ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವೇಮನ ಗ್ರಾಮೀಣ ವಿದ್ಯಾವರ್ಧಕ ಸಂಘದ ಪ್ರೌಢಶಾಲೆ ಲೋಹಗಾಂವದಲ್ಲಿ ಗುರುವಂದನ ಹಾಗೂ ಸ್ನೇಹಿತರ ಪುನರ್ಮಿಲನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ಜಮಖಂಡಿ ಓಲೆಮಠದ ಆನಂದ ಗುರೂಜಿ ವಹಿಸಿದ್ದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಎಚ್.ಎಲ್. ಬಿದರಿ ಅವರು, ಮುಖ್ಯ ಅತಿಥಿಗಳಾಗಿ ಮಹಾಂತ ಗುಲಗಂಜಿ, ಶಂಕರ್ ನಾಯಕ್, ಬಿ ಎಂ ಬಡಿಗೇರ ಆಗಮಿಸಿದ್ದರು.
ಈ ವೇಳೆ ಆನಂದ್ ಗುರೂಜಿ ಮಾತನಾಡಿ, ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಯಿರಿ ಶಿಕ್ಷಣದಷ್ಟೇ ಸಂಸ್ಕಾರವು ಮುಖ್ಯ ಹಾಗೂ ಜೀವನದಲ್ಲಿ ಶಿಕ್ಷಣದ ಮಹತ್ವ ಕುರಿತು ಮಾತನಾಡಿದರು.
ಗುರುಗಳು ಪ್ರೀತಿ, ಸ್ನೇಹದ ಕರುಣಾಮಯಿಗಳು ಬದುಕಿನ ದಾರಿಗೆ ದೀಪ ಸ್ತಂಭಗಳು. ಶಿಕ್ಷಕರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆದು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಬೇಕು ಎಂದು ಹೇಳಿದರು.
ಪ್ರಸ್ತಾವಿಕವಾಗಿ ಅಶೋಕ ಭಜಂತ್ರಿ ಮಾತನಾಡಿದರು. ವಂದನಾರ್ಪಣೆ ಸುಭಾಷ ಬಗಲಿ ಮಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರು ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ರಮೇಶ್ ಬಿರಾದಾರ, ಆನಂದಗೌಡ ಬಿರಾದರ, ವಿಶ್ವನಾಥ ಬಿರಾದಾರ, ವಿವೇಕಾನಂದ ಬಿರಾದಾರ ಗುರುರಾಜ ವಳಸಂಗ, ಗುರುರಾಜ ಖಾದೇಪುರ, ರಾಜು ಧಾರೆಕಾರ, ಪ್ರಕಾಶ ಕಾರಜೋಳ ಅವರು ಇದ್ದರು.