ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಗ್ರಾಮದ ಭೀಮನಗರದಲ್ಲಿ ಸುಸಜ್ಜಿದ ನೂತನ ಗರಡಿ ಮನೆ ನಿರ್ಮಿಸಬೇಕೆಂದು ಆಗ್ರಹಿಸಿ ಡಾ. ಬಿ.ಆರ್. ಅಂಬೇಡ್ಕರ್ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಪದಾಧಿಕಾರಿಗಳು ಇಲ್ಲಿನ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಿಗೆ ಶುಕ್ರವಾರ ಮನವಿ ನೀಡಿ ಒತ್ತಾಯಿಸಿದ್ದಾರೆ.
ಇಲ್ಲಿನ ಪಿಡಿಓ ರವರು ವಾರ್ಡ ಸಂಖ್ಯೆ ೯ರ ಆಸ್ತಿಸಂಖ್ಯೆ ೯೧೮/೪/೧ ರಲ್ಲಿ ಗರಡಿಮನೆ ನಿರ್ಮಿಸುವುದಾಗಿ ಧ್ರಡಿಕರಣ ಪ್ರಮಾಣ ಪತ್ರ ನೀಡಿದ್ದಾರೆ. ಅದರನ್ವಯ ಬಾಗಲಕೋಟೆಯ ಪಿಆರ್‌ಇಡಿಯಿಂದ ಸಾರ್ವಜನಿಕ ಗರಡಿಮನೆ ನಿರ್ಮಾಣಕ್ಕೆ ಹತ್ತು ಲಕ್ಷರೂ.ಗಳ ಅನುದಾನವು ಈಗಾಗಲೇ ಬಿಡುಗಡೆಯಾಗಿದ್ದು ಕಾಮಗಾರಿ ಪ್ರಾರಂಭಿಸಲು ವಿಳಂಬಧೋರಣೆ ಅನುಸರಿಸದೆ ಕೂಡಲೆ ಪ್ರಾರಂಭಿಸಬೇಕೆAದು ಭೀಮಶಿ ದೊಡವಾಡ, ತೇರದಾಳ ಮತಕ್ಷೇತ್ರದ ಯೂಥ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಅಶೋಕ ಪೂಜಾರಿ, ಶಿಕ್ಷಕ ಯಲ್ಲಪ್ಪ ಬಜಂತ್ರಿ ಸೇರಿದಂತೆ ಹಲವಾರು ಜನ ಯುವಕರು ಒತ್ತಾಯಿಸಿದ್ದಾರೆ.

