ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹಿರಿಯ ನಾಗರೀಕರ ಕ್ಷೇಮಾಭಿವೃದ್ಧಿ ಸಂಘ (ರಿ), ನವರಸಪುರ ಇವರು ಅ.೦೫ ರಂದು ಮುಂಜಾನೆ ೧೦.೩೦ ಗಂಟೆಗೆ ಶಿವಾನುಭವ ಮಂಟಪ, ಶಿವಾಲಯ ಸೇನಾ ನಗರ, ನವರಸಪುರ ಇಲ್ಲಿ ಅಂತರಾಷ್ಟ್ರೀಯ ಹಿರಿಯ ನಾಗರೀಕರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ಬುರಣಾಪೂರದ ಆರೂಢ ಆಶ್ರಮದ ಯೋಗೇಶ್ವರಿ ಮಾತಾಜೀ ಇವರು ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಎಲ್.ಇಂಗಳೇಶ್ವರ ವಹಿಸಲಿದ್ದಾರೆ.
ಅತಿಥಿ ಉಪನ್ಯಾಸಕರಾಗಿ ಪ್ರಾಧ್ಯಾಪಕರಾದ ಯು.ಎನ್.ಕುಂಟೋಜಿ, ಅತಿಥಿಗಳಾಗಿ, ಬಿ.ಡಿ.ಕಡಕೋಳ, ಎಲ್.ಎ.ಶಿಂಧೆ, ಕೆ.ಜಿ.ಕೋಟ್ಯಾಳ ಹಾಗೂ ಎಸ್.ಐ.ಹಿರೇಮಠ ಇವರು ಆಗಮಿಸಲಿದ್ದಾರೆ.
ವಿಶೇಷ ಆಹ್ವಾನಿತ ಅತಿಥಿಗಳಾಗಿ ಶ್ರೀ ಗುರುಬಸಯ್ಯ ಹಿರೇಮಠ, ಪ್ರೊ. ಎಂ.ಎಸ್.ಖೊದ್ನಾಪೂರ ಪ್ರೊ. ಬಿ. ವ್ಹಿ. ಕುಂಬಾರ ಹಾಗೂ ಶ್ರೀ ಬಸವರಾಜ ಜಾಲವಾದಿ ಇವರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಹಿರಿಯ ನಾಗರೀಕರ ಕ್ಷೇಮಾಭಿವೃದ್ಧಿ ಸಂಘ (ರಿ) ನವರಸಪುರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
