Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಆರಾಧ್ಯ ದೈವ ಶ್ರೀ ಸಿದ್ದೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವದ 2ನೇ ದಿನವಾದ ಸೋಮವಾರ ನಗರದ ಪ್ರಮುಖ ಬೀದಿಗಳಲ್ಲಿ ನಂದಿ ಧ್ವಜಗಳ ಭವ್ಯ ಮೆರವಣಿಗೆ ನಡೆಯಿತು.ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷರಾದ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಹಾಗೂ ಜಾತ್ರಾ ಸಮಿತಿ ಸದಸ್ಯರು ಬಾನೆತ್ತರದ ನಂದಿ ಧ್ವಜಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ನಂದಿ ಧ್ವಜಗಳ ಉತ್ಸವಕ್ಕೆ ಚಾಲನೆ ದೊರೆಯಿತು.ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಗಣಪತಿ ವೃತ್ತ, ಗಾಂಧಿ ಚೌಕ್, ಕಿರಾಣಿ ಬಜಾರ್, ಸರಾಫ್ ಬಜಾರ್, 770 ಲಿಂಗದ ಗುಡಿ ತಲುಪಿತು. ಅಲ್ಲಿಂದ ನೀಲಕಂಠೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ನಂದಿ ಧ್ವಜಗಳು ಮರಳಿ ಸಿದ್ದೇಶ್ವರ ದೇವಸ್ಥಾನ ತಲುಪಿತು. ಸಂಜೆ ಮಂಗಳ ವಾದ್ಯ, ರಾತ್ರಿ ಭಜನಾ ಭಜನಾ ಕಾರ್ಯಕ್ರಮಗಳು ಜರುಗಿದವು.ಮೇಯರ್ ಎಂ.ಎಸ್. ಕರಡಿ, ಸಂಸ್ಥೆಯ ಉಪಾಧ್ಯಕ್ಷರಾದ ಸಂಗು ಸಜ್ಜನ, ಚೇರಮನ್ ಬಸಯ್ಯ ಹಿರೇಮಠ, ಪದಾಧಿಕಾರಿಗಳಾದ ಸದಾನಂದ ದೇಸಾಯಿ, ಬಿ.ಎಸ್.ಸುಗೂರ, ಎಂ.ಎಂ.ಸಜ್ಜನ, ಶಿವಾನಂದ ನೀಲಾ,…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ನಿಂಬೆ ಬೆಳೆಗಾರರ ಹೋರಾಟ ಸಮಿತಿ ವತಿಯಿಂದ ಮಂಗಳವಾರ ಜನವರಿ ೧೩ರಂದು ಬೆಳಗ್ಗೆ ೧೦ ಗಂಟೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತಾಪಿ ವರ್ಗದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ನಿಂಬೆಯ ಪ್ರತಿವೊಂದು ಡಾಗ್ ಗೆ ೨೫೦೦ ಬೆಂಬಲ ಬೆಲೆ ಘೋಷಿಸಬೇಕು, ನಿಂಬೆ ಅಭಿವೃದ್ಧಿ ಮಂಡಳಿ ಮುಖಾಂತರವೇ ಖರೀದಿ ಕೇಂದ್ರ ಸ್ಥಾಪಿಸಬೇಕು, ಇಂಡಿ ನಗರದಲ್ಲಿ ಕೋಲ್ಡ್ ಸ್ಟೋರೇಜ್ ಗಳನ್ನು ಸ್ಥಾಪಿಸಬೇಕು, ಬೇಸಿಗೆ ಸಮಯದಲ್ಲಿ ನಿಂಬೆ ಗಿಡಗಳು ಗುಣಗುವ ಹಂತದಲ್ಲಿದ್ದಾಗ ನಿಂಬೆ ಅಭಿವೃದ್ಧಿ ಮಂಡಳಿ ಮುಖಾಂತರ ಟ್ಯಾಂಕರ್ ಮೂಲಕ ಉಚಿತ ನೀರು ಒದಗಿಸಬೇಕು ಎಂಬ ಇತ್ಯಾದಿ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನಿಂಬೆ ಬೆಳೆಗಾರರ ಹೋರಾಟ ಸಮಿತಿ ತಿಳಿಸಿದೆ.ಹೋರಾಟಕ್ಕೆ ಬೆಂಬಲನಿಂಬೆ ಬೆಳೆಗಾರರು ನಡೆಸಲು ತೀರ್ಮಾನಿಸಿರುವ ಹೋರಾಟಕ್ಕೆ ಜೆಡಿಎಸ್ ಪಕ್ಷದ ಅಧ್ಯಕ್ಷ ಬಿ ಡಿ ಪಾಟೀಲ ಹಾಗೂ ಭಾರತೀಯ ಜನತಾ ಪಾರ್ಟಿ ಅಧ್ಯಕ್ಷ ಹನುಮಂತರಾಯಗೌಡ ಪಾಟೀಲ ಅವರು ತಮ್ಮ ಪಕ್ಷಗಳ ಪರವಾಗಿ ರೈತರ ಹೋರಾಟಕ್ಕೆ ಬೆಂಬಲ ಘೋಷಿಸಿದ್ದಾರೆ.ರೈತ ಸಂಘಟನೆಯ ಹಸಿರು ಸೇನೆ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ನಿಂಬೆ ಬೆಳೆಗಾರರ ಹೋರಾಟ ಸಮಿತಿ ವತಿಯಿಂದ ಮಂಗಳವಾರ ಜನವರಿ ೧೩ರಂದು ಬೆಳಗ್ಗೆ ೧೦ ಗಂಟೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತಾಪಿ ವರ್ಗದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ನಿಂಬೆಯ ಪ್ರತಿವೊಂದು ಡಾಗ್ ಗೆ ೨೫೦೦ ಬೆಂಬಲ ಬೆಲೆ ಘೋಷಿಸಬೇಕು, ನಿಂಬೆ ಅಭಿವೃದ್ಧಿ ಮಂಡಳಿ ಮುಖಾಂತರವೇ ಖರೀದಿ ಕೇಂದ್ರ ಸ್ಥಾಪಿಸಬೇಕು, ಇಂಡಿ ನಗರದಲ್ಲಿ ಕೋಲ್ಡ್ ಸ್ಟೋರೇಜ್ ಗಳನ್ನು ಸ್ಥಾಪಿಸಬೇಕು, ಬೇಸಿಗೆ ಸಮಯದಲ್ಲಿ ನಿಂಬೆ ಗಿಡಗಳು ಗುಣಗುವ ಹಂತದಲ್ಲಿದ್ದಾಗ ನಿಂಬೆ ಅಭಿವೃದ್ಧಿ ಮಂಡಳಿ ಮುಖಾಂತರ ಟ್ಯಾಂಕರ್ ಮೂಲಕ ಉಚಿತ ನೀರು ಒದಗಿಸಬೇಕು ಎಂಬ ಇತ್ಯಾದಿ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನಿಂಬೆ ಬೆಳೆಗಾರರ ಹೋರಾಟ ಸಮಿತಿ ತಿಳಿಸಿದೆ.ಹೋರಾಟಕ್ಕೆ ಬೆಂಬಲನಿಂಬೆ ಬೆಳೆಗಾರರು ನಡೆಸಲು ತೀರ್ಮಾನಿಸಿರುವ ಹೋರಾಟಕ್ಕೆ ಜೆಡಿಎಸ್ ಪಕ್ಷದ ಅಧ್ಯಕ್ಷ ಬಿ ಡಿ ಪಾಟೀಲ ಹಾಗೂ ಭಾರತೀಯ ಜನತಾ ಪಾರ್ಟಿ ಅಧ್ಯಕ್ಷ ಹನುಮಂತರಾಯಗೌಡ ಪಾಟೀಲ ಅವರು ತಮ್ಮ ಪಕ್ಷಗಳ ಪರವಾಗಿ ರೈತರ ಹೋರಾಟಕ್ಕೆ ಬೆಂಬಲ ಘೋಷಿಸಿದ್ದಾರೆ.ರೈತ ಸಂಘಟನೆಯ ಹಸಿರು ಸೇನೆ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ದೇಹದ ನ್ಯೂನ್ಯತೆಗೆ ಸವಾಲೆಸೆದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರು ನಮ್ಮ ಜೊತೆಗಿದ್ದಾರೆ. ಇಂತಹ ವಿಕಲಚೇತನರು ನಮ್ಮ ಸಮಾಜಕ್ಕೆ ಮಾದರಿ. ಇವರಿಂದ ನಾವು ಕಲಿಯಬೇಕಾಗಿರುವದು ಬಹಳ ಇದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಅಭಿಪ್ರಾಯಪಟ್ಟರು. ಅವರು ಶನಿವಾರ ಇಂಡಿ ನಗರದ ತಾಲ್ಲೂಕು ಪಂಚಾಯತಿ ಸಭಾ ಭವನದಲ್ಲಿ ವಿಕಲಚೇತನರ ಒಕ್ಕೂಟ ಆಯೋಜಿಸಿದ್ದ ೨೦೨೫-೨೦೨೬ನೇ ಸಾಲಿನ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ವಿಕಲಚೇತನರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ಸಲ್ಲಿಸಿದ ಅಹವಾಲುಗಳನ್ನು ಸ್ವೀಕರಿಸಿ, ಅವುಗಳನ್ನು ಶೀಘ್ರದಲ್ಲಿಯೇ ಈಡೇರಿಸುವದಾಗಿ ಭರವಸೆ ನೀಡಿದರು.ವೇದಿಕೆಯಲ್ಲಿ ತಾಲ್ಲೂಕಿನ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಕರೆ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮಕ್ಕಳು ಸಮಾಜದ ಅಂಕುಡೊಂಕು, ತಪ್ಪುಗಳನ್ನು ಪ್ರತಿರೋಧಿಸುವ ಮನೋಭಾವವನ್ನು ಬಾಲ್ಯದಿಂದಲೇ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಹೇಳಿದರು.ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಎ.ಬಿ.ಸಾಲಕ್ಕಿ ಪ್ರೌಢಶಾಲೆಯಲ್ಲಿ ಸೋಮವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವಿಜಯಪುರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಮಕ್ಕಳ ಘಟಕ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಮಕ್ಕಳ ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಮಕ್ಕಳು ಅದರಲ್ಲಿ ಹೆಣ್ಣುಮಕ್ಕಳು ಬಾಲ್ಯದಿಂದಲೇ ಶೋಷಣೆ, ಒತ್ತಡ, ನಿರ್ಲಕ್ಷö್ಯಕ್ಕೆ ಒಳಗಾಗಿ ಶಿಕ್ಷಣದಿಂದ ವಂಚಿತರಾಗುವ ಸಂದರ್ಭಗಳಿವೆ. ಆಗ ನಾವು ಇಂಥ ಘಟನೆಗಳ ಬಗ್ಗೆ ಅರಿಯಬೇಕು. ಮಕ್ಕಳ ಹಕ್ಕುಗಳ ಬಗ್ಗೆ ಅರಿತು ಸಮಾಜದ ಪರಿಸರದಲ್ಲಿ ಆಗುವ ಬಾಲಕಾರ್ಮಿಕತೆ, ಬಾಲ್ಯವಿವಾಹದಂತಹ ತಪ್ಪುಗಳನ್ನು ಖಂಡಿಸುವ ಮನೋಭಾವ ಬೆಳೆಸಿಕೊಂಡಾಗ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ವಿವಿಧ ತೆರನಾದ ಹಣ್ಣು, ತರಕಾರಿ, ಮಣ್ಣಿನ ವಿಧಗಳು, ಪರಿಸರ ಸಂರಕ್ಷಣೆ ಸಹಿತ ವಿಜ್ಞಾನ, ಆಹಾರ, ಕೃಷಿ, ಅರಣ್ಯಗಳ ಕುರಿತು ಮಕ್ಕಳು ನೀಡಿದ ಮಾಹಿತಿ ಕೇಳುಗರ ಕಣ್ಮನ ಸೆಳೆದವು.ಪಟ್ಟಣದ ಇಂದುಮತಿ ಸಾವಳಗಿ ಆಂಗ್ಲ್ ಮಾಧ್ಯಮ ಶಾಲೆಯಲ್ಲಿ ಸೋಮವಾರ ಜರುಗಿದ ಒಂದು ದಿನದ ವಿಜ್ಞಾನ, ಆಹಾರ, ಕೃಷಿ, ಅರಣ್ಯಗಳ ಕುರಿತಾದ ಪ್ರದರ್ಶನ ಮೇಳದಲ್ಲಿ ಚಿಕ್ಕ ಮಕ್ಕಳು ತಮ್ಮ ತೊದಲು ನುಡಿಗಳ ಮೂಲಕ ತಾವೇ ತಯಾರಿಸಿದ ವಿಜ್ಞಾನದ ಕೌತುಕಗಳ ಮಾದರಿಗಳನ್ನು ಪ್ರದರ್ಶಿಸಿದರು. ಅಲ್ಲದೇ ಜ್ವಾಲಾಮುಖಿಯ ಮೂಲಕ ಹೊರಹೊಮ್ಮುವ ಲಾವಾರಸ ಮಾದರಿ, ನೀರು ಶುದ್ಧಿಕರಣ ಮಾಡುವ ವಿಧಾನಗಳು, ನೀರಿನಲ್ಲಿ ತೇಲುವ ಮನೆ ಮಾದರಿ, ಪರಿಸರ ಮಾಲಿನ್ಯ, ಅರಣ್ಯೀಕರಣಗಳ ಕುರಿತು ಮಾಹಿತಿ ನೀಡುತ್ತಾ ಮಾತನಾಡಿದ ಮಕ್ಕಳು ನೋಡುಗರ ಗಮನ ಸೆಳೆದರು.ಸಂಸ್ಥೆಯ ಅಧ್ಯಕ್ಷ ಶಾಂತಪ್ಪ ಸಾವಳಗಿ, ಶಂಕರಗೌಡ ಪಾಟೀಲ(ಆಲಗೂರ), ಸಂಗನಗೌಡ ಪಾಟೀಲ, ದೇವೇಂದ್ರ ಹಳಿಮನಿ ಸಹಿತ ಪಾಲಕರು ಭೇಟಿ ನೀಡಿ ಮಕ್ಕಳ ಪ್ರತಿಭೆಗೆ ತಮ್ಮ ಸಂತೋಷ ವ್ಯಕ್ತಪಡಿಸಿದರು.ಸಂಸ್ಥೆಯ ಕಾರ್ಯದರ್ಶಿ ಸಂತೋಷ ಸಾವಳಗಿ, ಶಿಕ್ಷಕಿಯರಾದ ಪವಿತ್ರಾ ಹಳಿಮನಿ,…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸ್ವರ್ಣಭೂಮಿ ಫೌಂಡೇಶನ್, ಕರ್ನಾಟಕ ಹಾಗೂ ರೋಟರಿ ಕ್ಲಬ್, ಕೋಲಾರ ಇವರ ಸಂಯುಕ್ತ ಆಶ್ರಯದಲ್ಲಿ ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಕನ್ನಡ ಹಬ್ಬ-೨೦೨೬, ಪುಸ್ತಕ ಬಿಡುಗಡೆ, ಹಾಗೂ ವಿವಿಧ ಪಕ್ಷ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಂದಗಿ ತಾಲೂಕಿನ ಬೋರಗಿ ಗ್ರಾಮದ ಹೆಡ್ ಕಾನ್ಸ್ಟೇಬಲ್ ಮೌಲಾಲಿ ಕೆ.ಆಲಗೂರ ಅವರಿಗೆ ಸಾಹಿತ್ಯ ಸೇವೆಯನ್ನು ಪರಿಗಣಿಸಿ, ಸ್ವರ್ಣಭೂಮಿ ಸ್ಟಾರ್ ಅಚೀವರ್ಸ್ ಅವಾರ್ಡ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸ್ವರ್ಣಭೂಮಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಬಿ.ಶಿವಕುಮಾರ್, ಸಾಹಿತಿಗಳಾದ ಡಾ.ಶರಣಪ್ಪ ಗಬ್ಬೂರ, ಡಾ.ಇಂಚರಾ ನಾರಾಯಣಸ್ವಾಮಿ, ಮೈಸೂರು ಕಸಾಪ ಜಿಲ್ಲಾ ಅಧ್ಯಕ್ಷ ಮಡ್ಡಿಕೇರಿ ಗೋಪಾಲ, ಆರಕ್ಷಕ ಅಂಬರೀಶ್ ನಾಗಾವಿ ಸೇರಿದಂತೆ ಇತರರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಇಂದಿನ ವಿದ್ಯಾರ್ಥಿಗಳು ಪರಿಶ್ರಮ, ಶಿಸ್ತು, ಸಮಯ ಪಾಲನೆ ಹಾಗೂ ನಿರಂತರ ಜ್ಞಾನರ್ಜನೆಯೊಂದಿಗೆ ಮೌಲ್ಯಯುತ ಬದುಕಿಗೆ ಮೊದಲ ಆದ್ಯತೆ ನೀಡಿ ಸದೃಢ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಹಿರೇರೂಗಿ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹಾಗೂ ಸಾಹಿತಿ ಸಂತೋಷ ಎಸ್.ಬಂಡೆ ಹೇಳಿದರು.ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ಶ್ರೀ ಪದ್ಮರಾಜ ಮಹಿಳಾ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಉಪನ್ಯಾಸಕರು ಸೇವಾ ಮನೋಭಾವನೆಯಿಂದ ಕರ್ತವ್ಯವನ್ನು ನಿರ್ವಹಿಸಿ ತಮ್ಮ ವಿದ್ಯೆಯನ್ನು ಧಾರೆ ಎರೆಯುವವರಾಗಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.ಕಾರ್ಯಕ್ರಮದ ಪಾವನ ಸಾನಿಧ್ಯ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಮ್ಮುಖ ವಹಿಸಿದ ಶ್ರೀ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು.ಪ್ರಾಚಾರ್ಯ ವ್ಹಿ.ಡಿ ಪಾಟೀಲ ಅಧ್ಯಕ್ಷೀಯ ಮಾತುಗಳನ್ನಾಡಿದರು.ಇದೇ ಸಂದರ್ಭದಲ್ಲಿ ಸಿಂದಗಿ ಆರ್.ಡಿ. ಪಾಟೀಲ ಕಾಲೇಜಿನ ದೈಹಿಕ…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಮನೆಯ ಕೀಲಿ ಮುರಿದು ೨೫೮ ಗ್ರಾಂ ಚಿನ್ನ, ೧೫ ಸಾವಿರ ನಗದು ಕಳ್ಳತನ ಮಾಡಿದ ಘಟನೆಆಲಮಟ್ಟಿ ರೇಲ್ವೆ ಸ್ಟೇಷನ್ ಹತ್ತಿರದ ಮನೆಯಲ್ಲಿ ಭಾನುವಾರ ಜರುಗಿದೆ.ಆಲಮಟ್ಟಿ ಆರ್.ಎಸ್ ನಿವಾಸಿ ಶರಣಪ್ಪ ಕೊಲ್ಹಾರ ಕಳ್ಳತನವಾದ ಮನೆ.ಭಾನುವಾರ ಕಳ್ಳತನವಾದ ಶರಣಪ್ಪ ಅವರ ಪತ್ನಿ, ಖಾಸಗಿ ಶಾಲಾ ಶಿಕ್ಷಕಿ ಗುರುಬಾಯಿ ಬಾದಾಮಿ ಬನಶಂಕರಿ ಜಾತ್ರೆಗೆ ತೆರಳಿದ್ದಾರೆ. ಶರಣಪ್ಪ ಸ್ವಂತ ಗ್ರಾಮ ಹಿರೇಗುಳಬಾಳಕ್ಕೆ ತೆರಳಿದ್ದಾರೆ.ಮಧ್ಯಾಹ್ನ ೩ ಕ್ಕೆ ಪತ್ನಿ ಗುರುಬಾಯಿ ಬಾದಾಮಿ ಜಾತ್ರೆಯಿಂದ ಆಲಮಟ್ಟಿಗೆ ವಾಪಸ್ಸಾದಾಗ ಮನೆಯ ಬೀಗ, ಕೀಲಿಕೊಂಡಿ ಮುರಿದದ್ದು ಕಂಡಿದೆ. ಮನೆಯೊಳಗಿನ ಸೂಟಕೇಸ್ ನಲ್ಲಿದ್ದ ೨,೫೮,೦೦೦ ರೂ ಮೌಲ್ಯದ ೨೫೮ ಗ್ರಾಂ ಚಿನ್ನ ಹಾಗೂ ೧೫,೦೦೦ ರೂ ನಗದು ಕಳ್ಳತನವಾಗಿದ್ದು ಗೊತ್ತಾಗಿದೆ.ಈ ಕುರಿತು ಗುರುಬಾಯಿ ಕೊಲಾರ ಆಲಮಟ್ಟಿ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಿಸಿದ್ದಾರೆ.ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನ ದಳದ ತಂಡ ಭೇಟಿ ನೀಡಿತ್ತು.ಎರಡು ತಂಡ ರಚನೆ;ಘಟನೆಯನ್ನು ಪತ್ತೆ ಹಚ್ಚಲು ಎರಡು ತಂಡವನ್ನು ರಚಿಸಲಾಗಿದೆ ಎಂದು ಭಾನುವಾರ ರಾತ್ರಿ ಘಟನಾ…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲ್ಲೂಕು ಮಕ್ಕಳ ಸಾಹಿತ್ಯ ಸಂಗಮ ಹಾಗೂ ಮಕ್ಕಳ ಸಾಹಿತ್ಯ ಪರಿಷತ್ತು ವತಿಯಿಂದ ಶ್ರೀ ವಿಶ್ವೇಶ್ವರ ಬಾಲಭಾರತಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಆಲಮೇಲ ಶಾಲೆಯಲ್ಲಿ ಸಿಡಿಲು ಸಂತ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಯುವ ದಿನೋತ್ಸವವನ್ನು ಆಚರಿಸಲಾಯಿತು.ಫೋಟೋ ಪೂಜೆಯನ್ನು ವಿದ್ಯಾರ್ಥಿನಿ ಸಾನ್ವಿ ಮಾದರ ಮಾಡಿದಳು.ಅಧ್ಯಕ್ಷತೆ ವಹಿಸಿ ಮಾತನಾಡಿದ ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷ ಲಕ್ಷ್ಮೀಪುತ್ರ ಕಿರನಳ್ಳಿ ಸ್ವಾಮಿ ವಿವೇಕಾನಂದರ ಚಿಂತನೆಗಳು ಇಂದಿನ ಯುವಕರಿಗೆ ಸ್ಪೂರ್ತಿ, ನಿರಂತರ ಅಧ್ಯಯನ ಶೀಲರಾದ ಸ್ವಾಮಿ ವಿವೇಕಾನಂದರ ಜ್ಞಾನ ಸಂಪತ್ತು ಎಷ್ಟು ಇತ್ತಂದರೆ ಅವರ ಜ್ಞಾನಕ್ಕೂ ಹಾಗೂ ಇಡೀ ದೇಶದ ಮೇಧಾವಿಗಳಿಗೆ ಹೋಲಿಸಿದರೆ ಹೆಚ್ಚು ಇತ್ತು ಎಂದು ವಿದೇಶ ಪತ್ರಿಕೆಗಳು ಬರೆಯುತ್ತವೆ. ಅಂತಹ ಮಹಾನ ಚೇತನರ ಜಯಂತಿಯನ್ನು ಇಡೀ ದೇಶವೇ ರಾಷ್ಟ್ರೀಯ ಯುವ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ ಹಾಗಾಗಿ ವಿವೇಕಾನಂದರು ವಿಚಾರಗಳು ಕೇವಲ ಭಾರತಿಯರಿಗೆ ಸೀಮಿತವಾಗಿರದೆ ಇಡೀ ವಿಶ್ವಕ್ಕೆ ದಾರಿ ದೀಪವಾಗಿವೆ. ಸ್ವಾಮಿ ವಿವೇಕಾನಂದರ ಕುರಿತು ಭಾಷಣ ಮಾಡಿದ ವಿದ್ಯಾರ್ಥಿಗಳಿಗೆ ಸಂಗಮದ ವತಿಯಿಂದ…

Read More