ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವತಿಯಿಂದ ಜಿಲ್ಲೆಯ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಲಬುರ್ಗಿ ಘಟಕದ ವಿಭಾಗ-೧ ರಿಂದ ಕಲಬುರ್ಗಿ, ವಿಜಯಪುರ, ಬೆಳಗಾವಿ ಮಾರ್ಗವಾಗಿ ಗೋವಾ ರಾಜ್ಯದ ಪಣಜಿಗೆ ಅಮೋಘವರ್ಷ ನಾನ್ ಎ.ಸಿ ಸ್ಲೀಪರ ಕೋಚ್ ಬಸ್ ಅನ್ನು ಆರಂಭಿಸಲಾಗಿದೆ.
ನೂತನ ಬಸ್ ಕಲಬುರ್ಗಿಯಿಂದ ಸಂಜೆ ೧೮-೦೧ಕ್ಕೆ ಹೊರಟು, ಸಿಂದಗಿಗೆ ಸಂಜೆ ೨೦-೧೫ಕ್ಕೆ ಆಗಮಿಸುವುದು. ಸಂಜೆ ೨೦-೪೦ಕ್ಕೆ ದೇವರ ಹಿಪ್ಪರಗಿಯಿಂದ ಹೊರಟು, ವಿಜಯಪುರಕ್ಕೆ ರಾತ್ರಿ ೨೧-೫೦ ಆಗಮಿಸುವುದು. ವಿಜಯಪುರದಿಂದ ಹೊರಟು ಪಣಜಿಯನ್ನು ಮರುದಿನ ಬೆಳಿಗ್ಗೆ ೬-೧೫ಕ್ಕೆ ತಲುಪಲಿದೆ. ಕಲಬುರ್ಗಿಯಿಂದ ಪಣಜಿಗೆ ರೂ,೧೨೫೭, ಸಿಂದಗಿಯಿಂದ ಪಣಜಿಗೆ ರೂ,೧೦೫೪, ದೇವರ ಹಿಪ್ಪರಗಿಯಿಂದ ಪಣಜಿಗ ರೂ. ೯೮೧ ಹಾಗೂ ವಿಜಯಪುರದಿಂದ ಪಣಜಿಗೆ ರೂ ೮೮೬ ಬಸ್ ದರವಿದ್ದು, ಪ್ರಯಾಣಿಕರು ಈ ಬಸ್ಸಿನ ಸದುಪಯೋಗ ಪಡೆಸುಕೊಳ್ಳುವಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
