ನವಂಬರ ತಿಂಗಳಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜನೆಗೆ ನಿರ್ಧಾರ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅತ್ಯಂತ ಕ್ರೀಯಾಶೀಲವಾಗಿ ಕಾರ್ಯಕ್ರಮ ಮಾಡುತ್ತಿರುವದು ಅತ್ಯಂತ ಶ್ಲಾಘನೀಯ ಕಾರ್ಯ. ಮಕ್ಕಳಿಗೆ ಸಾಹಿತ್ಯ ಅಭಿರುಚಿ ಬೆಳೆಸುವ ಪ್ರಯತ್ನ ಸಮ್ಮೇಳನದ ಉದ್ದೇಶವಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೊತದಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಶನಿವಾರ ವಿಜಯಪುರ ನಗರದ ಸ್ಟೇಶನ ರಸ್ತೆಯಲ್ಲಿರುವ ಸರಕಾರಿ ಮೇಟ್ರಿಕ ಪೂರ್ವ ವಸತಿ ನಿಲಯದಲ್ಲಿ ಜಿಲ್ಲೆಯ ಎಲ್ಲ ವಸತಿ ಶಾಲೆಯ ಪ್ರಾಚಾರ್ಯರು ಹಾಗು ವಸತಿ ನಿಲಯದ ಮೇಲ್ವಿಚಾರಕ ಸಭೆಯಲ್ಲಿ ಮಾತನಾಡಿ,
ಮಕ್ಕಳಲ್ಲಿರುವ ಸೂಕ್ತವಾದ ಪ್ರತಿಭೆಗೆ ಪ್ರೋತ್ಸಾಹ ನೀಡುವ ಮಕ್ಕಳ ಸಾಹಿತ್ಯ ಸಮ್ಮೇಳನ ಮಾಡೋಣ. ವಿಜಯಪುರ ಜಿಲ್ಲೆ ಮಕ್ಕಳ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿದೆ ಎಂದರು
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ನವಂಬರ ಕೊನೆಯ ವಾರದಲ್ಲಿ ಜರಗುವ ಮಕ್ಕಳ ಸಾಹಿತ್ಯ ಸಮ್ಮೇಳನ ಅಥ೯ಪೂಣ೯ವಾಗಿ ಆಚರಿಸೋಣ. ಜಿಲ್ಲೆಯಲ್ಲಿರುವ ಎಲ್ಲ ವಸತಿ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೇದಿಕೆ ನೀಡೋಣ ಜಿಲ್ಲಾಡಳಿತ ಹಾಗು ಸಚಿವರಾದ ಎಂ ಬಿ ಪಾಟೀಲ ಹಾಗು ಶಿವಾನಂದ ಪಾಟೀಲ. ಎಲ್ಲ ವಿಧಾನ ಸಭೆ ಹಾಗು ವಿಧಾನ ಪರಿಷತ್ತಿನ ಸದಸ್ಯರನ್ನು ಒಳಗೊಂಡು ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡುತ್ತಿದ್ದೇವೆ. ಕನ್ನಡ ಸಾಹಿತ್ಯ ಪರಿಷತ್ತು ಮಕ್ಕಳ ವ್ಯಕ್ತಿತ್ವ ವಿಕಸನದ ಕಡೆಗೆ ಹೆಚ್ಚಿನ ಮಹತ್ವ ನೀಡುತ್ತದೆ ಅನೇಕ ಮನೋವೈಜ್ಞಾನಿಕ ವಿಷಯಗಳ ಚಚೆ೯ಗೆ ಅವಕಾಶ ಸಿಗಲಿದೆ ಎಂದರು.
ಪ್ರಾಚಾರ್ಯ ಅಹಮ್ಮದ ಪಟೇಲ ಭಾಗವಾನ. ಜಿಂ ಎಂ ಗುಳಗಿ ವೇದಿಕೆಯ ಮೇಲಿದ್ದರು.
ಪ್ರಾಚಾರ್ಯರಾದ ಗಂಗಾಧರ ಅಂಕಲಗಿ ದುಂಡಪ್ಪ ಮೋಟೆ. ಡಿ ಎಂ ಚಲವಾದಿ. ಎಸ್ ಸಿ ವಗ್ಗಿ. ಎಸ್ ತಳಕೇರಿ. ಶ್ರೀಶೈಲ ಕೊರಳ್ಳಿ. ಕರುಣಾಮಯಿ ದುಮ್ಮವಾಡ. ಬೊರಮ್ಮ ಬಿರಾದಾರ. ಮಲ್ಲಿಕಾರ್ಜುನ ಹಟ್ಟಿ. ರವೀಂದ್ರ ಬಂಥನಾಳ. ಪ್ರಭಾಕರ ಪಾಟೀಲ. ಸಬನಮ್ ಅತ್ತಾರ. ಗೋವಿಂದ ವಾಲೀಕಾರ. ಜಿ ಪಿ ಗುಪ್ತಾ. ಲಕ್ಷ್ಮಿ ಪಲ್ಲೇದ. ವಿಜಯ ಪವಾರ. ನೀಲಪ್ಪ ಕೊಡಬಾಗಿ. ದಯಾನಂದ ಹೀರೆಮಠ. ಚಂದ್ರಶೇಖರ ಸಜ್ಜನ. ಡಿ ಎನ್ ವಾಡಜೆ ನಿಲಯ ಮೇಲ್ವಿಚಾರಕರಾದ ಕವಿತಾ ಹೂಗಾರ. ಸೂರ್ಯಕಾಂತ ಹೊಸಮನಿ. ಮಹಮ್ಮದ ಭಾಗವಾನ. ಬಸವರಾಜ ಮಿಜಿ೯. ನಾಗೇಶ ದುದಗಿ. ಎಂ ಎಂ ಪಾಟೀಲ. ಸಂಜೀವ ಹಿರೊಳ್ಳಿ.ನಾಗೇಶ ಮಾಳಿ ಪ್ರಭಾಕರ ಪಾಟೀಲ. ಮಾಲತಿ ತಡಲಗಿ. ದ್ರಾಕ್ಷಾಯಿಣಿ. ಶಂಕರ ಬ್ಯಾಕೋಡ. ಅರವಿಂದ ಹಡಪದ. ಗಣಪತಿ ಬಜಂತ್ರಿ. ಭಾರತಿ ಪಾಟೀಲ. ಬಾಬುಗೌಡ ಬಿರಾದಾರ ಸೋಮರಡ್ಡಿ. ಕೋನರಡ್ಡಿ ಮುಂತಾದವರು ಉಪಸ್ಥಿತರಿದ್ದರು.