Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವತಿಯಿಂದ ಜಿಲ್ಲೆಯ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಲಬುರ್ಗಿ ಘಟಕದ ವಿಭಾಗ-೧ ರಿಂದ ಕಲಬುರ್ಗಿ, ವಿಜಯಪುರ, ಬೆಳಗಾವಿ ಮಾರ್ಗವಾಗಿ ಗೋವಾ ರಾಜ್ಯದ ಪಣಜಿಗೆ ಅಮೋಘವರ್ಷ ನಾನ್ ಎ.ಸಿ ಸ್ಲೀಪರ ಕೋಚ್ ಬಸ್ ಅನ್ನು ಆರಂಭಿಸಲಾಗಿದೆ.ನೂತನ ಬಸ್ ಕಲಬುರ್ಗಿಯಿಂದ ಸಂಜೆ ೧೮-೦೧ಕ್ಕೆ ಹೊರಟು, ಸಿಂದಗಿಗೆ ಸಂಜೆ ೨೦-೧೫ಕ್ಕೆ ಆಗಮಿಸುವುದು. ಸಂಜೆ ೨೦-೪೦ಕ್ಕೆ ದೇವರ ಹಿಪ್ಪರಗಿಯಿಂದ ಹೊರಟು, ವಿಜಯಪುರಕ್ಕೆ ರಾತ್ರಿ ೨೧-೫೦ ಆಗಮಿಸುವುದು. ವಿಜಯಪುರದಿಂದ ಹೊರಟು ಪಣಜಿಯನ್ನು ಮರುದಿನ ಬೆಳಿಗ್ಗೆ ೬-೧೫ಕ್ಕೆ ತಲುಪಲಿದೆ. ಕಲಬುರ್ಗಿಯಿಂದ ಪಣಜಿಗೆ ರೂ,೧೨೫೭, ಸಿಂದಗಿಯಿಂದ ಪಣಜಿಗೆ ರೂ,೧೦೫೪, ದೇವರ ಹಿಪ್ಪರಗಿಯಿಂದ ಪಣಜಿಗ ರೂ. ೯೮೧ ಹಾಗೂ ವಿಜಯಪುರದಿಂದ ಪಣಜಿಗೆ ರೂ ೮೮೬ ಬಸ್ ದರವಿದ್ದು, ಪ್ರಯಾಣಿಕರು ಈ ಬಸ್ಸಿನ ಸದುಪಯೋಗ ಪಡೆಸುಕೊಳ್ಳುವಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಅಂಗಡಿ ಮಾಲೀಕರಿಂದ ಅಭಿಯಾನಕ್ಕೆ ಸಕಾರಾತ್ಮಕ ಸ್ಪಂದನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ವಾಣಿಜ್ಯ, ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯ, ಮನೋರಂಜನಾ ಕೇಂದ್ರಗಳು ಮತ್ತು ಹೊಟೇಲ್ ಸೇರಿದಂತೆ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ಭಾಷೆಯ ಶೇ.೬೦ರಷ್ಟು ಕನ್ನಡ ನಾಮಪಲಕ ಅಳವಡಿಸುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳೂ ಒಳಗೊಂಡಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಗರದ ವಿವಿಧ ಅಂಗಡಿಗಳಿಗೆ ಕಡ್ಡಾಯವಾಗಿ ಕನ್ನಡದಲ್ಲಿ ಶೇ. ೬೦% ರಷ್ಟು ನಾಮಫಲಕಗಳನ್ನು ಅಳವಡಿಸುವ ಕುರಿತು ತಿಳುವಳಿಕೆ ನೀಡಲಾಯಿತು.ಬೆಳಿಗ್ಗೆ ನಗರದ ಬಿ.ಎಲ್.ಡಿ.ಇ ಆಸ್ಪತ್ರೆಯ ಆವರಣದಿಂದ ಜಾಗೃತಿ ಅಭಿಯಾನ ಕಾರ್ಯಯಕ್ರಮವು ಆರಂಭಗೊಂಡಿತು. ಅಭಿಯಾನವು ಗಾಂಧಿ ವೃತ್ತದ ವರೆಗೂ ನಡೆಯಿತು.ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿನ ವಿವಿಧ ಅಂಗಡಿ ಮುಂಗಟ್ಟುಗಳು ಕಡ್ಡಾಯವಾಗಿ ಕನ್ನಡ ನಾಮ ಫಲಕಗಳನ್ನು ಅಳವಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.ಸರ್ಕಾರದ ಆದೇಶದಂತೆ ನಾಮಫಲಕಗಳು ಶೇ.೬೦…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ವಶಪಡಿಸಿಕೊಂಡ ಜಮೀನಿಗೆ ನ್ಯಾಯಾಲಯದ ಆದೇಶದಂತೆ ಪರಿಹಾರ ನೀಡದ ಕಾರಣ, ಯುಕೆಪಿಯ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಾರ್ಯಾಲಯದ ಜೀಪ್, ಕಂಪ್ಯೂಟರ್ ಗಳನ್ನು ಸೋಮವಾರ ಜಪ್ತಿ ಮಾಡಲಾಯಿತು.ವಿಜಯಪುರ ತಾಲ್ಲೂಕಿನ ಮದಭಾವಿ ಗ್ರಾಮದ ರೈತ ಜಕ್ಕಪ್ಪಗೌಡ ಧರೆಪ್ಪಾ ಬಿರಾದಾರ ಅವರಿಗೆ ಸೇರಿದ ಒಂದು ಎಕರೆ ಜಮೀನು ಯುಕೆಪಿಯ ಕಾಲುವೆ ನಿರ್ಮಾಣಕ್ಕೆ ವಶಪಡಿಸಿಕೊಳ್ಳಲಾಗಿತ್ತು.ವಿಜಯಪುರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪರಿಹಾರ ನಿಗದಿಗೊಳಿಸಿ ಆದೇಶಿಸಿತ್ತು.ಅಲ್ಲದೇ ಹೈಕೋರ್ಟ್ ಕೂಡಾ ಪರಿಹಾರ ಮೊತ್ತದ ಅರ್ಧದಷ್ಟನ್ನು ತಕ್ಷಣವೇ ನೀಡುವಂತೆ ಮಧ್ಯಂತರ ಆದೇಶ ನೀಡಿತ್ತು.ಹೈಕೋರ್ಟ್ ಮಧ್ಯಂತರ ತೀರ್ಪಿನಂತೆ ನೀಡಬೇಕಾದ ಪರಿಹಾರ ಹಣ ೨,೨೬,೪೭,೪೫೨ ರೂ ನೀಡಲು ಯುಕೆಪಿಯ ವಿಶೇಷ ಭೂಸ್ವಾಧೀನಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನ್ಯಾಯಾಲಯ ನಿಗದಿಗೊಳಿಸಿದ ಪರಿಹಾರದ ಶೇ ೨೫ ರಷ್ಟು ಹಣವನ್ನಾದರೂ ತಕ್ಷಣ ನೀಡಿ ಎಂಬುದು ರೈತರ ಬೇಡಿಕೆಯಾಗಿತ್ತು. ಆದರೂ ಪರಿಹಾರ ನೀಡಿರಲಿಲ್ಲ. ಅದಕ್ಕಾಗಿ ವಿಜಯಪುರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶದಂತೆ ಕಚೇರಿಯ ವಸ್ತುಗಳನ್ನು ಜಪ್ತಿ ಮಾಡಲಾಯಿತು ರೈತನ ಪರ ವಕೀಲರಾದ…

Read More

ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಕರ್ನಾಟಕ ರಾಜ್ಯ ಮೋಚಿಗಾರ ಸಮಾಜದ ಸಂಘಟನಾತ್ಮಕ ಸಮಿತಿ ರಚನೆ ಘೋಷಿಸಲಾಯಿತು.ಈ ಹೊಸ ಸಮಿತಿಯಲ್ಲಿ ವಿವಿಧ ಹುದ್ದೆಗಳಿಗೆ ಪ್ರಮುಖ ಮುಖಂಡರು ಆಯ್ಕೆಯಾಗಿದ್ದಾರೆ.ಗೌರವಾಧ್ಯಕ್ಷರಾಗಿ ಮಹದೇವಪ್ಪ ಸ್ವಾದಿ ರಾಜ್ಯಾಧ್ಯಕ್ಷರಾಗಿ ಹನುಮಂತಪ್ಪ ಮ. ಬಂಕಾಪೂರ ಸಲಹಾ ಸಮಿತಿ ಅಧ್ಯಕ್ಷರಾಗಿ ಡಾ. ಬಿ.ಎಸ್. ಮದಕಟ್ಟಿ ರಾಜ್ಯ ಉಪಾಧ್ಯಕ್ಷರಾಗಿ ಮಹಾದೇವ ಹುಣಸೂರ, ಶ್ರೀಕಾಂತ ಮಾಲಗತ್ತಿ, ಮಲ್ಲೇಶಪ್ಪ ಬಂಕಾಪೂರ, ಅಶೋಕ ನೀಡಗಲ್, ರವೀಂದ್ರ ಗೌಡರ, ಡಾ. ಪ್ರಕಾಶ ಎಸ್. ಇನಾಮದಾರ ಮತ್ತು ಉಮೇಶ ನರಗುಂದ ನೇಮಕಗೊಂಡಿದ್ದಾರೆ.ಕಾರ್ಯನಿರ್ವಹಣಾ ಸಮಿತಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸುನೀಲ ರಾ. ಜೈನಾಪುರ, ಖಜಾಂಚಿಯಾಗಿ ಗಣಪತಿ ಸ್ವಾದಿ, ಕಾರ್ಯದರ್ಶಿ (ಸಲಹಾ ಸಮಿತಿ) ಎಸ್.ಪಿ. ಶಿವಕುಮಾರ್, ಜಂಟಿ ಕಾರ್ಯದರ್ಶಿಯಾಗಿ ರೇವಣ್ಣ ಕಡೇಮನೆ ಸೇರಿದಂತೆ ಅನೇಕರು ಸೇವೆ ಸಲ್ಲಿಸಲಿದ್ದಾರೆ.ಸಂಘಟನಾ ಕಾರ್ಯದರ್ಶಿಗಳಾಗಿ ವೈ. ನಂಜುಂಡಪ್ಪ, ಮಂಜುನಾಥ ಬ್ಯಾಹಟ್ಟಿ, ವಿ. ಆಯಿಲ ಕೃಷ್ಣಪ್ಪ, ಯಲ್ಲಪ್ಪ ಮಾಳಗಿಮನಿ, ಅನಂತಪದ್ಮನಾಭಯ್ಯ ಮತ್ತು ವೈ. ನರಸಪ್ಪ ನೇಮಕಗೊಂಡಿದ್ದಾರೆ. ಸಹ ಕಾರ್ಯದರ್ಶಿಯಾಗಿ ಶ್ರೀ ಫಕೀರಪ್ಪ ಬ್ಯಾಹಟ್ಟಿ ಸೇವೆ ಸಲ್ಲಿಸಲಿದ್ದಾರೆ.ಕಾನೂನು ಸಲಹೆಗಾರರಾಗಿ ತೇಜಸ್ ಹಾಗೂ ಶ್ರೀ ಪ್ರಕಾಶ್…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಭಗವದ್ಗೀತೆ ಒಂದು ದೇಶಕ್ಕೆ ಸೀಮಿತವಾದ ಗ್ರಂಥವಲ್ಲ. ಇಡೀ ಮನುಕುಲದ ಒಳಿಗಾಗಿ ಇರುವ ಗ್ರಂಥ ಎಂದು ಬಾಗಲಕೋಟೆಯ ಭಗವದ್ಗೀತಾ ಅಭಿಯಾನದ ಧರ್ಮದರ್ಶಿ ಪಂ.ಬಿಂದುಮಾಧವಾಚಾರ್ಯ ನಾಗಸಂಪಿಗೆ ಹೇಳಿದರು.ಪಟ್ಟಣದ ಶ್ರೀ ಗುರು ರಾಘವೇಂದ್ರ ಮಹಾಸ್ವಾಮಿಗಳ ಬೃಂದಾವನ ಸನ್ನಿಧಿಯ ಧಾರ್ಮಿಕ ಭವನದಲ್ಲಿ ಶಿರಸಿ ಸೋಂದಾ ಸ್ವರ್ಣವಲ್ಲೀ ಸಂಸ್ಥಾನ ಯತಿವರೇಣ್ಯ, ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನಡೆಸುತ್ತಿರುವ ಭಗವದ್ಗೀತಾ ಅಭಿಯಾನ ಕರ್ನಾಟಕ-೨೦೨೫ನ್ನು ಉದ್ಘಾಟಿಸಿ, ಪ್ರಥಮ ಪಠಣದ ಪಾಠವನ್ನು ಬೋಧಿಸಿ ಅವರು ಮಾತನಾಡಿದರು.ಮೊಟ್ಟ ಮೊದಲ ಮನೋವಿಜ್ಞಾನಿ ಕೃಷ್ಣ, ಮನಃಶಾಸ್ತ್ರ ಗ್ರಂಥ ಭಗವದ್ಗೀತೆಯಾಘಿದೆ. ಭಗವದ್ಗೀತೆ ಎನ್ನುವ ದೀಪವನ್ನು ಮನೆಮನೆಗೆ ಹಚ್ಚುವ ಉದ್ದೇಶದಿಂದ ಅಭಿಯಾನವನ್ನು ಪ್ರಾರಂಭಿಸಿದ ಮೊದಲ ಮಾಹನ್ ಸಂತರು ಗಂಗಾಧರೇAದ್ರ ಸ್ವಾಮಿಗಳು. ಮನುಕುಲ ವ್ಯಾಪಿಸಿರುವ ವಿಶ್ವಕ್ಕೆ ಪರಿಚಯಿಸುವ ಉದ್ದೇಶಕ್ಕಾಗಿಯೆ ಶ್ರೀಗಳವರು ಭಗವದ್ಗೀತಾ ಅಭಿಯಾನ ಪ್ರಾರಂಭಿಸಿದ್ದಾರೆ. ಪ್ರತಿಯೊಬ್ಬರೂ ಭಗವದ್ಗೀತೆ ಎಂದರೇನು? ಅದರ ಪ್ರಯೋಜನದ ಬಗ್ಗೆ ಅರಿತಾಗಿಲೇ ಅಭಿಯಾನದ ಯಶಸ್ಸಾಗುತ್ತದೆ.ಅರ್ಜುನನ ಮೋಹ ನಾಶಕ್ಕೆ ಹೊರಟಿದ್ದೆ ಗೀತಾ ಶಾಸ್ತ್ರ. ಭಗವಂತನ ಕರುಣೆಯಿಂದ ಅರ್ಜುನನಿಗೆ ಉಪದೇಶ ಮಾಡಿದ ಗ್ರಂಥವೇ ಭಗವದ್ಗೀತೆ.…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಗುಣಮಟ್ಟದ ಶಿಕ್ಷಣಕ್ಕಾಗಿ ಒಂದು ಅಭೂತಪೂರ್ವ ಬದಲಾವಣೆಯ ಚೌಕಟ್ಟನ್ನು ಕರ್ನಾಟಕ ಪಬ್ಲಿಕ್ ಶಾಲೆಗಳು ಒದಗಿಸುತ್ತವೆ. ವಿದ್ಯಾರ್ಥಿಗಳ ಗುಣಮಟ್ಟದ ಕಲಿಕೆ, ದಾಖಲಾತಿ ಹೆಚ್ಚಳ, ಒಂದೇ ಸೂರಿನಡಿ ಎಲ್.ಕೆ.ಜಿ ಯಿಂದ ಪದವಿ ಪೂರ್ವ ಶಿಕ್ಷಣದವರೆಗೆ ವಿದ್ಯಾಭ್ಯಾಸ ನೀಡುವ ಮಹತ್ವಾಕಾಂಕ್ಷಿಯ ಕಾರ್ಯತಂತ್ರವೇ ಕೆಪಿಎಸ್ ಶಾಲೆಗಳದ್ದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ ಹೇಳಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ಸಿಂದಗಿ ತಾಲೂಕಿನ ಯಂಕಂಚಿ ಮತ್ತು ದೇವರಹಿಪ್ಪರಗಿ ತಾಲೂಕಿನ ಜಾಲವಾದ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರ ಮತ್ತೆ ಹೊಸದಾಗಿ ಸಿಂದಗಿ ತಾಲೂಕಿನ ಗಣಿಹಾರ ಗ್ರಾಮದ ಆರ್.ಎಮ್.ಎಸ್.ಎ ಪ್ರೌಢಶಾಲೆ, ಬೊಮ್ಮನಹಳ್ಳಿ ಗ್ರಾಮದ ಆರ್.ಎಂ.ಎಸ್.ಎ ಪ್ರೌಢಶಾಲೆ ಮತ್ತು ಯರಗಲ್ ಬಿಕೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಅನುಮೋದನೆ ನೀಡುವ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಒಂದೇ ಆವರಣದಲ್ಲಿ ಎಲ್.ಕೆ.ಜಿ ಯಿಂದ ಪದವಿ ಪೂರ್ವದವರೆಗೆ ಶಿಕ್ಷಣವನ್ನು ಒದಗಿಸಲು ಅನುಕೂಲ ಮಾಡಿಕೊಟ್ಟಿದೆ. ಅಂದಾಜು ರೂ.೨-೪ಕೋಟಿ ರೂ. ಅನುದಾನವನ್ನು ಈ ಶಾಲೆಗಳಿಗೆ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಯನ್ನು ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿ ತಾಲೂಕಾ ರೈತ ಉತ್ಪಾದಕ ಸ್ವ-ಸಹಾಯ ಸಂಘಗಳ ಮಹಾಮಂಡಳದ ವತಿಯಿಂದ ಇಲ್ಲಿನ ತಹಸೀಲ್ದಾರ ಮೂಲಕ ಮುಖ್ಯ ಮಂತಿಗಳಿಗೆ ಮನವಿ ಸಲ್ಲಿಸಿದರು.ಈ ವರ್ಷದಲ್ಲಿ ಸಕಾಲಿಕ ಮಳೆ ಮತ್ತು ಎಥೆನಾಲ್ ಉತ್ಪಾದನೆಗೆ ಬಳಸುವುದರಿಂದ ವೈಜ್ಞಾನಿಕ ಬೆಲೆ ಸಿಗಬಹುದೆಂಬ ಉದ್ದೇಶದಿಂದ ಬೆಳೆದಿದ್ದ ಮೆಕ್ಕೆಜೋಳದಿಂದ ಹೆಚ್ಚಿನ ಆದಾಯ ನಿರೀಕ್ಷೆಯಲ್ಲಿದ್ದ ರೈತರಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿರುವುದರಿಂದ ನಷ್ಟದ ಭೀತಿ ಎದುರಾಗಿದ್ದು ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನಿಗದಿ ಪಡಿಸಿದ ಮೆಕ್ಕೆಜೋಳ ಖರೀದಿಗೆ ಖರೀದಿ ಕೇಂದ್ರ ತೆರೆದು ರೈತರ ನೆರವಿಗೆ ಬರುವಂತೆ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ೬೫ ಲಕ್ಷ ಮೆಟ್ರಿಕ್ ಟನ್‌ಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯ ಗುರಿ ಸಾಧ್ಯತೆ ಇದ್ದು ಕ್ವಿಂಟಲಿಗೆ ೧೭೦೦ ಕ್ಕೆ ಬೆಲೆ ಕುಸಿತವಾಗಿರುವುದು ರೈತರಿಗೆ ಆತಂಕವನ್ನುಂಟು ಮಾಡಿದ್ದು, ಈಗಷ್ಟೆ ಮಾರುಕಟ್ಟೆಗೆ ಆವಕವಾಗುತ್ತಿರುವ ಮೆಕ್ಕೆಜೋಳ ಬೆಲೆ ಆರಂಭದಲ್ಲಿಯೇ ಕುಸಿತ ಕಂಡಿದೆ. ಬರುವ ದಿನಗಳಲ್ಲಿ ಇನ್ನೂ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ನಾಗರಿಕ ಸಮಾಜದಲ್ಲಿ ಸಮಾಜಮುಖಿಯಾಗಿ ರಾಜಕೀಯ ಕ್ಷೇತ್ರದಲ್ಲಿ ಇನ್ನಿತರ ಚಟುವಟಿಕೆಯಲ್ಲಿ ನಾವುಗಳು ತೊಡಗಿಕೊಂಡು ಕಾರ್ಯನಿರ್ವಹಿಸುವಾಗ ನಮ್ಮಗಳ ಜಾತಿಯನ್ನು ನಂಬಿ ಬದುಕಬಾರದು, ನಮ್ಮವರೆ ನಮ್ಮ ಬೆಳವಣಿಗೆಯನ್ನು ಸಹಿಸುವದಿಲ್ಲ ಎಂದು ಜಾನಪದ ಸಾಹಿತಿ ಸಿದ್ದಪ್ಪ ಬಿದರಿ ಹೇಳಿದರು.ಪಟ್ಟಣದ ಪಂಚಾಚಾರ್ಯ ವಿಧ್ಯಾವರ್ಧಕ ಸಂಘದವರು ಸಂತೆ ಮೈದಾನ ಹತ್ತಿರ ನಿರ್ಮಿಸಿರುವ ರೇಣುಕಾಚಾರ್ಯ ದೇವಸ್ಥಾನದಲ್ಲಿ ರೇಣುಕಾಚಾರ್ಯರ ಮೂರ್ತಿಯ ಪ್ರತಿಷ್ಠಾಪಣೆ ಕಾರ್ಯಕ್ರಮ ಹಾಗೂ ಧರ್ಮಸಭೆ ಸಮಾರಂಭದಲ್ಲಿ ಮಾತನಾಡಿದರು.ತಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನು ಒಡೆಯುವ ಜನರ ಮದ್ಯದಲ್ಲಿ ನಾವು ನೀವು ಇರುವದರಿಂದ ಅಂತಹ ಕುತಂತ್ರಿಗಳ ಬಗ್ಗೆ ಎಚ್ಚರದಿಂದ ಇದ್ದು ಸಮಾಜ ಸಂಘಟನೆಯಲ್ಲಿ ತೊಡಗಿಕೊಂಡಾಗ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ ಸಮಾಜದಲ್ಲಿ ಗುರುವಿನ ಸ್ಥಾನ ಅತ್ಯಂತ ಮಹತ್ವವನ್ನು ಪಡೆದುಕೊಂಡಿದ್ದು ಅಂತಹ ಸೌಬಾಗ್ಯವನ್ನು ಪಡೆದ ಜಂಗಮ ಸಮಾಜದವರು ಜಾಗ್ರತೆಯಿಂದ ಸಂಸ್ಕಾರವಂತರಾಗಿ ಗುರುಪರಂಪರೆಯನ್ನು ಉಳಿಸಿಕೊಂಡು ಹೋಗಲು ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಕರೆಕೊಟ್ಟರು.ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು, ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಶೀಲವಂತಮಠದ ಕೈಲಾಷನಾಥ ಶ್ರೀಗಳು…

Read More

ದೇಗಿನಾಳ ಗ್ರಾಮದ ಶ್ರೀ ಮಹಾಲಕ್ಷ್ಮಿದೇವಿ ಜಾತ್ರಾ ಮಹೋತ್ಸವ ಉದಯರಶ್ಮಿ ದಿನಪತ್ರಿಕೆ ಚಡಚಣ: ಜಾತ್ರಾ ಮಹೋತ್ಸವಗಳು ಭಕ್ತಿ ಭಾವದ ಸಂಕೇತವಾಗಿವೆ ಎಂದು ದೇಗಿನಾಳ ಶ್ರೀ ಮಹಾಲಕ್ಷ್ಮಿದೇವಿ ಜಾತ್ರಾ ಮಹೋತ್ಸವದ ಸಮೀತಿ ಅಧ್ಯಕ್ಷ ರಮೇಶಗೌಡ ಬಿರಾದಾರ ಹೇಳಿದರು.ದೇಗಿನಾಳ ಗ್ರಾಮದ ಶ್ರೀ ಮಹಾಲಕ್ಷ್ಮಿದೇವಿ ಜಾತ್ರಾ ಮಹೋತ್ಸವದ ನಿಮಿತ್ಯ ಭಾನುವಾರ ದೇವಿಯ ಗುಡಿಯ ಆವರಣದಲ್ಲಿ ನಡೆದ ಮುತೈದೆಯರಿಗೆ ಉಡಿತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇವಸ್ಥಾನಗಳು ಶೃದ್ಧಾ ಭಕ್ತಿ ಭಾವದ ತಾಣಗಳಾಗಿ ಮತ್ತು ಸನ್ಮಾರ್ಗದ ದಾರಿ ತೋರುವ ಕೇಂದ್ರಗಳಾಗಿವೆ ಎಂದು ಹೇಳಿದರು.ವಿವಿಧ ಕಲಾ ವಾದ್ಯ ಹಾಗೂ ಕುಂಭ ಹೊತ್ತ ಮಹಿಳೆಯರು ಮತ್ತು ಡೊಳ್ಳು ಕುಣಿತದ ವೈಭವದೊಂದಿಗೆ ಶ್ರೀ ಮಹಾಲಕ್ಷ್ಮಿದೇವಿಯ ಪಲ್ಲಕ್ಕಿಯು ಗ್ರಾಮದ ಪ್ರಮುಖ ಮಾರ್ಗದಲ್ಲಿ ಮೆರವಣಿಗೆ ಮಾಡಲಾಯಿತು.ಜಾತ್ರಾ ಮಹೋತ್ಸವದಲ್ಲಿ ಹೊರ್ತಿ, ಸಾವಳಸಂಗ, ಇಂಚಗೇರಿ, ಬಸನಾಳ, ಅಗಸನಾಳ, ಕೊಟ್ನಾಳ, ನಿಂಬಾಳ, ಹಳಗುಣಕಿ, ಹಡಲಸಂಗ, ಸೊನಕನಹಳ್ಳಿ, ಕಪನಿಂಬರಗಿ, ಡೋಮನಾಳ, ಕ್ಯಾತನ ಕೇರಿ, ಕೊಳುರಗಿ ಕನ್ನೂರ ದೇಗಿನಾಳ ಗ್ರಾಮಸ್ಥರು ಸೇರಿದಂತೆ ಮುಂತಾದ ಗ್ರಾಮಗಳ ಸಾವಿರಾರು ಭಕ್ತರು ಶ್ರೀ ಮಹಾಲಕ್ಷ್ಮಿದೇವಿ ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು.

Read More

ಶಾಸಕ ಬಸನಗೌಡ ಪಾಟೀಲ ಯತ್ನಾಳರಿಗೆ ಎಚ್ಚರಿಕೆ ನೀಡಿದ ಸಚಿವ ಎಂ.ಬಿ.ಪಾಟೀಲ ಉದಯರಶ್ಮಿ ದಿನಪತ್ರಿಕೆ ವಿಜಯಪುರ: “ಯಾರಿಗರೇ ಧಮ್ಕಿ ಹಾಕಿದಂತೆ ನನಗೆ ಧಮ್ಕಿ ಹಾಕಿದರೆ ನಡೆಯಲ್ಲ, ಪ್ರತಿದಿನ ನಿಮ್ಮ ಮಾತಿಗೆ ಪ್ರತಿಹೇಳಿಕೆ ನೀಡಲು ನಾನೇನು ನಿಮ್ಮಂತೆ ನಿರುದ್ಯೋಗಿಯಲ್ಲ, ಪಂಚಪೀಠಾಧೀಶರಿಗೆ, ಹಾನಗಲ್ ಕುಮಾರ ಶಿವಯೋಗಿಗಳ ಬಗ್ಗೆ ಯಾರು ಯಾರು ಹಗುರವಾಗಿ ಮಾತನಾಡಿದ್ದಾರೆ ಎಂಬುದು ನನಗೆ ಗೊತ್ತಿದೆ, ಸಮಯ ಬಂದಾಗ ಬಹಿರಂಗ ಪಡಿಸುವೆ, ನಿಮ್ಮ ಲೂಸ್ ಟಾಕ್ ಮುಂದುವರೆಸಿದರೆ ಇದಕ್ಕೆ ಅಂತ್ಯ ಹಾಡಬೇಕಾಗುತ್ತದೆ ಎಂದು ವಿಜಯಪುರ ನಗರ ಶಾಸಕ ಯತ್ನಾಳರು ತಮ್ಮ ವಿರುದ್ಧ ನಿನ್ನೆ ನಡೆಸಿದ ವಾಗ್ದಾಳಿಗೆ ಪ್ರತಿಯಾಗಿ ಸಚಿವ ಡಾ.ಎಂ.ಬಿ. ಪಾಟೀಲ ಎಚ್ಚರಿಕೆ ನೀಡಿದರು.ಯತ್ನಾಳರು ಈ ಹಿಂದೆ ವೋಟಿನ ಆಸೆಗಾಗಿ ನಮಾಜ್ ಟೋಪಿ ಸಲ್ಲಿಸಿ ಇಫ್ತಿಯಾರ್ ಕೂಟದಲ್ಲಿ ಪಾಲ್ಗೊಂಡ ಛಾಯಾಚಿತ್ರಗಳನ್ನು ಮೊಬೈಲ್‌ಗಳಲ್ಲಿ ಪ್ರದರ್ಶಿಸಿದರು.ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳ ಒಬ್ಬ ಸೋಕಾಲ್ಡ್ ಹಿಂದೂ ಹುಲಿ, ಈ ಹಿಂದೆ ವೋಟಿನ ಆಸೆಗಾಗಿ ಮುಸ್ಲಿಂರ ಬಳಿ ಹೋದಾಗ ಹಿಂದೂತ್ವ ಇರಲಿಲ್ಲವೇ? ಎಂದು ಪ್ರಶ್ನಿಸಿದರು.ಲಿಂಗಾಯತ ಪ್ರತ್ಯೇಕ ಧರ್ಮ ಎಲ್ಲ ಎಂದು…

Read More