ಉದಯರಶ್ಮಿ ದಿನಪತ್ರಿಕೆ
ಇಂಡಿ: ಉಡಿ ತುಂಬುವ ಪದ್ಧತಿ ಭಾರತೀಯ ಸಂಸ್ಕೃತಿಯ ಪ್ರತೀಕ. ಇಂತಹ ಸಂಪ್ರದಾಯವನ್ನು ಇಂದಿಗೂ ಪಾಲಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ. ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ನಿವೃತಿ ಪ್ರಾಚಾರ್ಯ ಶೈಲಜಾ ಬಿರಾದಾರ ಹೇಳಿದರು.
sಶುಕ್ರವಾರ ತಾಲೂಕಿನ ಆಳೂರ ಗ್ರಾಮದ ಸಿದ್ಧಾರೂಢರ ನೂತನ ಮಂದಿರದ ಕಳಸಾರೋಹಣ ಹಾಗೂ ಲಕ್ಷ್ಮೀಬಾಯಿ ತಾಯಿಯವರ, ಪಾರ್ವತೆಮ್ಮನವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ೫೫ನೇ ವರ್ಷದ ಆಧ್ಯಾತ್ಮಿಕ ಪ್ರವಚನ ಮಹೋತ್ಸವದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ನೈತಿಕತೆ ಮೈಗೂಡಿಸಿಕೊಂಡರೆ ಅತ್ಯುತ್ತಮ ಸಮಾಜ ನಿರ್ಮಾಣ ಸಾಧ್ಯ. ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಉತ್ತಮ ನಾಗರಿಕರ ಅಗತ್ಯವಿದೆ. ಅದರಂತೆ ಮಗು ಬೆಳೆದು ಉತ್ತಮ ನಾಗರಿಕನಾಗಬೇಕಾದರೆ ತಾಯಿಯ ಪಾತ್ರ ಮಹತ್ವವಿದೆ. ಕುಟುಂಬ ನಿರ್ವಹಣೆ, ಉತ್ತಮ ಸಮಾಜ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅವರನ್ನು ಗೌರವಿಸುವುದು ನಮ್ಮ ಸಂಪ್ರದಾಯ ಎಂದರು.
ಕಲರ್ಬುಗಿಯ ಸಿದ್ಧಾರೂಢ ಮಠದ ಮಾತೋಶ್ರೀ ಲಕ್ಷ್ಮೀತಾಯಿ ಅವರು ಮಾತನಾಡಿ, ಆಳೂರ ಸಿದ್ಧಾರೂಢರ ಮಠಕ್ಕೆ ಭಕ್ತರು ಆಸರೆಯಾಗಿದ್ದಾರೆ. ಸಿದ್ಧಾರೂಢರ ಸತ್ಯ ಸಂಕಲ್ಪದAತೆ ಸುಮಾರು ವರ್ಷಗಳಿಂದ ಸುಮಂಗಲೆಯರ ಉಡಿ ತುಂಬುವ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಪ್ರಶಂಸನೀಯ ಕಾರ್ಯವಾಗಿದೆ ಎಂದರು.
ಶಾಹಾಪುರದ ಬಿ. ಗುಡಿಯ ದಾನೇಶ್ವರಿ ತಾಯಿಯವರು ಸಿದ್ಧಾರೂಢರ ಚರಿತ್ರೆ ಬಗ್ಗೆ ಪ್ರವಚನ ನೀಡಿದರು.
ವೇದಿಕೆಯಲ್ಲಿ ಆಳೂರ ಮಠದ ಶಂಕರಾನAದ ಮಹಾಸ್ವಾಮಿಗಳು, ಗದಗದ ಪರಿಪೂರ್ಣ ಆನಂದ ಭಾರತಿ ಶ್ರೀಗಳು, ಉದೇಮೆದ್ದಾರ ಶ್ರೀಪತಿಗೌಡ ಬಿರಾದಾರ, ಮಂಜುನಾಥ ವಂದಾಲ ಸೇರಿದಂತೆ ಅನೇಕರು ಇದ್ದರು.
ಕಾರ್ಯಕ್ರಮದಲ್ಲಿ ಬಸುಗೌಡ ಪಾಟೀಲ, ಗುರುಪಾದ ವಾಡಿ, ಪಾಂಡುರAಗ ಕುಲಕರ್ಣಿ, ಹೋನ್ನಪ್ಪಗೌಡ ಪಾಟೀಲ, ಸಂತೋಷ ಸದಲಾಪೂರ, ಕಾಂತು ಬಬಲಾದ, ರಮೇಶ ಗುಡೇವಾಡಿ, ಅಣ್ಣಪ್ಪ ವಾಡಿ, ರಾಜು ವಾಲಿಕಾರ, ಬಸವರಾಜ ವಾಲಿಕಾರ, ರಾಜಶೇಖರ ನಾಟೀಕಾರ, ಸುರೇಶ ನಾಟೀಕಾರ\ ಇದ್ದರು.
ಇದೇ ಸಂದರ್ಭದಲ್ಲಿ ಸಿದ್ಧಾರೂಢ ಮಠದಲ್ಲಿ ನಡೆದ ಸುಮಾರು ೮೦೦ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ವಿವಿಧ ಗ್ರಾಮಗಳ ಮಹಿಳೆಯರು ಪಾಲ್ಗೊಂಡಿದ್ದರು. ತಾಲೂಕಿನ ಗಣ್ಯ ಮಾನ್ಯರನ್ನು ಇದೇ ವೇಳೆ ಗೌರವಿಸಲಾಯಿತು.

