ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಕನ್ನಡ ವಿಭಾಗದ ಅಡಿಯಲ್ಲಿ ಶಬ್ದಮಣಿದರ್ಪಣ ಪ್ರಾತ್ಯಕ್ಷಿಕೆ ವಿಷಯದ ಕುರಿತು ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಆಶಯ ನುಡಿ ಪ್ರಸ್ತುತ ಪಡಿಸಿದ ಯೋಜನಾ ನಿರ್ದೇಶಕರು ಕನ್ನಡ ಶಾಸ್ತ್ರೀಯ ಅತ್ಯುನ್ನತ ಅಧ್ಯಯನ ಕೇಂದ್ರ ಮೈಸೂರ, ಡಾ. ನೀಲಗಿರಿ ತಳವಾರ್ ಅವರು, ಶಬ್ದಮಣಿದರ್ಪಣ ಇದು ಕನ್ನಡದಲ್ಲಿ ದೊರಕಿದ ಮೊದಲ ಸಮಗ್ರ ವ್ಯಾಕರಣಗ್ರಂಥ. ಈ ಗ್ರಂಥವನ್ನು ಅವರು ಕಂದ ಪದ್ಯದಲ್ಲಿ ಬರೆದಿದ್ದಾರೆ. ಕೃತಿಯಲ್ಲಿ ಪ್ರತಿ ಸೂತ್ರಕ್ಕೆ ವೃತ್ತಿ (ವಿವರಣೆ) ಮತ್ತು ಪ್ರಯೋಗ (ಉದಾಹರಣೆ)ಗಳನ್ನು ಸೇರಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳು ವ್ಯಾಕರಣವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಡಾ ಕೆ ತಿಮ್ಮಯ್ಯ ಮಾತನಾಡಿ, ಕೇಶಿರಾಜನ ಪರಿಚಯ, ಅವನು ಬರೆದ ವ್ಯಾಕರಣ ಕೃತಿಯಾದ ಶಬ್ದಮಣಿದರ್ಪಣದ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆಯ ಆಡಳಿತಾಧಿಕಾರಿ ಡಾ .ಎಸ್ ಎಸ್ ಚೋರಗಿ ಮಾತನಾಡಿ, ಕನ್ನಡ ಸಾಹಿತ್ಯ ಕೇವಲ ಕಾವ್ಯಗಳಿಂದ ಕೂಡಿಲ್ಲ. ಶಾಸ್ತ್ರಗ್ರಂಥ, ಲಕ್ಷಣಗ್ರಂಥ, ಛಂದಸ್ಸು ಮತ್ತು ವ್ಯಾಕರಣ ಕೃತಿಗಳನ್ನು ಹೊಂದುವುದರ ಮೂಲಕ ಅದು ಸಮಕಾಲಿನ ಭಾಷೆಗಳ ಜೊತೆ ಅತಿ ಉನ್ನತ ಇತಿಹಾಸವನ್ನು ಹೊಂದಿತ್ತು ಎಂದು ಹೇಳಿದರು.
ಡಾ ಎಸ್ ಎಸ್ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು.
ಡಾ ಎಂ. ಎಸ್ ಮಾಗಣಗೇರಿ ಪ್ರಾಸ್ತಾವಿಕ ಮಾತನಾಡಿದರು.
ಮಹಾಂತೇಶ ಜನವಾಡ ಸ್ವಾಗತಿಸಿದರು. ಎಸ್ ಎಪ್ ಬಿರಾದಾರ ನಿರೂಪಿಸಿದರು.
ಆರ್ ಎಸ್ ಮಾವಿನಮರ, ಬಸವರಾಜ ಯಳ್ಳೂರ, ಯುವರಾಜ ಹಳೆಮನಿ. ಅಪ್ಪು ಜಾಧವ, ಬಿ ಎಮ್ ದೈವಾಡಿ, ಜೆ ಎಸ್ ಲಚ್ಚಾಣ, ಪೂಜಾ ಬುರುಡ ಮತ್ತು ಮಹಾವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿದ್ದರು.

