಾ ಚಂದ್ರಕಾಂತ ಕೋಳಿ, ಸುನಂದಾ ಆಕಾಶ ತಳವಾರ ಅವರುಗಳನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಿಕೊಡಲಾಗಿದೆ
ಪ್ರವಾಹ ಪೀಡಿತ ಗ್ರಾಮದಲ್ಲಿ ರುವುದನ್ನು ಮನಗಂಡು ಅವರಿಗೆ ಮನವೊಲಿಸಿ ಇಂಥ ಪರಿಸ್ಥಿತಿಯಲ್ಲಿ ತಾವುಗಳು ಸುರಕ್ಷಿತ ತಳದಲ್ಲಿರಬೇಕು, ಹೆರಿಗೆ ನೋವು ಕಾಣಿಸಿಕೊಂಡರೆ ತಮಗೆ ಹೋಗುವುದಕ್ಕೆ ದಾರಿಯ ಅನಾನುಕೂಲತೆ ಇದೆ ಆದ ಕಾರಣ ಈಗಲೇ ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಮನವೊಲಿಸಿ ಅವರನ್ನು ಬೋಟ್ ಗಳಲ್ಲಿ ಪ್ರವಾಹದ ನೀರನ್ನು ದಾಟಿಸಿ ನಂತರ ದೇವಣಗಾವದ ಆರೋಗ್ಯ ಉಪ ಕೇಂದ್ರಕ್ಕೆ ಆರೋಗ್ಯ ತಪಾಸಣೆ ಮಾಡಿಸಿ ತಾಲೂಕ ಆಸ್ಪತ್ರೆಗೆ ಸ್ಥಳಾಂತರಿಸುವುದಾಗಿ ಹೇಳಿದಾಗ ಗರ್ಭಿಣಿಯರು ಮತ್ತು ಅವರ ಸಂಬಂಧಿಕರು ನಾವು ನಮ್ಮ ಸಂಬಂಧಿಕರ ಮನೆಗಳಿಗೆ ತೆರಳಿ ಅಲ್ಲಿಯೇ ಉಪಚಾರ ಮಾಡಿಕೊಳ್ಳುವುದಾಗಿ ತಿಳಿಸಿದ ನಂತರ ಅವರನ್ನು ಸುರಕ್ಷಿತವಾಗಿ ಕಳುಹಿಸಿ ಕೊಡಲಾಯಿತು.
ಅವರ ಜೊತೆಗೆ ಮೂವರು ಅವರ ಮನೆಯವರು ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಆರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳ ಅಂತರಿಸಲಾಗಿದೆ
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಮಲ್ಲಿಕಾರ್ಜುನ ಪೂಜಾರಿ, ಆರೋಗ್ಯ ನಿರೀಕ್ಷಣಾ ಅಧಿಕಾರಿ ಸಂತೋಷ್ ಕೋರಿ, ಆಶಾ ಕಾರ್ಯಕರ್ತೆ ರೇಖಾ ತಳವಾರ , ಮಲಕಣ್ಣ ವಾಲಿಕಾರ, ಅವರ ತಂಡ ಗರ್ಭಿಣಿಯರನ್ನು ಆಂಬುಲೆನ್ಸ್ ನಲ್ಲಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

