ಉದಯರಶ್ಮಿ ದಿನಪತ್ರಿಕೆ
ಇಂಡಿ: ಪಟ್ಟಣದ ಅಂಬಾಭವಾನಿ ದೇವಸ್ಥಾನ, ಅಂಬಾಭವಾನಿ ತರುಣ ಮಂಡಳಿ ಚಾವಡಿ ಓಣಿ, ಭುವನೇಶ್ವರಿ ತರುಣ ಮಂಡಳಿ ಕುಂಬಾರ ಓಣಿ, ದುರ್ಗಾ ಪರಮೇಶ್ವರಿ ತರುಣ ಮಂಡಳಿ ಭೀರಪ್ಪ ನಗರ ದಲ್ಲಿ ಮಹಿಳೆಯರಿಂದ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.
ಮಹಿಳೆಯರಿಗೆ ಎಲೆ, ಅಡಿಕೆ, ಕುಪ್ಪಸ, ಬಾಳೆಹಣ್ಣು, ಅಕ್ಕಿ ಮತ್ತು ಸಿಹಿ ಪದಾರ್ಥ ಕೊಟ್ಟು ಉಡಿ ತುಂಬಿದರು.
ಕುಂಬಾರ ಓಣಿಯಲ್ಲಿ ರೇಣುಕಾ ಯಲ್ಲಮ್ಮಾ ಮಹಾತ್ಮೆ ನಾಟಕ ಪ್ರದರ್ಶನಗೊಂಡಿತು.
ಜಮಖಂಡಿ ಹುಣಚ್ಯಾಳ ಗ್ರಾಮದ ಮತ್ತು ರಬಕವಿ ಬನಹಟ್ಟಿಯವರಿಂದ ಚೌಡಕಿ ಪದಗಳು ಭರಾಟೆ ನಡೆಯಿತು.
ಪ್ರತಿದಿನ ಎಲ್ಲ ಕಡೆ ಪೂಜೆ ಅಭಿಷೇಕ ದೇವಿಗೆ ಅಲಂಕಾರ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯುತ್ತಿವೆ.

