ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ಕರ್ನಾಟಕ ರಾಜ್ಯ ಮೋಚಿಗಾರ ಸಮಾಜದ ಸಂಘಟನಾತ್ಮಕ ಸಮಿತಿ ರಚನೆ ಘೋಷಿಸಲಾಯಿತು.
ಈ ಹೊಸ ಸಮಿತಿಯಲ್ಲಿ ವಿವಿಧ ಹುದ್ದೆಗಳಿಗೆ ಪ್ರಮುಖ ಮುಖಂಡರು ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಮಹದೇವಪ್ಪ ಸ್ವಾದಿ ರಾಜ್ಯಾಧ್ಯಕ್ಷರಾಗಿ ಹನುಮಂತಪ್ಪ ಮ. ಬಂಕಾಪೂರ ಸಲಹಾ ಸಮಿತಿ ಅಧ್ಯಕ್ಷರಾಗಿ ಡಾ. ಬಿ.ಎಸ್. ಮದಕಟ್ಟಿ ರಾಜ್ಯ ಉಪಾಧ್ಯಕ್ಷರಾಗಿ ಮಹಾದೇವ ಹುಣಸೂರ, ಶ್ರೀಕಾಂತ ಮಾಲಗತ್ತಿ, ಮಲ್ಲೇಶಪ್ಪ ಬಂಕಾಪೂರ, ಅಶೋಕ ನೀಡಗಲ್, ರವೀಂದ್ರ ಗೌಡರ, ಡಾ. ಪ್ರಕಾಶ ಎಸ್. ಇನಾಮದಾರ ಮತ್ತು ಉಮೇಶ ನರಗುಂದ ನೇಮಕಗೊಂಡಿದ್ದಾರೆ.
ಕಾರ್ಯನಿರ್ವಹಣಾ ಸಮಿತಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸುನೀಲ ರಾ. ಜೈನಾಪುರ, ಖಜಾಂಚಿಯಾಗಿ ಗಣಪತಿ ಸ್ವಾದಿ, ಕಾರ್ಯದರ್ಶಿ (ಸಲಹಾ ಸಮಿತಿ) ಎಸ್.ಪಿ. ಶಿವಕುಮಾರ್, ಜಂಟಿ ಕಾರ್ಯದರ್ಶಿಯಾಗಿ ರೇವಣ್ಣ ಕಡೇಮನೆ ಸೇರಿದಂತೆ ಅನೇಕರು ಸೇವೆ ಸಲ್ಲಿಸಲಿದ್ದಾರೆ.
ಸಂಘಟನಾ ಕಾರ್ಯದರ್ಶಿಗಳಾಗಿ ವೈ. ನಂಜುಂಡಪ್ಪ, ಮಂಜುನಾಥ ಬ್ಯಾಹಟ್ಟಿ, ವಿ. ಆಯಿಲ ಕೃಷ್ಣಪ್ಪ, ಯಲ್ಲಪ್ಪ ಮಾಳಗಿಮನಿ, ಅನಂತಪದ್ಮನಾಭಯ್ಯ ಮತ್ತು ವೈ. ನರಸಪ್ಪ ನೇಮಕಗೊಂಡಿದ್ದಾರೆ. ಸಹ ಕಾರ್ಯದರ್ಶಿಯಾಗಿ ಶ್ರೀ ಫಕೀರಪ್ಪ ಬ್ಯಾಹಟ್ಟಿ ಸೇವೆ ಸಲ್ಲಿಸಲಿದ್ದಾರೆ.
ಕಾನೂನು ಸಲಹೆಗಾರರಾಗಿ ತೇಜಸ್ ಹಾಗೂ ಶ್ರೀ ಪ್ರಕಾಶ್ ಲಕ್ಷ್ಮಣ್ ಹಾದಿಮನಿ, ಮಾಧ್ಯಮ ಸಲಹೆಗಾರರಾಗಿ ಬಿ. ದೇವಣ್ಣ ನೇಮಕಗೊಂಡಿದ್ದಾರೆ.
ನಿರ್ದೇಶಕರಾಗಿ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 21 ಮಂದಿ ಪ್ರಮುಖರು ಆಯ್ಕೆಯಾಗಿದ್ದು, ಇವರಲ್ಲಿ ಕೆ.ಪಿ. ಪುಟ್ಟಣ್ಣಯ್ಯ, ಮೈಲಾರಿ ಶೇಳ್ಳಗಿ, ಶ್ರೀಮಂತ ಮದರಿ, ಸಿ.ಎಚ್. ನಾಗರಾಜ, ಜಗಧೀಶ ಮನಗೂಳಿ, ಪ್ರದೀಪರಾಜ ಬಿ. ಅಲಬನೂರ, ಮಂಜುನಾಥ ಕೋಳೂರು, ಮಹಾಂತೇಶ ತರೀಕೆರೆ, ಬಸವರಾಜ ಹೊಸಮನಿ, ವಿರೇಶ ತಾವರಗೇರಿ, ರಾಜು ಕೆಂಭಾವಿ, ಭೀಮರಾವ, ವಿ. ಸೂರ್ಯಪ್ರಕಾಶ, ರಾಘವೇಂದ್ರ ಹಾವನೂರು, ಪರಶುರಾಮ ಇನಾಮದಾರ, ಚಂದ್ರು ಗಿರೀಶ್, ಪರಶುರಾಮ ಗೋಠೇ, ಅಣ್ಣಯ್ಯ ಕಡೆಮನಿ, ಪಿ. ನಾಗೇಂದ್ರ ಹಾಗೂ ಶ್ರೀ ಬಸವಂತಪ್ಪ ಈರಪ್ಪ ಮತ್ತಿಕಟ್ಟಿ ಒಳಗೊಂಡಿದ್ದಾರೆ.
ಈ ಸಮಿತಿಯು ರಾಜ್ಯದ ಮೋಚಿಗಾರ ಸಮಾಜದ ಏಕತೆ, ಸಬಲೀಕರಣ ಹಾಗೂ ಸಾಮಾಜಿಕ ನ್ಯಾಯದ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಪ್ರಕಟಣೆಯಲ್ಲಿ ರಾಜ್ಯಾಧ್ಯಕ್ಷ ಹಣಮಂತಪ್ಪ ಬಂಕಾಪೂರ ತಿಳಿಸಿದ್ದಾರೆ.
