Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕುಟುಂಬ ವ್ಯವಸ್ಥೆಯಲ್ಲಿ ಹಿರಿಯರ ಪಾತ್ರ ಬಹಳ ಮಹತ್ವದ್ದಾಗಿದೆ. ಚಿಕ್ಕ ಮಕ್ಕಳು ಪರಿಪೂರ್ಣತೆ ಹೊಂದಲು ಮನೆಯ ಹಿರಿಯರ ಅನುಭವದ ನುಡಿ ಕಿರಿಯರಿಗೆ ಅಮೃತವಿದ್ದಂತೆ, ಕಿರಿಯರು ತಮ್ಮ ಜೀವನವನ್ನು ಸುಂದರವಾಗಿ ರೂಪಿಸಿಕೊಂಡು ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಮನೆಯ ಹಿರಿಯರ ಮಾರ್ಗದರ್ಶನ ಹಾಗೂ ಸಲಹೆ ಅತಿ ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಪತ್ರಾಧಿಕಾರಿ ರಾಮಣ್ಣ ಅಥಣಿ ಹೇಳಿದರು.ಜಿಲ್ಲಾಡಳಿತ,ಜಿಲ್ಲಾ ಪಂಚಾಯತಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡ ಹಿರಿಯ ನಾಗರೀಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಒಂದು ಕುಟುಂಬಕ್ಕೆ ಭದ್ರ ಬುನಾದಿಯಾಗಿರುವ ಹಿರಿಯ ನಾಗರಿಕರ ಉಪಸ್ಥಿತಿ ಅವಶ್ಯಕವಾಗಿದೆ. ಎಳವೆಯಲ್ಲಿಅಜ್ಜ-ಅಜ್ಜಿ ಹತ್ತಿರ ಬೆಳೆಯುವುದರಿಂದ ಮಕ್ಕಳು ಸುಸಂಸ್ಕೃತರಾಗಿ ಜೀವನ ಸುಂದರಗೊಳ್ಳುತ್ತದೆ. ಮನೆಯ ಹಿರಿಯರು ಕಿರಿಯರಿಗೆ ಸದಾ ಮಾದರಿಯಾಗಿರುತ್ತಾರೆ ಎಂದು ಅವರು ಹೇಳಿದರು.ನಿವೃತ್ತ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಎಸ್.ಎನ್.ಬಸವರೆಡ್ಡಿ ಅವರು ಉಪನ್ಯಾಸ ನೀಡಿದರು.ಹಿರಿಯ…
ಕಲಕೇರಿಯಲ್ಲಿ ಶ್ರೀ ಪರಮೇಶ್ವರಿ ದೇವಿ ಪುರಾಣ ಪ್ರವಚನ | ದಾರ್ಮಿಕ ವಿಜಯ ಮಹೋತ್ಸವ ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಪ್ರತಿಯೊಬ್ಬರೂ ತಮ್ಮ ಅಂತ:ಕರಣದ ಮಾತುಗಳನ್ನು ಕೇಳಿ ಆತ್ಮಸಾಕ್ಷಿಯಾಗಿ ಬದುಕನ್ನು ನಡೆಸಿದರೆ ಜೀವನದಲ್ಲಿ ಪುಣ್ಯಪ್ರಾಪ್ತಿಯಾಗುತ್ತದೆ ಜೊತೆಗೆ ನಾವು ಪರರಿಗೆ ಉಪಕಾರ ಮಾಡಿದಾಗ ನಮಗೆ ಪುಣ್ಯ ಬರುತ್ತದೆಯೇ ಹೊರತು ಇನ್ನೊಬ್ಬರಿಗೆ ಕೇಡನ್ನು ಬಯಸಿದರೆ ಅವರಲ್ಲಿರುವ ಪಾಪ ಕಡಿಮೆಯಾಗಿ ನಮ್ಮನ್ನು ಸುತ್ತಿಕೊಳ್ಳುತ್ತದೆ ಆದ್ದರಿಂದ ಪರರಿಗೆ ಉಪಕಾರ ಮಾಡದಿದ್ದರೂ ಪರವಾಗಿಲ್ಲ ಇನ್ನೊಬ್ಬರಿಗೆ ಮನಸ್ಸಿನಲ್ಲಿಯೂ ಕೂಡಾ ಕೇಡನ್ನು ಬಯಸಬಾರದು ಅಂದಾಗ ಮಾತ್ರ ನಮ್ಮ ಜೀವನ ಪಾವನವಾಗುತ್ತದೆ ಎಂದು ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಆಶಿರ್ವಚನದಲ್ಲಿ ಹೇಳಿದರು.ಈ ಜಗತ್ತಿನಲ್ಲಿ ಅತಿ ವೇಗವಾಗಿ ಚಲಿಸುವ ವಸ್ತು ಎಂದರೆ ಮನಸ್ಸು, ಅಂತಹ ಮನಸ್ಸನ್ನು ಒಳ್ಳೆಯದಕ್ಕೊಸ್ಕರ ಇಂತಹ ಧಾರ್ಮಿಕ ಕಾರ್ಯಗಳಲ್ಲಿ, ದೇವರ ಪ್ರಾರ್ಥನೆಯಲ್ಲಿ, ಪುರಾಣ, ಪ್ರವಚನಗಳಲ್ಲಿ ತೊಡಗಿಸಿಕೊಂಡರೆ ಒಳ್ಳೆಯ ಸದೃಡ, ಸುಶಿಕ್ಷಿತ ಸಮಾಜ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ ಎಂದರು.ಕಲಕೇರಿಯ ಭವಾನಿ ದೇವಸ್ಥಾನದಲ್ಲಿ ಶರನ್ ನವರಾತ್ರಿ ವಿಜಯದಶಮಿ ನಿಮಿತ್ಯವಾಗಿ ದೇವಿ ಪುರಾಣ ಮಂಗಲೋತ್ಸವ,…
ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಪಾನಿಸಾಹೇಬ ಉರುಸ್ ಸಾಕ್ಷಿ ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಜಾತಿ ಜಾತಿ ಎಂದು ಹೊಡೆದಾಡದೇ, ಬೇಧಭಾವ ಮಾಡದೇ ಎಲ್ಲರೂ ಕೂಡಿ ಬಾಳಿದರೇ ಭೂಮಿಯೇ ಸ್ವರ್ಗ ಎಂದು ಶಿರಹಟ್ಟಿ ಜಗದ್ಗುರು ಫಕೀರೇಶ್ವರ ಭಾವೈಕ್ಯತಾ ಸಂಸ್ಥಾನಮಠ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಬಾಬಾನಗರ ಗ್ರಾಮದಲ್ಲಿ ಶನಿವಾರ ನಡೆದ ಹಜರತ್ ಬಾಬಾ ಪಾನಿಸಾಹೇಬ ಉರುಸ್ (ಜಾತ್ರೆ) ಹಾಗೂ ಸರ್ವ ಧರ್ಮ ಭಾವೈಕ್ಯತೆಯ ಮಹೋತ್ಸವದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ದೇವರು ಮನುಷ್ಯರನ್ನು ಸೃಷ್ಠಿ ಮಾಡಿದ, ಮನುಷ್ಯ ಜಾತಿಯನ್ನು ಸೃಷ್ಠಿ ಮಾಡಿದನು. ಗಂಡು ಮತ್ತು ಹೆಣ್ಣು ಎರಡೇ ಜಾತಿ, ಎಲ್ಲರ ದೇಹದಲ್ಲಿ ಹರಿಯುವ ರಕ್ತ ಒಂದೇಯಾಗಿದೆ. ಭೂಮಿಯ ಮೇಲೆ ಯಾರೂ ಹೆಚ್ಚಿನ ಜಾತಿಯವರಲ್ಲ ಯಾರೂ ಕಡಿಮೆ ಜಾತಿಯವರಲ್ಲ. ಮನುಷ್ಯ ಜಾತಿ ಅಂತ ಮಾತ್ರ ನಮ್ಮಲಿರಬೇಕು. ಮಕ್ಕಳ ತಲೆಯಲ್ಲಿ ಜಾತಿ ಎಂಬ ವಿಷ ಬೀಜ ತುಂಬದೇ ನೀತಿ, ಪ್ರೀತಿ, ಕರುಣೆ, ಮಮಕಾರ ತುಂಬಬೇಕು. ಎಲ್ಲರೂ ದ್ವೇಷ ಬಿಟ್ಟು ಪ್ರೀತಿ ಮಾಡಬೇಕು, ಪ್ರೀತಿಗಿಂತ ಮತ್ತೊಂದು ವಸ್ತು ಈ…
ಐತಿಹಾಸಿಕ ಜಾತ್ರೆಯಲ್ಲಿ ಹೇಳಿಕೆಗಳನ್ನು ಕೇಳಲು ಸೇರಿದ ಜನಸ್ತೋಮ ಉದಯರಶ್ಮಿ ದಿನಪತ್ರಿಕೆ ದೇವರ ಹಿಪ್ಪರಗಿ: ಅಶ್ವಾರೂಢ ರಾವುತರಾಯ ಬಂಡಿಯಲ್ಲಿ ಆಸೀನನಾಗಿ ಮಲ್ಲಯ್ಯನ ದೇವಸ್ಥಾನಕ್ಕೆ ತೆರಳುವುದರೊಂದಿಗೆ ಐತಿಹಾಸಿಕ ರಾವುತರಾಯ-ಮಲ್ಲಯ್ಯ ಜಾತ್ರೆ ಆರಂಭಗೊಂಡಿತು.ಪಟ್ಟಣದ ಸರ್ವಜನಪೂಜಿತ ರಾವುತರಾಯ ಶನಿವಾರ ನಸುಕಿನ ಮೂರು ಗಂಟೆಗೆ ಅಶ್ವಾರೂಢನಾಗಿ ತೆರೆದ ಬಂಡಿಯಲ್ಲಿ ಆಸೀನನಾಗಿ ಮೂಲ ದೇವಸ್ಥಾನದಿಂದ ಹೊರಟು ಬೆಳಗಿನ ೮ ಗಂಟೆಗೆ ಮಾನೆದೊಡ್ಡಿ ಎಂದೇ ಕರೆಯಲಾಗುವ ಸ್ಥಳದಲ್ಲಿ ನೂರಾರು ಭಕ್ತರು ಕಾಲ್ನಡಿಯಿಂದ ಹೊತ್ತು ತಂದ ಹೂಹಾರಗಳಿಂದ ಅಲಂಕಾರಗೊಂಡನು. ಇದನ್ನು ಹೂ ಮುಡಿಯುವುದು ಎಂದೇ ಕರೆಯಲಾಗುತ್ತಿದೆ. ನಂತರ ಶೀಡಗಟ್ಟಿ ಎಂಬ ಸ್ಥಳದಲ್ಲಿ ಕಾರಣಿಕರಿಂದ ಮುಂಬರುವ ಭವಿಷ್ಯದ ಕುರಿತಾಗಿ ಹೇಳಿಕೆಗಳು ಹೇಳಲ್ಪಟ್ಟವು.ಕಾರಣಿಕರ ಹೇಳಿಕೆಗಳು: ಬಿಳಿ ಕಾಳ ಮೇಲಾಯಿತು, ಕೆಂಪಕಾಳ ಕೆಳಗಾಯಿತು. ಕುಸುಬಿ, ಅಗಸಿ ಬೆನ್ನುಹತ್ತಿದವು. ಹತ್ತಿ ಗಗನಕ್ಕ ಹಾರಿತು, ಕಾಲಮಾನ ಬಾಳ ಕಷ್ಟ ಬಂತು, ಬಸವಣ್ಣನ ಕಾಪಾಡುಕೊಂಡವನ ಲಿಂಗದಂಗ ರಕ್ಷಣೆ ಮಾಡತೀನಿ. ನನ್ನ ಮೇಲೆ ನಂಬಿಕೆ ಇಟ್ಟು ಮಾಡಕತ್ತಿರಲ್ಲಾ ಬಾಳ ಸಂತೋಷ ಆಯಿತು. ಇದೇ ರೀತಿ ಮಾಡಿದ್ರ ಒಂದನೇ ಶ್ರೀಶೈಲ ಮಾಡ್ತೀನಿ. ಧರ್ಮ, ಕರ್ಮ…
ದೇವರಹಿಪ್ಪರಗಿ ಬಳಿ ಸಂಭವಿಸಿದ ಬಸ್ ಹಾಗೂ ಲಾರಿ ಅಪಘಾತ | ಅಪಘಾತದಲ್ಲಿ ಮೃತಪಟ್ಟ ಬಳಗಾನೂರಿನ ಬಾಲಕ | ಗಾಯಾಳುಗಳನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸಿದ ಶಾಸಕ ಅಶೋಕ ಮನಗೂಳಿ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಚಲಿಸುತ್ತಿದ್ದ ಲಾರಿಯ ಹಿಂಬದಿಗೆ ಬಸ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬಾಲಕನೋರ್ವ ಮೃತಪಟ್ಟು, ೩೦ ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ರಾತ್ರಿ ಪಟ್ಟಣದ ಹೊರವಲಯದಲ್ಲಿ ಜರುಗಿದೆ.ಪಟ್ಟಣದ ರಾಷ್ಟ್ರೀಯ ಹೆದ್ದಾರಿ ೫೦ ರಲ್ಲಿ ಸಿಂದಗಿ ರಸ್ತೆಯಲ್ಲಿನ ರಾಜಸ್ಥಾನಿ ಡಾಭಾ ಹತ್ತಿರ ಶುಕ್ರವಾರ ರಾತ್ರಿ ೧೦ ಗಂಟೆಯ ಸುಮಾರಿಗೆ ಈ ಘಟನೆ ಜರುಗಿದೆ.ಕಲಬುರ್ಗಿಗೆ ತೆರಳುತ್ತಿದ್ದ ಚಿಕ್ಕೋಡಿ-ಕಲಬುರ್ಗಿ(ಕೆಎ ೨೮ ಎಫ್ ೨೩೬೯) ಸಾರಿಗೆ ಬಸ್ ಮುಂದೆ ಚಲಿಸುತ್ತಿದ್ದ ಲಾರಿಗೆ(ಎಮ್‌ಎಚ್-೧೩ ಎಎಕ್ಸ ೩೫೬೫) ಗುದ್ದಿದ ಪರಿಣಾಮ ಬಸ್‌ನಲ್ಲಿ ಚಲಿಸುತ್ತಿದ್ದ ೩೦ ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡರು.ಅದೇ ಸಮಯದಲ್ಲಿ ಹೆದ್ದಾರಿ ಮೂಲಕ ತೆರಳುತ್ತಿದ್ದ ಸಿಂದಗಿ ಶಾಸಕ ಅಶೋಕ ಮನಗೂಳಿ ಅಪಘಾತ ಸ್ಥಳದಲ್ಲಿದ್ದು ತಕ್ಷಣವೇ ಕಾರ್ಯಪ್ರವೃತ್ತರಾಗಿ ಗಾಯಾಳಗಳನ್ನು ಸಿಂದಗಿ, ರೋಗಿಗಳಿಗೆ ಧೈರ್ಯ ತುಂಬಿದರಲ್ಲದೆ,…
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕಾರ್ಯಕ್ರಮದಲ್ಲಿ ಹಿರಿಯ ಗಾಂಧೀವಾದಿ ಸುಧೀಂದ್ರ ಕುಲಕರ್ಣಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸತ್ಯ ಮತ್ತು ಅಹಿಂಸೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜೀವನ ಸಂದೇಶಗಳಾಗಿವೆ. ನನ್ನ ಜೀವನ ಕ್ರಮವೇ ನನ್ನ ಜೀವನ ಸಂದೇಶ ಎಂದು ಗಾಂಧೀಜಿ ಅವರು ಯಾವಾಗಲೂ ಹೇಳುತ್ತಿದ್ದರು ಎಂದು ಹಿರಿಯ ಗಾಂಧೀವಾದಿ ಸುಧೀಂದ್ರ ಕುಲಕರ್ಣಿ ಹೇಳಿದರು.ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್ ಕೋಶ ಹಾಗೂ ಗಾಂಧಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆಗಸ್ಟ್ಕ್ರಾಂತಿ ಟ್ರಸ್ಟ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ “ಮಹಾತ್ಮಾ ಗಾಂಧೀಜಿ ಅವರ ಜೀವನ ಸಂದೇಶಗಳು” ಕುರಿತು ಮಾತನಾಡಿದರು.ನಾನು ಬರೆದದ್ದು, ನನ್ನ ಬಗೆಗೆ ಬೇರೆಯವರು ಬರೆದಿರುವುದಕ್ಕಿಂತ ನನ್ನ ಬದುಕೇ ನನ್ನ ಜೀವನ ಸಂದೇಶ ಎಂದು ಹೇಳುತ್ತಿದ್ದ ಮಹಾತ್ಮಾ ಗಾಂಧೀಜಿಯವರ ವಿಚಾರ-ಆಚಾರಗಳಲ್ಲಿ ಯಾವುದೇ ಅಂತರವಿರುತ್ತಿರಲಿಲ್ಲ. ಇಂಥ ಮಹಾನ್ ವ್ಯಕ್ತಿಯ ಆದರ್ಶ ಇಡೀ ಜಗತ್ತಿಗೇ ಮಾದರಿ ಎಂದು ಬಣ್ಣಿಸಿದರು.ಸತ್ಯ ಬಹಳ ಗಹನವಾದ ವಿಷಯ. ಸತ್ಯವೇ ದೇವರು. ನಾಸ್ತಿಕರಿಗೆ ದೇವರ ಬಗೆಗೆ ನಂಬಿಕೆ ಇರಲಿಕ್ಕಿಲ್ಲ. ಆದರೆ ಸತ್ಯವೇ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಿರಿಯ ನಾಗರೀಕರ ಕ್ಷೇಮಾಭಿವೃದ್ಧಿ ಸಂಘ (ರಿ), ನವರಸಪುರ ಇವರು ಅ.೦೫ ರಂದು ಮುಂಜಾನೆ ೧೦.೩೦ ಗಂಟೆಗೆ ಶಿವಾನುಭವ ಮಂಟಪ, ಶಿವಾಲಯ ಸೇನಾ ನಗರ, ನವರಸಪುರ ಇಲ್ಲಿ ಅಂತರಾಷ್ಟ್ರೀಯ ಹಿರಿಯ ನಾಗರೀಕರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಿದೆ.ಕಾರ್ಯಕ್ರಮದ ಸಾನಿಧ್ಯವನ್ನು ಬುರಣಾಪೂರದ ಆರೂಢ ಆಶ್ರಮದ ಯೋಗೇಶ್ವರಿ ಮಾತಾಜೀ ಇವರು ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಎಲ್.ಇಂಗಳೇಶ್ವರ ವಹಿಸಲಿದ್ದಾರೆ.ಅತಿಥಿ ಉಪನ್ಯಾಸಕರಾಗಿ ಪ್ರಾಧ್ಯಾಪಕರಾದ ಯು.ಎನ್.ಕುಂಟೋಜಿ, ಅತಿಥಿಗಳಾಗಿ, ಬಿ.ಡಿ.ಕಡಕೋಳ, ಎಲ್.ಎ.ಶಿಂಧೆ, ಕೆ.ಜಿ.ಕೋಟ್ಯಾಳ ಹಾಗೂ ಎಸ್.ಐ.ಹಿರೇಮಠ ಇವರು ಆಗಮಿಸಲಿದ್ದಾರೆ.ವಿಶೇಷ ಆಹ್ವಾನಿತ ಅತಿಥಿಗಳಾಗಿ ಶ್ರೀ ಗುರುಬಸಯ್ಯ ಹಿರೇಮಠ, ಪ್ರೊ. ಎಂ.ಎಸ್.ಖೊದ್ನಾಪೂರ ಪ್ರೊ. ಬಿ. ವ್ಹಿ. ಕುಂಬಾರ ಹಾಗೂ ಶ್ರೀ ಬಸವರಾಜ ಜಾಲವಾದಿ ಇವರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಹಿರಿಯ ನಾಗರೀಕರ ಕ್ಷೇಮಾಭಿವೃದ್ಧಿ ಸಂಘ (ರಿ) ನವರಸಪುರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದ ಭೀಮನಗರದಲ್ಲಿ ಸುಸಜ್ಜಿದ ನೂತನ ಗರಡಿ ಮನೆ ನಿರ್ಮಿಸಬೇಕೆಂದು ಆಗ್ರಹಿಸಿ ಡಾ. ಬಿ.ಆರ್. ಅಂಬೇಡ್ಕರ್ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಪದಾಧಿಕಾರಿಗಳು ಇಲ್ಲಿನ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಿಗೆ ಶುಕ್ರವಾರ ಮನವಿ ನೀಡಿ ಒತ್ತಾಯಿಸಿದ್ದಾರೆ.ಇಲ್ಲಿನ ಪಿಡಿಓ ರವರು ವಾರ್ಡ ಸಂಖ್ಯೆ ೯ರ ಆಸ್ತಿಸಂಖ್ಯೆ ೯೧೮/೪/೧ ರಲ್ಲಿ ಗರಡಿಮನೆ ನಿರ್ಮಿಸುವುದಾಗಿ ಧ್ರಡಿಕರಣ ಪ್ರಮಾಣ ಪತ್ರ ನೀಡಿದ್ದಾರೆ. ಅದರನ್ವಯ ಬಾಗಲಕೋಟೆಯ ಪಿಆರ್‌ಇಡಿಯಿಂದ ಸಾರ್ವಜನಿಕ ಗರಡಿಮನೆ ನಿರ್ಮಾಣಕ್ಕೆ ಹತ್ತು ಲಕ್ಷರೂ.ಗಳ ಅನುದಾನವು ಈಗಾಗಲೇ ಬಿಡುಗಡೆಯಾಗಿದ್ದು ಕಾಮಗಾರಿ ಪ್ರಾರಂಭಿಸಲು ವಿಳಂಬಧೋರಣೆ ಅನುಸರಿಸದೆ ಕೂಡಲೆ ಪ್ರಾರಂಭಿಸಬೇಕೆAದು ಭೀಮಶಿ ದೊಡವಾಡ, ತೇರದಾಳ ಮತಕ್ಷೇತ್ರದ ಯೂಥ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಅಶೋಕ ಪೂಜಾರಿ, ಶಿಕ್ಷಕ ಯಲ್ಲಪ್ಪ ಬಜಂತ್ರಿ ಸೇರಿದಂತೆ ಹಲವಾರು ಜನ ಯುವಕರು ಒತ್ತಾಯಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರ ಜನ್ಮದಿನದ ಅಂಗವಾಗಿ ಅಕ್ಟೋಬರ್ 7ರಂದು ಮಂಗಳವಾರ ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಬೃಹತ್ ಶಿಬಿರಗಳನ್ನು ಆಯೋಜಿಸಲಾಗಿದೆ.ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನೆ ಕೇಂದ್ರದ ವತಿಯಿಂದ ತಿಕೋಟಾ, ಬಬಲೇಶ್ವರ, ದೇವರ ಗೆಣ್ಣೂರ ಮತ್ತು ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ವರೆಗೆ ಈ ಶಿಬಿರ ನಡೆಯಲಿವೆ.ತಿಕೋಟಾದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಬಬಲೇಶ್ವರದಲ್ಲಿ ಕಾಖಂಡಕಿ ರಸ್ತೆಯ ಶ್ರೀ ಶಾಂತವೀರ ಪ್ರೌಢಶಾಲೆ ಆವರಣ, ದೇವರ ಗೆಣ್ಣೂರಿನ ನಮ್ಮೂರು ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಉಕ್ಕಲಿಯ ನ್ಯೂ ಇಂಗ್ಲಿಷ್ ಪ್ರೌಢ ಶಾಲೆಯಲ್ಲಿ ಈ ಶಿಬಿರಗಳನ್ನು ಆಯೋಜಿಸಲಾಗಿದೆ.ಈ ಶಿಬಿರಗಳಲ್ಲಿ ವೈದ್ಯಕೀಯ ವಿಭಾಗ, ಶಸ್ತ್ರಚಿಕಿತ್ಸೆ, ಎಲುಬು ಮತ್ತು ಕೀಲು ಚಿಕಿತ್ಸೆ,…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕನಕದಾಸ ವೃತ್ತದಿಂದ ಗೋಲಗೇರಿ ಬೈಪಾಸವರೆಗಿನ ರಸ್ತೆಗೆ ಸ್ವಾಮಿ ರಮಾನಂದ ತೀರ್ಥರ ಹೆಸರಿಟ್ಟಿದ್ದು ಸಂತಸ. ಅವರ ಹೆಸರಿನಲ್ಲಿ ಗೋಲಗೇರಿ ಬೈಪಾಸ್‌ಗೆ ಸ್ವಾಗತ ಬಾಗಿಲು ನಿರ್ಮಾಣ ಮಾಡಬೇಕು. ಮತ್ತು ಇದೊಂದು ರಾಷ್ಟ್ರ ಮಟ್ಟದ ಸ್ಮಾರಕ ಭವನ. ಇದನ್ನು ಯಾವುದೋ ಒಂದು ಸಮುದಾಯಕ್ಕೆ ಹಸ್ತಾಂತರಿಸುವುದು ನಮ್ಮ ವಿರೋಧವಿದೆ. ಹಸ್ತಾಂತರಿಸುವುದಾದರೆ ಅದಕ್ಕೆ ಖಂಡಿಸುತ್ತೇವೆ ಎಂದು ಲಿಂಬೆ ಅಭಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ ಹೇಳಿದರು.ಸಿಂದಗಿ ಪಟ್ಟಣದ ಸ್ವಾಮಿ ರಮಾನಂದ ತೀರ್ಥರ ಸ್ಮಾರಕ ಭವನದಲ್ಲಿ ಹಮ್ಮಿಕೊಂಡ ಸ್ವಾಮಿರಮಾನಂದ ತೀರ್ಥರ ೧೨೨ನೆಯ ಜಯಂತಿ ಕಾರ್ಯಕ್ರಮದಲ್ಲಿ ಮೂರ್ತಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ರಾಷ್ಟ್ರಕ್ಕಾಗಿ ದುಡಿದ ಸ್ವಾತಂತ್ರ ಹೋರಾಟಗಾರರ ಜಯಂತಿಯನ್ನು ನಾವು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಆಚರಿಸಿ ಗೌರವಿಸುತ್ತೇವೆ. ಆದರೆ ಸ್ವಾಮಿರಮಾನಂದ ತೀರ್ಥರ ಜಯಂತಿ ಆಚರಣೆಯ ಕುರಿತು ರಾಜ್ಯ ಸರಕಾರ ಗಮನ ಹರಿಸದೇ ಇರುವದರಿಂದ ಅವರ ಅಭಿಮಾನಿಗಳು ಮತ್ತು ಸಿಂದಗಿ ನಗರದ ಜನತೆ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿ ಸರಕಾರದ ವತಿಯಿಂದ ಜಯಂತಿ ಆಚರಿಸುವಂತೆ…
