ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸೈನಿಕನೆಲೆ ಪ್ರಕಾಶನ ಬೆಂಗಳೂರು ಇವರಿಂದ “ನಮ್ಮ ಊರು ನಮ್ಮ ಹೆಮ್ಮೆ ದೇವರಹಿಪ್ಪರಗಿ” ಕೃತಿ ಇಂದು(ಭಾನುವಾರ) ಬಿಡುಗಡೆಗೊಳ್ಳಲಿದೆ.
ಪಟ್ಟಣದ ಕಲ್ಮೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಸಿಂದಗಿ ಭೀಮಾಶಂಕರ ಸಂಸ್ಥಾನಮಠದ ದತ್ತಪ್ಪಯ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಕಾರ್ಯಕ್ರಮ ಆರಂಭಗೊಳ್ಳಲಿದೆ. ಸ್ಥಳೀಯ ಗದ್ದಿಗೆಮಠದ ಮಡಿವಾಳೇಶ್ವರ ಸ್ವಾಮೀಜಿ ಕೃತಿ ಬಿಡುಗಡೆಗೊಳಿಸಲಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗೋಪಾಲ ನಾಯಕ, ವಿಶ್ರಾಂತ ಪ್ರಾಚಾರ್ಯ ಡಾ,ಮಹಾಂತೇಶ ಗುಬ್ಬೆವಾಡ , ತಹಶೀಲ್ದಾರ ಪ್ರಕಾಶ ಸಿಂದಗಿ ಭಾಗವಹಿಸಲಿದ್ದಾರೆ. ವಿಶ್ರಾಂತ ತಹಶೀಲ್ದಾರ ಆರ್.ಆರ್.ಮಣ್ಣೂರ ಕೃತಿ ಪರಿಚಯ ಹಾಗೂ ಫಿನಲ್ಯಾಂಡ್‌ನ ಎನ್‌ವೆಲಾಫ್ ಟೆಕ್ನಾಲಾಜಿ ಕಂಪನಿಯ ನಿತಿನಕುಮಾರ ನಾಡಗೌಡ “ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆಯ ಪ್ರಯೋಜನಗಳು” ಕುರಿತು ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ನಮ್ಮ ಊರು ನಮ್ಮ ಹೆಮ್ಮೆ ಗೌರವ ಪ್ರಶಸ್ತಿ ಪುರಸ್ಕೃತರ ಸನ್ಮಾನ ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಜರುಗಲಿದೆ ಎಂದು ಸಂಪಾದಕರಾದ ಸುರೇಶ ದೇಸಾಯಿ, ಸದಾನಂದ ಬಬಲೇಶ್ವರ ಹಾಗೂ ಮಾಜಿಯೋಧ ರಾಜೇಂದ್ರ ನಾಡಗೌಡ ಪ್ರಕಟಣೆ ಮೂಲಕ ತಿಳಿಸಿದ್ದಾರೆ.