ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಕಳೆದ 8-10 ದಿನಗಳಿಂದ ಏರುತಲೇ ಸಾಗಿದ್ದ, ನೆರೆ ಪ್ರವಾಹ ಪರಿಸ್ಥಿತಿ ಉಂಟುಮಾಡಿದ್ದ ಭೀಮಾನದಿಯಲ್ಲಿ ಇಂದು ಪಂಚೆ ಇಳಿಮುಖ ಕಂಡಿದ್ದು ಜನರಲ್ಲಿ ಆತಂಕ ದೂರು ಮಾಡುವಂತೆ ಆಗಿದೆ. ಆದರೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಜನರನ್ನು ಮತ್ತೆ ಆತಂಕ ಈಡಾಗುವಂತೆ ಮಾಡಿದೆ.
ಶುಕ್ರವಾರ ದಿವಸ 3 ಲಕ್ಷ 55 ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿತ್ತು ಶನಿವಾರ ಭಿಮಾನದಿಯಲ್ಲಿ 3 ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿದ್ದು ಕೊಂಚ ಮಟ್ಟಿಗೆ ಕಡಿಮೆಯಾಗಿದೆ ಎನ್ನಬಹುದು ಆದರೆ ಈಗಲೂ ಕೂಡ ಇನ್ನೂ ಹಲವಾರು ಮನೆಗಳಲ್ಲಿ ದೇವಸ್ಥಾನಗಳಲ್ಲಿ ನೀರು ಇದೆ ಇನ್ನೂ ಕಡಿಮೆಯಾದರೆ ಮಾತ್ರ ಜನರು ನಿರಾಳರಾಗಬಹುದು.
ಶನಿವಾರ ದಿವಸ 3 ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿದ್ದು ರವಿವಾರ ಸ್ವಲ್ಪ ಕಡಿಮೆಯಾಗಬಹುದೆಂದು ಅಂದಾಜು ಇದ್ದು ಮಹಾರಾಷ್ಟ್ರದ ಭೀಮಾ ನದಿ ಪಾತ್ರದಲ್ಲಿ ಮತ್ತೆ ಮಳೆ ಸುರಿಯಲು ಆರಂಭಿಸಿದ್ದು ಉಜನಿ ಜಲಾಶಯದಿಂದ ಒಂದು ಲಕ್ಷ, ಸೀನಾ ನದಿಯಿಂದ ರೂ.1 ಲಕ್ಷ 50 ಸಾವಿರ ಕ್ಯೂಸೆಕ್ಸ್ ಹಾಗೂ ಕರ್ನಾಟಕದ ಮಹಾರಾಷ್ಟ್ರದ ನದಿ ಪಾತ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ 50 ಸಾವಿರ ಹೀಗೆ 3 ಲಕ್ಷಕ್ಕೂ ಸೆಕ್ಸ್ ನೀರು ಮತ್ತೆ ನದಿಗೆ ಬರುವ ಸಾಧ್ಯತೆ ಇದೆ ಎಂದು ಅಪಜಲಪುರ ಕೆಎನ್ಎನ್ಎಲ್ ಎ ಇ ಇ ಸಂತೋಷ್ ಕುಮಾರ ಸಜ್ಜನ ತಿಳಿಸಿದ್ದಾರೆ.
ಆದರೆ ಕಳೆದ ಎರಡು ದಿನಗಳಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಗೆ ಜನರು ಕಂಗಾಲಾಗಿದ್ದಾರೆ ಎಲ್ಲೆಂದರಲ್ಲಿ ಮನೆಗಳ ಗೋಡೆಗಳು ಕುಸಿದು ಬೀಳುತ್ತಿವೆ, ಮಣ್ಣಿನ ಮನೆಗಳು ಸೋರುತ್ತಿವೆ, ಮಳೆಯಿಂದಾಗಿ ಜನರು ಹೈರಾಣಾಗಿದ್ದಾರೆ.

