ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಭಗವದ್ಗೀತೆ ಒಂದು ದೇಶಕ್ಕೆ ಸೀಮಿತವಾದ ಗ್ರಂಥವಲ್ಲ. ಇಡೀ ಮನುಕುಲದ ಒಳಿಗಾಗಿ ಇರುವ ಗ್ರಂಥ ಎಂದು ಬಾಗಲಕೋಟೆಯ ಭಗವದ್ಗೀತಾ ಅಭಿಯಾನದ ಧರ್ಮದರ್ಶಿ ಪಂ.ಬಿಂದುಮಾಧವಾಚಾರ್ಯ ನಾಗಸಂಪಿಗೆ ಹೇಳಿದರು.
ಪಟ್ಟಣದ ಶ್ರೀ ಗುರು ರಾಘವೇಂದ್ರ ಮಹಾಸ್ವಾಮಿಗಳ ಬೃಂದಾವನ ಸನ್ನಿಧಿಯ ಧಾರ್ಮಿಕ ಭವನದಲ್ಲಿ ಶಿರಸಿ ಸೋಂದಾ ಸ್ವರ್ಣವಲ್ಲೀ ಸಂಸ್ಥಾನ ಯತಿವರೇಣ್ಯ, ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನಡೆಸುತ್ತಿರುವ ಭಗವದ್ಗೀತಾ ಅಭಿಯಾನ ಕರ್ನಾಟಕ-೨೦೨೫ನ್ನು ಉದ್ಘಾಟಿಸಿ, ಪ್ರಥಮ ಪಠಣದ ಪಾಠವನ್ನು ಬೋಧಿಸಿ ಅವರು ಮಾತನಾಡಿದರು.
ಮೊಟ್ಟ ಮೊದಲ ಮನೋವಿಜ್ಞಾನಿ ಕೃಷ್ಣ, ಮನಃಶಾಸ್ತ್ರ ಗ್ರಂಥ ಭಗವದ್ಗೀತೆಯಾಘಿದೆ. ಭಗವದ್ಗೀತೆ ಎನ್ನುವ ದೀಪವನ್ನು ಮನೆಮನೆಗೆ ಹಚ್ಚುವ ಉದ್ದೇಶದಿಂದ ಅಭಿಯಾನವನ್ನು ಪ್ರಾರಂಭಿಸಿದ ಮೊದಲ ಮಾಹನ್ ಸಂತರು ಗಂಗಾಧರೇAದ್ರ ಸ್ವಾಮಿಗಳು. ಮನುಕುಲ ವ್ಯಾಪಿಸಿರುವ ವಿಶ್ವಕ್ಕೆ ಪರಿಚಯಿಸುವ ಉದ್ದೇಶಕ್ಕಾಗಿಯೆ ಶ್ರೀಗಳವರು ಭಗವದ್ಗೀತಾ ಅಭಿಯಾನ ಪ್ರಾರಂಭಿಸಿದ್ದಾರೆ. ಪ್ರತಿಯೊಬ್ಬರೂ ಭಗವದ್ಗೀತೆ ಎಂದರೇನು? ಅದರ ಪ್ರಯೋಜನದ ಬಗ್ಗೆ ಅರಿತಾಗಿಲೇ ಅಭಿಯಾನದ ಯಶಸ್ಸಾಗುತ್ತದೆ.
ಅರ್ಜುನನ ಮೋಹ ನಾಶಕ್ಕೆ ಹೊರಟಿದ್ದೆ ಗೀತಾ ಶಾಸ್ತ್ರ. ಭಗವಂತನ ಕರುಣೆಯಿಂದ ಅರ್ಜುನನಿಗೆ ಉಪದೇಶ ಮಾಡಿದ ಗ್ರಂಥವೇ ಭಗವದ್ಗೀತೆ. ಧರ್ಮ ಮತ್ತು ದೇಶ ಹಾನಿಯಾಗದಂತೆ ನೋಡಿಕೊಳ್ಳಬೇಕು. ದೇಶದ್ರೋಹಿ ಚಟುವಟಿಕೆಗಳು ಹೆಚ್ಚಾದಾಗ ದೇಶದ ರಕ್ಷಣೆಗಾಗಿ ಯುದ್ಧ ಅನಿವಾರ್ಯ. ಅಧರ್ಮದ ನಾಶಕ್ಕಾಗಿಯೆ ಭಗವಂತ ಮಹಾ ಭಾರತದಂತಹ ಯದ್ಧವನ್ನು ನಿಮಿತ್ತ ಮಾತ್ರನಾದ ಅರ್ಜುನನ ಮೂಲಕ ಮಾಡಿಸಿದ್ದಾನೆ. ನಾವು ಭಗವಂತನನ್ನು ಕಾಣಲು ಸಮರ್ಥರಲ್ಲ. ಅವನು ಕಾಣಿಸಬೇಕು. ಭಗವದ್ಗೀತೆ ಸರ್ವಾಕಾಲಿಕ, ಸರ್ವ ಸ್ಪರ್ಶಿ, ಸರ್ವ ವ್ಯಾಪಿ ಗ್ರಂಥ. ತಂದೆ, ತಾಯಿ, ಗುರುಗಳಿಗೆ ನಾವು ಸಂತೋಷದಿAದ ಮಾತನಾಡುವಾಗ, ಆಡುವ ಮಾತಿನ ಬಗ್ಗೆ ಪ್ರಜ್ಞೆ ಇರಬೇಕು. ಅವರ ಮನಸ್ಸಿಗೆ ನೋವಾಗದಂತೆ ಮಾತನಾಡಬೇಕು. ಇದು ಭಗವದ್ಗೀತೆ ಕಲಿಸುವ ಪಾಠ ಎಂದು ೧೧ನೇ ಅಧ್ಯಾಯದ ಮೇಲೆ ಉಪನ್ಯಾಸ ನೀಡಿದರು.
ಈ ವೇಳೆ ಅಭಿಯಾನ ಸಮಿತಿಯ ಅಧ್ಯಕ್ಷ ಶ್ರೀಶೈಲ್ ದೊಡಮನಿ, ಶ್ರೀಮಠದ ಅಧ್ಯಕ್ಷ ಎಸ್.ಆರ್.ಕುಲಕರ್ಣಿ, ಉಪಾಧ್ಯಕ್ಷ ಕೆ.ಬಿ.ದೇಶಪಾಂಡೆ, ಕಾರ್ಯದರ್ಶಿ ವಿ.ಜಿ.ಪಾಟೀಲ್, ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಪುರಸಭೆ ಸದಸ್ಯರುಗಳಾದ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಎಸ್.ಎಸ್.ಗುರವ್ಹ್, ಎಸ್.ಎಚ್.ಮುದ್ನಾಳ, ಬಿ.ಪಿ.ಕುಲಕರ್ಣಿ, ಅರ್ಚಕ ಗುರುರಾಜ ರಾಜಪುರೋಹಿತ, ಪ್ರಶಿಕ್ಷರಾದ ವೀಣಾ ಹಿರೇಮಠ, ರಂಜಿತಾ ಭಟ್ಟ, ಪ್ರಭಾ ಹೆಬ್ಬಾರ, ಲಕ್ಮೀ ನಲವಡೆ, ಲಕ್ಮೀಬಾಯಿ ತಾಡಪತ್ರೆ ಸೇರಿದಂತೆ ಇತರರು ಇದ್ದರು.
ಅಭಿರಾಮ ಹೆಗಡೆ ಸ್ವಾಗತಿಸಿದರು. ಸೃಷ್ಠಿ ಕುಲಕರ್ಣಿ ಪ್ರಾರ್ಥಿಸಿದರು. ಸಂಚಾಲಕ ರಾಮಚಂದ್ರ ಹೆಗಡೆ ಅಭಿಯಾನದ ಕಾರ್ಯವೈಖರಿಯ ವಿಸ್ತೃತ ಮಾಹಿತಿಯೊಂದಿಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಪ್ರಶಿಕ್ಷಕ ಮಂಜುನಾಥ ಪಡದಾಳಿ ನಿರೂಪಿಸಿ ವಂದಿಸಿದರು.

