ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಿಕ್ಯಾಬ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ರೆಡಿಯೋ ಖಗೋಳಶಾಸ್ತ್ರದ ಸವಾಲುಗಳು ಅವಕಾಶಗಳು ಎಂಬ ಒಂದು ದಿನದ ತಾಂತ್ರಿಕ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಮಿಳುನಾಡಿನ ಊಟಿಯಲ್ಲಿರುವ ನ್ಯಾಷನಲ್ ಸೆಂಟರ್ ಫಾರ್ ರೆಡಿಯೋ ಅಸ್ಟ್ರೋಫಿಸಿಕ್ಸ್‌ನ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ಅಬ್ದುಲ್ ಖಾದರ್ ಪಟೇವಾಲೆ ಅವರು, 1971 ರಲ್ಲಿ ನಿರ್ಮಿಸಲಾದ ಖಗೋಳಶಾಸ್ತ್ರ ಪಠ್ಯಪುಸ್ತಕವು ದೇಶೀಯ ವಿಜ್ಞಾನ ಕ್ಷೇತ್ರಕ್ಕೆ ಹೊಸ ಪ್ರೇರಣೆ ನೀಡಿದೆ. ಪ್ರಾಚೀನ ವೈದ್ಯರು ಮತ್ತು ವಿಜ್ಞಾನಿಗಳು ವಿದ್ಯಾರ್ಥಿಗಳಿಗೆ ಆಕಾಶ ಮತ್ತು ನಕ್ಷತ್ರಗಳ ಅಧ್ಯಯನವನ್ನು ಕಲಿಸಲು ಶ್ರಮಿಸಿದ್ದಾರೆ.
ನಮ್ಮ ಗ್ರಹಗಳು , ಆಕಾಶ ಮತ್ತು ವಿಸ್ತೀರ್ಣವಾದದನ್ನು ತಿಳಿದುಕೊಳ್ಳಲು ಈ ಅಧ್ಯಯನ ಬಹುಮುಖ್ಯವಾಗಿದೆ. ಹಾಗಾಗಿ ರೇಡಿಯೋ ಜಗತ್ತಿನ ಬಗ್ಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಿಳಿದು ಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆಂದು ಅವರು ವಿದ್ಯಾರ್ಥಿಗಳಿಗೆ ಹೇಳಿದರು.
ಇನ್ನು ಡಾ. ಸುಜಾ ಪುಣೆಕರ್ ಮಾತನಾಡಿ, ರೇಡಿಯೋ ಖಗೋಳಶಾಸ್ತ್ರದ ಉಪಕರಣ ಬಗ್ಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೆಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ, ಸೈಯದ್ ಅಬ್ಬಾಸ್ ಅಲಿ, ಡಾ. ಅಸ್ಲಂ ಕರ್ಜಗಿ, ಡಾ. ರವಿ ಹೊಸಮನಿ, ಡಾ. ಮಹಮ್ಮದ್ ಜಿಯಾವುಲ್ಲಾ ಚೌಧರಿ, ಪ್ರೊ. ಸಾದಿಕ್ ಮುಜಾವರ, ಡಾ. ವಸಿಂ ನಿಡಗುಂದಿ, ಪ್ರೊ. ಬೇನಜೀರ್ ಮುಂತೆಸಿರ್, ಪ್ರೊ. ಆರೀಫ್ ಮಕಾಂದಾರ ಪ್ರೊ. ಎಂ ಆರ್ ಚಿಕ್ಕೊಂಡ ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.