ದೇಗಿನಾಳ ಗ್ರಾಮದ ಶ್ರೀ ಮಹಾಲಕ್ಷ್ಮಿದೇವಿ ಜಾತ್ರಾ ಮಹೋತ್ಸವ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಜಾತ್ರಾ ಮಹೋತ್ಸವಗಳು ಭಕ್ತಿ ಭಾವದ ಸಂಕೇತವಾಗಿವೆ ಎಂದು ದೇಗಿನಾಳ ಶ್ರೀ ಮಹಾಲಕ್ಷ್ಮಿದೇವಿ ಜಾತ್ರಾ ಮಹೋತ್ಸವದ ಸಮೀತಿ ಅಧ್ಯಕ್ಷ ರಮೇಶಗೌಡ ಬಿರಾದಾರ ಹೇಳಿದರು.
ದೇಗಿನಾಳ ಗ್ರಾಮದ ಶ್ರೀ ಮಹಾಲಕ್ಷ್ಮಿದೇವಿ ಜಾತ್ರಾ ಮಹೋತ್ಸವದ ನಿಮಿತ್ಯ ಭಾನುವಾರ ದೇವಿಯ ಗುಡಿಯ ಆವರಣದಲ್ಲಿ ನಡೆದ ಮುತೈದೆಯರಿಗೆ ಉಡಿತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇವಸ್ಥಾನಗಳು ಶೃದ್ಧಾ ಭಕ್ತಿ ಭಾವದ ತಾಣಗಳಾಗಿ ಮತ್ತು ಸನ್ಮಾರ್ಗದ ದಾರಿ ತೋರುವ ಕೇಂದ್ರಗಳಾಗಿವೆ ಎಂದು ಹೇಳಿದರು.
ವಿವಿಧ ಕಲಾ ವಾದ್ಯ ಹಾಗೂ ಕುಂಭ ಹೊತ್ತ ಮಹಿಳೆಯರು ಮತ್ತು ಡೊಳ್ಳು ಕುಣಿತದ ವೈಭವದೊಂದಿಗೆ ಶ್ರೀ ಮಹಾಲಕ್ಷ್ಮಿದೇವಿಯ ಪಲ್ಲಕ್ಕಿಯು ಗ್ರಾಮದ ಪ್ರಮುಖ ಮಾರ್ಗದಲ್ಲಿ ಮೆರವಣಿಗೆ ಮಾಡಲಾಯಿತು.
ಜಾತ್ರಾ ಮಹೋತ್ಸವದಲ್ಲಿ ಹೊರ್ತಿ, ಸಾವಳಸಂಗ, ಇಂಚಗೇರಿ, ಬಸನಾಳ, ಅಗಸನಾಳ, ಕೊಟ್ನಾಳ, ನಿಂಬಾಳ, ಹಳಗುಣಕಿ, ಹಡಲಸಂಗ, ಸೊನಕನಹಳ್ಳಿ, ಕಪನಿಂಬರಗಿ, ಡೋಮನಾಳ, ಕ್ಯಾತನ ಕೇರಿ, ಕೊಳುರಗಿ ಕನ್ನೂರ ದೇಗಿನಾಳ ಗ್ರಾಮಸ್ಥರು ಸೇರಿದಂತೆ ಮುಂತಾದ ಗ್ರಾಮಗಳ ಸಾವಿರಾರು ಭಕ್ತರು ಶ್ರೀ ಮಹಾಲಕ್ಷ್ಮಿದೇವಿ ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು.

