ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೇಶದ ಅಭಿವೃದ್ಧಿಗಾಗಿ ಯುವಕ ಪಾತ್ರ ಅನನ್ಯವಾಗಿದೆ ಎಂದು ವಿರತಿಶಾನಂದ ಸ್ವಾಮಿಗಳು ವಿರಕ್ತಮಠ ಮನಗೂಳಿ ಹೇಳಿದರು.
ನಗರದ ಶ್ರೀ ಸ್ವಾಮಿ ವಿವೇಕಾನಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ವಿಜಯಪುರ ಇವರ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮವನ್ನು ಹಮ್ಮಿಕೊಂಡ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದ ಕುರಿತು ಪ್ರೀತಿ, ಅಭಿಮಾನವನ್ನು ಇಂದಿನ ಯುವಕರು ಅಳವಡಿಸಿಕೊಳ್ಳಬೇಕು. ದೇಶಕ್ಕಾಗಿ ಈಗಾಗಲೇ ಹಲವಾರು ಪ್ರಾಣ ಬಲದಾನಗೈದ ಮಹನೀಯರನ್ನು ನೆನೆಸಿಕೊಳ್ಳುವ ಮೂಲಕ ಅವರಿಗೆ ಗೌರವ ನಮನ ಸಲ್ಲಿಸಬೇಕು. ಅವರ ದಾರಿಯಲ್ಲಿ ಪ್ರತಿಯೊಬ್ಬರು ನಡೆಯಬೇಕು ಎಂದರು. ಎನ್.ಎಸ್. ಎಸ್ ಶಿಬಿರಗಳು ಆಗಾಗ ನಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಫಯಾಜ್ ಕಲಾದಗಿ ಅಧ್ಯಕ್ಷರು ಸುವಿದ ಸಾಮಾಜಿಕ ಸಂಸ್ಥೆ ವಿಜಯಪುರ ವಿದ್ಯಾರ್ಥಿಗಳು ಸಮಾಜದಲ್ಲಿ ಯಾವ ರೀತಿ ಸೇವೆಯನ್ನು ಮಾಡಬೇಕು. ಸಮಾಜ ನಮಗೇನು ಕೊಡುತ್ತದೆ ಎನ್ನುವುದಕ್ಕಿಂತ ನಾವು ಸಮಾಜಕ್ಕಾಗಿ ಏನನ್ನು ಕೊಡುತ್ತೇವೆ ಎಂಬ ವಿಷಯದ ಬಗ್ಗೆ ಎನ್‌ಎಸ್ ಎಸ್ ಶಿಬಿರಾರ್ಥಿಗಳಿಗೆ ಸೇವೆಯ ಮಹತ್ವವನ್ನು ತಿಳಿಸಿದರು. ಇಂದಿನ ಸಮಾಜದಲ್ಲಿ ಆಗುವಂತಹ ಅನಾಹುತಗಳು ಮತ್ತು ಅದರಿಂದ ಯಾವ ರೀತಿ ಸಮಾಜಕ್ಕೆ ಜಾಗೃತಿಯನ್ನು ಮೂಡಿಸಬೇಕೆಂಬ ಮಾಹಿತಿಯನ್ನು ನೀಡಿದರು.
ಅದೇ ರೀತಿ ನಮ್ಮ ಮಹಾವಿದ್ಯಾಲಯದ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಂತಹ ಶ್ರೀ ಸ್ವಾಮಿ ವಿವೇಕಾನಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಆರ್ ಸಿ ಲೊಗಾವಿ ಸರ್ ರವರು ಉದ್ಘಾಟಕರಾಗಿ ಬಂದಂತಹ ಉದ್ಘಾಟನಾ ಕಾರರಿಗೆ ಹಾಗೂ ಮುಖ್ಯ ಅತಿಥಿಗಳಾಗಿ ಬಂದಂತಹ ಮುಖ್ಯ ಅತಿಥಿಗಳಿಗೆ ಸ್ವಾಗತ & ಸನ್ಮಾನ ವನ್ನು ಮಾಡಿದರು & ಕಾರ್ಯಕ್ರಮದ ಅಧ್ಯಕ್ಷ ನುಡಿಗಳನ್ನು ತಿಳಿಸಿದರು.
ವೇದಿಕೆಯಲ್ಲಿ ಶಫೀಕ್ ಜಾಗೀರ್ದಾರ್, ಕುಮಾರಿ ಎಸ್ ಬಿ ಚೌಧರಿ, ಎನ್‌ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಎ.ಏನ್. ಬಾಗವಾನ ಉಪಸ್ಥಿತರಿದ್ದರು.
ಕಾರ್ಯಕ್ರಮದ ಕು. ಭಾಗ್ಯಶ್ರೀ ವಾಲಿಕಾರ್ ನಿರೂಪಿಸಿದರು.