ಉದಯರಶ್ಮಿ ದಿನಪತ್ರಿಕೆ
ಚಡಚಣ: ೩೫೦೦ ಶೇರು ಸದಸ್ಯರನ್ನು ಹೊಂದಿರುವ ಬರಡೋಲ ಪ್ರಾಥಮಿಕ ಕೃಷಿ ಪತ್ತಿನ ಸಂಘವು ಈ ವರ್ಷ ರೂ ೩೧ ಲಕ್ಷ ಲಾಭಗಳಿಸಿದೆ. ಈ ಲಾಭಾಂಶದಲ್ಲಿ ಶೇ.೩ ರಷ್ಟನ್ನು ಸದಸ್ಯರಿಗೆ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ವಿಶ್ವನಾಥ ಬಿರಾದಾರ ಹೇಳಿದರು.
ಬರಡೋಲ ಗ್ರಾಮದಲ್ಲಿ ಗುರುವಾರ ಜರುಗಿದ ಕೃಷಿ ಪತ್ತಿನ ಸಂಘದ ೭೮ ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.
ಶೇರುದಾರರು ಮರಣ ಹೊಂದಿದ ಸಂದರ್ಭದಲ್ಲಿ ಅವರ ಅಂತ್ಯಕ್ರಿಯೆಗೆ ಸಂಘದ ವತಿಯಿಂದ ಈ ಹಿಂದೆ ರೂ.೫,೦೦೦ಗಳನ್ನು ನೀಡಲಾಗುತ್ತಿತ್ತು. ಈಗ ಅದನ್ನು ೭,೦೦೦ ಕ್ಕೆ ಹೆಚ್ಚಿಸಿದೆ ಎಂದರು.
ಸಂಘದ ವ್ಯವಸ್ಥಾಪಕ ಮಲ್ಲಿಕಾರ್ಜುನ ಸಿಂದಗಿ ಅಢಾವೆ ಪತ್ರಿಕೆ ಕುರಿತು ವಿವರಿಸಿದರು.
ಸಂಘದ ನಿರ್ದೇಶಕ ಎಸ್ ಎಲ್ ಮೇತ್ರಿ , ಸದಸ್ಯ ಮಹೇಶ ಕುಲಕರ್ಣಿ ರೈತರ ಸಮಸ್ಯೆಗಳ ಕುರಿತು , ನಿರ್ದೇಶಕ ಗೋಪಾಲ ಗುಮಾಸ್ತೆ ಸಂಘದ ಅಭಿವೃದ್ಧಿ ಕುರಿತು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಾಪುರಾಯ ಬಿರಾದಾರ , ಮಾಜಿ ತಾ.ಪಂ ಸದಸ್ಯ ರಾಜು ಝಳಕಿ , ಸಂಘದ ಉಪಾಧ್ಯಕ್ಷ ಮನೋಜ ಭೋಸಲೆ, ಗುರುರಾಜ ಚೌಧರಿ ಪ್ರವೀಣ ಪವಾರ ಗಜಾನಂದ ತಳವಾರ ಶ್ರೀಶೈಲ ಕಟ್ಟಿಮನಿ ನಿಂಗಣ್ಣ ಕುಂಬಾರ, ಸತೀಶ ಕುಲಕರ್ಣಿ ಭುವನೇಶ್ವರಿ ಬಿರಾದಾರ ಇದ್ದರು.
ಮುಖಂಡ ಲಾಲಸಾಬ ಬಡಿಗೇರ ನಿರೂಪಿಸಿದರು , ಮಲ್ಲು ಸಿಂದಗಿ ವಂದಿಸಿದರು.
ಸಾಮಾಜಿಕ ಕಳಕಳಿ ಹೊಂದಿದ ಅಧಿಕಾರಿ ರವಿ ಭಿಸೆ ಅವರನ್ನು ಗೌರವಿಸಲಾಯಿತು.
ಇದೇ ವೇಳೆ ಸಾಮಾಜಿಕ ಕಳಕಳಿ ಹೊಂದಿದ ಅಧಿಕಾರಿ ರವಿ ಭಿಸೆ ಅವರನ್ನು ಗೌರವಿಸಲಾಯಿತು.
ಸಭೆಯಲ್ಲಿ ಆದರ್ಶ ಶಿಕ್ಷಕರನ್ನು, ನಿವೃತ್ ಶಿಕ್ಷಕರನ್ನು , ಕೃಷಿಯಲ್ಲಿ ಸಾಧನೆಗೈದ ರೈತರನ್ನು, ಹೈನುಗಾರಿಕೆಯಲ್ಲಿ ಸಾಧನೆಗೈದ ರೈತರನ್ನು ಸನ್ಮಾನಿಸಲಾಯಿತು.

