ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಬೆಂಗಳೂರಿನ ಭಾರತ ಸ್ಕೌಟ್ಸ ಆಂಡ ಗೈಟ್ಸöನ್ ಕೊಂಡೊಜ್ಜಿ ಬಸಪ್ಪ ಭವನದಲ್ಲಿ ನಡೆದ ಸಮಾರಂಭದಲ್ಲಿ ತಾಲೂಕಿನ ರತ್ನಾಪೂರ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಸುಲೋಚನಾ ಲ ಹೊನ್ನುಟಗಿ ಅವರು ಅತ್ಯುತಮ ಶಿಕ್ಷಕಿ ಪ್ರಶಸ್ತಿಗೆ ಬಾಜನರಾದರು.
ಪ್ರಭಾರಿ ಮುಖ್ಯ ಗುರುಮಾತೆ ಸುಲೋಚನಾ ಅವರು ಪ್ರಶಸ್ತಿಗೆ ಭಾಜನರಾಗಿ ರತ್ನಾಪೂರ ಗ್ರಾಮದ ಶಾಲೆಗೆ ಗೌರವ ತಂದಿದ್ದಾರೆ ಎಂದು ಎಸ್ಡಿಎಮ್ಸಿ ಅದ್ಯಕ್ಷ ಮಹೇಶ ಕರ್ಚೆ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದ್ದಾರೆ.
ಇದೆ ಸಂದರ್ಭದಲ್ಲಿ ತಾಜಪೂರ ಕ್ಲಸ್ಟರ ಸಿಆರಪಿ ಬಸವರಾಜ ತೇಲಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮಲ್ಲಿಕಾರ್ಜುನ ಭೂಸಗೊಂಡ, ಮತ್ತು ಜಿಲ್ಲಾದ್ಯಕ್ಷ ಕಣಕಾಲಮಠ, ನಿವೃತ್ತ ಮುಖ್ಯ ಶಿಕ್ಷಕ ಆರ ಜಿ ಕೋಟ್ನಾಳ, ಕನ್ನಡ ಸಾಹಿತ್ಯ ಪರಿಷತ್ತಿನ ತಿಕೋಟಾ ತಾಲೂಕಾದ್ಯಕ್ಷ ಜಗದೀಶ ಬೋಳಸುರ, ರಾಜ್ಯ ನೌಕರರ ಸಂಘದ ತಿಕೋಟಾ ತಾಲೂಕಾದ್ಯಕ್ಷ ಚನ್ನಯ್ಯಾ ಮಠಪತಿ ಅಭಿನಂದಿಸಿ ಶುಭ ಕೋರಿದ್ದಾರೆ.

