ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲೂಕಿನ ಹಳೆ ತಾರಾಪುರ ಗ್ರಾಮಕ್ಕೆ ಭೀಮ ನದಿಯ ಪ್ರವಾಹದ ನೀರು ಸುತ್ತುವರೆದಿದ್ದು ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣ ನೀರಿನಿಂದ ಆವೃತವಾಗಿದೆ ಅಂತಹ ನೀರಿನಲ್ಲಿ ತೆವಳುತ್ತ ಸಾಗಿ ಪ್ರವಾಹ ಸಂತ್ರಸ್ತರನ್ನು ಮಾಜಿ ಶಾಸಕ ರಮೇಶ ಭೂಸನೂರ ಭೇಟಿ ಮಾಡಿದರು.
ಭೀಮಾ ನದಿಯ ಪ್ರವಾಹಕ್ಕೆ ಒಳಗಾಗಿರುವ ಹಳೆಯ ತಾರಾಪುರ ಗ್ರಾಮದಲ್ಲಿ ಇನ್ನೂ ಹಲವಾರು ಕುಟುಂಬಗಳು ವಾಸವಿದ್ದು ಅವರಿಗೆ ಮೊಳಕಾಲಕ್ಕಿಂತ ಮೇಲೆ ಇರುವ ಪ್ರವಾಹದ ನೀರಿನಲ್ಲಿ ತೆರಳಿ ಅವರಿಗೆ ಧೈರ್ಯ ತುಂಬುವ ಜೊತೆಗೆ ತಾವುಗಳು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಮೊದಲು ಎಲ್ಲರೂ ಸುರಕ್ಷಿತವಾಗಿರಬೇಕು, ತಮ್ಮ ಕಷ್ಟ ಸುಖಗಳಿಗೆ ನಾನು ಸದಾ ಭಾಗಿಯಾಗಿರುತ್ತೇನೆ. ಸರ್ಕಾರದ ಮೇಲೆ ಒತ್ತಡ ಹೇರಿ ತಮಗೆ ದೊರೆಯಬೇಕಾಗಿರುವ ಎಲ್ಲ ಸವಲತ್ತುಗಳನ್ನು ದೊರಕಿಸಿ ಕೊಡಲು ತಮ್ಮೊಂದಿಗೆ ನಾನು ಸದಾ ಕೈ ಜೋಡಿಸುತ್ತೇನೆ. ಹಳೆ ತಾರಾಪುರದಲ್ಲಿರುವ ಕುಟುಂಬಗಳನ್ನು ಸ್ಥಳಾಂತರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಅಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರವಾಹದ ಸಂದರ್ಭದಲ್ಲಿ ಹಗೆ (ಹಿಂದಿನ ಕಾಲದ ಧಾನ್ಯ ಸಂಗ್ರಹಿಸುವ ಸ್ಥಳ)ದಲ್ಲಿ ಸಿಲುಕಿ ಗಾಯಗೊಂಡಿರುವ ವ್ಯಕ್ತಿಯನ್ನು ಮಾತನಾಡಿಸಿ ದೈರ್ಯ ತುಂಬುವ ಕೆಲಸ ಮಾಡಿದರು.
ಬಿಜೆಪಿ ಯುವ ಮುಖಂಡ ವಿಶ್ವನಾಥ ಹಿರೇಮಠ, ರೇವಣಸಿದ್ದಯ್ಯ ಹಿರೇಮಠ, ಮಲ್ಲಪ್ಪ ಹಾಳಕಿ, ಹುಸೇನ್ ಸಾಬ್ ಆಡಾಡಿ, ಸಿದ್ದರಾಮಪ್ಪ ಪೂಜಾರಿ, ಇದ್ದರು.

