Author: editor.udayarashmi@gmail.com

೧೧ ಅಂಗನವಾಡಿ ಕೇಂದ್ರಗಳು ಸೇರಿ ಆಚರಿಸಿದ ಸಂಭ್ರಮದ ಬಾಲಮೇಳ | ಪ್ರತಿಭಾ ಪುರಸ್ಕಾರ ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಮಗುವಿಗೆ ಜನ್ಮ ಕೊಟ್ಟ ಒಬ್ಬ ತಾಯಿಯ ಜವಾಬ್ದಾರಿ ಎಷ್ಟಿರುತ್ತದೆಯೋ ಅಷ್ಟೇ ಜವಾಬ್ದಾರಿಯನ್ನು ಅಂಗನವಾಡಿಯಲ್ಲಿ ಕಾರ್ಯ ನಿರ್ವಹಿಸುವ ಮಾತೆಯರು ಹೊಂದಿದ್ದು, ಮಗು ಹುಟ್ಟಿದ ಎರಡು ವರ್ಷಗಳ ನಂತರ ತಾಯಿಗಿಂತ ಹೆಚ್ಚಿನ ಲಾಲನೆ ಪಾಲನೆ ಆರೈಕೆಗಳ ಜವಾಬ್ದಾರಿಯನ್ನು ಹೊತ್ತು ಮಗುವಿನ ಶಾರೀರಿಕ ಮತ್ತು ಬೌದ್ಧಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಪೀಸ್ ಇಂಟರ್‌ನ್ಯಾಷನಲ್ ಶಾಲೆಯ ಮುಖ್ಯಗುರುಗಳಾದ ಚಾಂದಪಾಶಾ ಹವಾಲ್ದಾರ ಹೇಳಿದರು.ಗ್ರಾಮದ ಸರಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಜಯಪುರ, ಶಿಶು ಅಭಿವೃದ್ಧಿ ಯೋಜನೆ ಸಿಂದಗಿ ಹಾಗೂ ಅಜೀಂ ಪ್ರೇಮ್‌ಜಿ ಫೌಂಡೇಶನ್ ವಿಜಯಪುರ ಅವರ ಸಹಯೋಗದಲ್ಲಿ ಕಲಕೇರಿ ವಲಯ ಮಟ್ಟದ ಬಾಲಮೇಳ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಗ್ರಾಪಂ ಸದಸ್ಯರಾದ ನಬಿಲಾಲ ನಾಯ್ಕೋಡಿ ಮತ್ತು ಸುಧಾಕರ ಅಡಕಿ ಅವರು ಮಾತನಾಡಿ ಪ್ರತಿಯೊಂದು ಮಗುವಿಗೆ ಆಟದೊಂದಿಗೆ ಪಾಠವನ್ನು ಕಲಿಸುತ್ತಾ…

Read More

ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ನನ್ನೊಲವೆ..ಪ್ರೀತಿ ಪ್ರೇಮದ ವಿಷಯದಲ್ಲಿ ತಿರಸ್ಕರಿಸಲ್ಪಟ್ಟರೆ ಅದೆಂಥ ಭಯಂಕರ ನೋವು ಆಗುತ್ತದೆ ಅನ್ನೋದು ಅನುಭವಿಸಿದರಿಗೆ ಗೊತ್ತು. ಅದೊಂಥರ ಹಲ್ಲು ನೋವಿದ್ದ ಹಾಗೆ. ಎಂಥ ಹುಲಿಯಂಥ ಮನುಷ್ಯನನ್ನೂ ನರಮ್ ಮಾಡಿಬಿಡುತ್ತದೆ. ಈ ಸಾಲುಗಳು ನಿನ್ನ ಭಾವ ಪ್ರಪಂಚವನ್ನು ತಟ್ಟುತ್ತವೆ ಅಂದುಕೊಂಡಿದಿನಿ. ಇವು ಕೇವಲ ಪದಗಳಲ್ಲ. ನಿನಗಾಗಿ ಬರೆದ ಮೌನ ಮಿಲನದ ಮುದ್ದು ಮನವಿ ಪತ್ರ. ಪ್ರೀತಿಯ ಭಾವದಲ್ಲಿ ವಿರಹದ ಉರಿ ಸಣ್ಣಗೆ ಮನಸ್ಸನ್ನು ಸುಡುತ್ತಿದೆ. ಒಂದೇ ಒಂದು ಸಾರಿ ಎದೆಗವಚಿಕೊಂಡು ಸಾಲು ಸಾಲು ಮುತ್ತಿಕ್ಕಿದರೆ ಸಾಕು. ಹೃದಯದಲ್ಲಿ ನೀ ಮಾಡಿದ ಆಳವಾದ ಗಾಯ ಮಾಯ. ಹರಿಯುವ ನೀರಿನಂತೆ ಸುಡುವ ಬೆಂಕಿಯಂತೆ ಅರಳಿದ ಪ್ರೀತಿಯನ್ನು ಬಚ್ಚಿಡುವುದು ಅಸಾಧ್ಯ. ಪ್ರೀತಿಯಲ್ಲಿ ಸಾವು ಬಂದರೂ ಲೆಕ್ಕಕ್ಕಿಲ್ಲ. ಸಾವಿನ ಭಯವೂ ನನಗಿಲ್ಲ.ಭಯದ ನೆರಳಲ್ಲಿ ಬದುಕುವುದು ಒಂದು ಬದುಕೇ? ಪ್ರೀತಿಯಿಲ್ಲದ ಜೀವನ, ಜೀವನವೂ ಅಲ್ಲ. ನೀನು ಒಲಿದಾಗ ಇಷ್ಟಿಷ್ಟೇ ಬದಲಾಗಿದ್ದೆ. ತಡೆ ಹಿಡಿದ ಮನದ ಎಲ್ಲ ಬಯಕೆಗಳನು ಮೆರವಣಿಗೆಗೆ ಸಜ್ಜುಗೊಳಿಸಿದ್ದೆ. ನಾನು…

Read More

ಲೇಖನ- ಅವಿನಾಶ ಸೆರೆಮನಉಪನ್ಯಾಸಕರುಬೈಲಹೊಂಗಲಬೆಳಗಾವಿ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಕಷ್ಟಗಳ ಬೆಂಕಿಯಲ್ಲಿ ಬೆಂದು ಕಣ್ಣೀರಿನ ನದಿಯಲಿ ಮಿಂದು ಎಂದಿಗೂ ನೋವು ತೋರಿಸೊಕೊಳ್ಳದೆ ಒಳಗೊಳಗೆ ನುಂಗಿಮನೆತನದ ಪ್ರತಿ ಸದಸ್ಯರ ಕೊಂಕು, ಪ್ರೀತಿ, ಕೋಪ ರೋಷಭರಿತ ಮಾತುಗಳನ್ನು ಸಹಿಸಿ ತಾನು ಉಪವಾಸವಿದ್ದರೂ ಚಿಂತೆಯಿಲ್ಲ ಮನೆಮಂದಿ ಮಕ್ಕಳು ಚೆನ್ನಾಗಿರಲಿ ಎಂದು ಬಯಸುತ ಹಿಂದೆ ಮುಂದೆ ಸಾವಿರಾರು ಜನ ಏನೇ ಅಂದರೂ ಕುಗ್ಗದೆ ಸವಾಲಾಗಿ ಸ್ವೀಕರಿಸಿ ತನ್ನೆಲ್ಲ ಬಯಕೆಗಳನ್ನು ನೋವು ನಲಿವುಗಳನ್ನು ಬದಿಗೊತ್ತಿ ಮಕ್ಕಳ ಖುಷಿಯಲ್ಲೇ ತನ್ನ ಖುಷಿಯ ಕಾಣುತ. ಮಕ್ಕಳ ಬಟ್ಟೆ ಹರಿದರೆ ಹೊಸದನ್ನು ಕೊಡಿಸಿ ತಾನು ಮಾತ್ರಸೀರೆ ಹರಿದರೂ ದಾರದಿಂದ ಹೊಲೆದುಕೊಂಡು ಜೀವನ ಸಾಗಿಸುತ ಮನೆಯಲ್ಲಿ ಎಲ್ಲರಿಗೂ ಬಿಸಿ ಬಿಸಿಯಾದ ಅಡುಗೆ ಮಾಡಿ ತಾನು ಹಿಂದಿನ ದಿನ ಅಥವಾ ಇತರ ಉಳಿದ ಆಹಾರ ಸೇವಿಸುತ ಮನೆಯಲ್ಲಿ ಮನದಲ್ಲಿ ಎಷ್ಟೇ ಸಮಸ್ಯೆಗಳಿದ್ದರೂಮೌನವಾಗಿಯೇ ಪರಿಹಾರ ಕಂಡುಕೊಳ್ಳುತ ಎಲ್ಲವನ್ನು ತನ್ನವರಿಗಾಗಿ ತ್ಯಾಗ ಮಾಡುವ ಏಕೈಕ ಜೀವವೆಂದರೆ ಹೆಸರಿಡಲಾಗದ ಹೆಸರಿಗೂ ನಿಲುಕದ ಉಸಿರಿಗೂ ಜೀವ ತುಂಬುವ ದೇವರ ಸ್ವರೂಪಿ ಕರುಣಾಮಯಿ ಮಹಿಳೆ.ಇಂದಿನ…

Read More

ಲೇಖನ- ಪ್ರಶಾಂತ ಕುಲಕರ್ಣಿ ಉಪನ್ಯಾಸಕರುಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯಸಿಂದಗಿಮೊ: 9845442237 ಉದಯರಶ್ಮಿ ದಿನಪತ್ರಿಕೆ ಮಾನವ ಸಮಾಜದ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕುಟುಂಬ, ಸಮಾಜ, ಸಂಸ್ಕೃತಿ ಹಾಗೂ ನಾಗರಿಕತೆಯ ಬೆಳವಣಿಗೆಯಲ್ಲಿ ಮಹಿಳೆಯರು ತಮ್ಮ ಶ್ರಮ, ಪ್ರೀತಿ, ಸಹನೆ ಮತ್ತು ಜ್ಞಾನದಿಂದ ಅಪಾರ ಕೊಡುಗೆ ನೀಡಿದ್ದಾರೆ. ಮಹಿಳೆ ಕೇವಲ ಕುಟುಂಬದ ನಿರ್ವಹಣೆಯಲ್ಲಿ ಮಾತ್ರವಲ್ಲದೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಶಕ್ತಿಯಾಗಿದೆ. ಆದಾಗ್ಯೂ ಇತಿಹಾಸದ ಹಲವು ಘಟ್ಟಗಳಲ್ಲಿ ಮಹಿಳೆಯರು ಸಮಾನ ಹಕ್ಕುಗಳಿಂದ ವಂಚಿತರಾಗಿದ್ದು ಅನೇಕ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಅಡೆತಡೆಗಳನ್ನು ಎದುರಿಸಿದ್ದಾರೆ. ಈ ಅಸಮಾನತೆಗಳ ವಿರುದ್ಧ ನಡೆದ ಹೋರಾಟದ ಸಂಕೇತವಾಗಿ ಪ್ರತಿ ವರ್ಷ ಮಾರ್ಚ್ 8 ರಂದು “ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ” ಆಚರಿಸಲಾಗುತ್ತದೆ.ಈ ದಿನವು ಮಹಿಳೆಯರ ಸಾಧನೆಗಳನ್ನು ಸ್ಮರಿಸುವುದಕ್ಕೂ, ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದಕ್ಕೂ ಮತ್ತು ಸಮಾನತೆಗಾಗಿ ಸಮಾಜವನ್ನು ಪ್ರೇರೇಪಿಸುವುದಕ್ಕೂ ಮಹತ್ವದ ದಿನವಾಗಿದೆ. ಮಹಿಳೆಯರ ಶಕ್ತಿ, ಸಹನೆ ಮತ್ತು ಸಾಧನೆಗಳನ್ನು ಗೌರವಿಸುವ ಈ ದಿನವು ಕೇವಲ ಆಚರಣೆಯ…

Read More

ಬಜೆಟ್‌ನಲ್ಲಿ ‘ಜೀವ ವಿಮೆ’ ಭದ್ರತೆ ಮಿಸ್: ರಾಷ್ಟ್ರೀಯ ಮೀನುಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಗೌತಮ್ ಚೌಧರಿ ಬೇಸರ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರಾವಳಿ ಮತ್ತು ಒಳನಾಡು ಮೀನುಗಾರರ ಮೂಲಸೌಕರ್ಯ ಅಭಿವೃದ್ಧಿಗಾಗಿ ರಾಜ್ಯ ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳನ್ನು ‘ರಾಷ್ಟ್ರೀಯ ಮೀನುಗಾರರ ಸಂಘ’ ಸ್ವಾಗತಿಸುತ್ತದೆ. ಮೀನುಗಾರರಿಗೆ ನೀಡುವ ಕಿಟ್ ದರವನ್ನು ₹10,000 ದಿಂದ ₹20,000ಕ್ಕೆ ಹೆಚ್ಚಿಸಿರುವುದು, ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ‘ಸೆಂಟರ್ ಆಫ್ ಎಕ್ಸಲೆನ್ಸ್’ ಸ್ಥಾಪನೆ, ಹಾಗೂ ಹೊಸ ‘ಮತ್ಸ್ಯದರ್ಶಿನಿ’ಗಳು ಮತ್ತು ಸುಸಜ್ಜಿತ ಮೀನು ಮಾರುಕಟ್ಟೆಗಳನ್ನು ನಿರ್ಮಿಸುತ್ತಿರುವ ಸರ್ಕಾರದ ಕ್ರಮ ಶ್ಲಾಘನೀಯ. ಈ ಯೋಜನೆಗಳು ಮೀನುಗಾರಿಕೆ ಮಾರುಕಟ್ಟೆ ವಿಸ್ತರಣೆಗೆ ವರದಾನವಾಗಲಿವೆ ಎಂದು ಸಂಘದ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ. ಗೌತಮ್ ಚೌಧರಿ ಅವರು ತಿಳಿಸಿದ್ದಾರೆ.ಆದರೆ, ಕಡಲಿಗೆ ಇಳಿಯುವ ಮೀನುಗಾರರ ಬದುಕಿನ ಅತ್ಯಂತ ಸೂಕ್ಷ್ಮ ಹಾಗೂ ಜರೂರತ್ತಿನ ಬೇಡಿಕೆಗಳನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. “ಮೀನುಗಾರರ ಕಲ್ಯಾಣ ಎಂದರೆ ಕೇವಲ ಮಾರುಕಟ್ಟೆ ನಿರ್ಮಾಣವಲ್ಲ. ಪ್ರತಿದಿನ ಪ್ರಾಣದ ಹಂಗು ತೊರೆದು ಸಮುದ್ರಕ್ಕಿಳಿಯುವ ಮೀನುಗಾರನಿಗೆ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ತಾಲೂಕಿನ ತೆಲಗಿ ಬಳಿ ರೈಲ್ವೆ ಅಂಡರ್ ಪಾಸ್ ಹತ್ತಿರ ಹಾಕಿದ ಎತ್ತರ ನಿಯಂತ್ರಣ ಕಂಬ (ಓವರ್ ಹೈಟ್ ಗೇಜ್) ಗುರುವಾರ ಮುರಿದು ಬಿದ್ದ ಪರಿಣಾಮ ಭಾರಿ ಅನಾಹುತ ತಪ್ಪಿದೆ.ರೈಲ್ವೇ ಅಂಡರ್ ಪಾಸ್ ಮೂಲಕ ಹಾದು ಹೋಗುವ ಎತ್ತರದ ಭಾರಿ ವಾಹನಗಳಿಗೆ ರೈಲ್ವೆ ಇಲಾಖೆಯವರು ಎತ್ತರದ ಮೀತಿಯನ್ನು ಸೂಚಿಸುವ ಓವರ್ ಹೈಟ್ ಗೇಜ್ ಗೆ ಅಡ್ಡಲಾಗಿ ಹಾಕಿದ ಭಾರಿ ತೂಕದ ಕಬ್ಬಿಣದ ಕಂಬವೊಂದು ಏಕಾಏಕಿ ಮುರಿದು ಬಿದ್ದಿದೆ. ಇದರಿಂದ ಎರಡು ಗಂಟೆ ಟ್ರಾಪಿಕ್ ಜಾಮ್ ಸಂಭವಿಸಿ ಪ್ರಯಾಣಿಕರು ಬಹಳಷ್ಟು ತೊಂದರೆ ಅನುಭವಿಸಿದ ಪ್ರಸಂಗ ಜರುಗಿದೆ. ಕೊಲ್ಹಾರ ಕಡೆಯಿಂದ ಬಸವನಬಾಗೇವಾಡಿ ಕಡೆಗೆ ಹೋಗುವ ಮಾರ್ಗದಲ್ಲಿ ತೆಲಗಿ ರೈಲ್ವೆ ಅಂಡರ ಪಾಸ್ ಬಳಿ ಕುಲಕರ್ಣಿಯವರ ಮನೆಯ ಹತ್ತಿರ ಈ ಘಟನೆ ಸಂಭವಿಸಿದೆ. ಈ ವೇಳೆ ಯಾವ ವಾಹನಗಳು ಸಂಚರಿಸದ ಹಿನ್ನೆಲೆಯಲ್ಲಿ ಸಂಭವಿಸಬಹುದಾದ ಭಾರಿ ಅನಾಹುತ ಒಂದು ತಪ್ಪಿದೆ. ಈ ದೃಶ್ಯ ಕಂಡ ವಾಹನ ಚಾಲಕರು ಹಾಗೂ ಪ್ರಯಾಣಿಕರು ಒಂದು ಕ್ಷಣ ಗಾಬರಿಯಾಗಿದ್ದಾರೆ.…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಸರ್ವ ಜನಾಂಗದ ಶ್ರೇಯೋಭಿವೃದ್ದಿಗೆ ಪೂರಕವಾಗಿರುವ ಡಬಲ್ ಗ್ಯಾರಂಟಿ ಬಜೆಟ್ ಇದಾಗಿದೆ ಎಂದು ಆಲಮೇಲ ಬ್ಲಾಕ್ ಕಾಂಗ್ರೆಸ್ ಡಾಕ್ಟರ್ಸ್ ಸೆಲ್ ಅಧ್ಯಕ್ಷ ಡಾ ಸಮೀರ ಹಾದಿಮನಿ ಅಭಿಪ್ರಾಯ ಪಟ್ಟರು.ಶುಕ್ರವಾರ ಮುಖ್ಯ ಮಂತ್ರಿ ಸಿದ್ದರಾಮಯ್ಯ ದಾಖಲೆಯ ಬಜೆಟ್ ಮಂಡಣೆಯ ಹಿನ್ನೆಲೆಯಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ಶಿಕ್ಷಣ, ಆರೋಗ್ಯ, ನೀರಾವರಿ, ಕೃಷಿ, ಸೇರಿದಂತೆ ಸರ್ವ ಇಲಾಖೆಗಳ ಅಭಿವೃದ್ಧಿಗೆ ಗ್ಯಾರಂಟಿ ನೀಡಿದ ಬಜೆಟ್ ಇದಾಗಿದೆ ಎಂದು ಹೇಳಿದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 17817 ಕೋಟಿ ರೂಪಾಯಿ ಮೀಸಲು. ಕಲಬುರಗಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಐವಿಎಫ್ ಕೇಂದ್ರ, ಇಲಾಖೆಯ ಖಾಲಿ ಹುದ್ದೆಗಳ ಭರ್ತಿ.ಮನ್ರೇಗಾದ ಹೆಸರು ಕೇಂದ್ರ ಸರ್ಕಾರ ಬದಲಿಸಿದ್ದಕ್ಕೆ ರಾಜ್ಯದ ಎಲ್ಲ ಗ್ರಾಮಪಂಚಾಯತ ಗಳಿಗೆ ಮಹಾತ್ಮಾಗಾಂಧಿ ಗ್ರಾಮ ಪಂಚಾಯತಿ ಎಂದು ನಾಮಕರಣ ಮಾಡಿ ಮಹಾತ್ಮರಿಗೆ ಸಿದ್ಧರಾಮಯ್ಯನವರು ಗೌರವಸಲ್ಲಿಸಿದ್ದಾರೆ.16 ವರ್ಷದ ಕೆಳಗಿನ ಮಕ್ಕಳಿಗೆ ಮೊಬೈಲ್‌/ ಸಾಮಾಜಿಕ ಜಾಲತಾಣಗಳ ನಿಷೇಧ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯ ಮಹತ್ವದ ಅರಿವಿಗೆ, ನಾಯಕತ್ವ ಗುಣ ಬೆಳೆಸಿಕೊಳ್ಳಲು ಕಾಲೇಜುಗಳಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಗ್ರಾಮೀಣ ಭಾಗದ ಬಡ ಜನರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು 30 ವರ್ಷಗಳ ಹಿಂದೆ ಆರಂಬಿಸಿದ ಸಂಸ್ಥೆ ಇಂದು ಹೆಮ್ಮರವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಶಿವುಕುಮಾರ ಗುಂದಗಿ ಹೇಳಿದರು.ಅವರು ಪಟ್ಟಣದ ಗ್ರಾಮೀಣ ಅಭಿವೃದ್ಧಿ ವಿದ್ಯಾವರ್ಧಕ ಸಂಸ್ಥೆಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳ ಬಿಳ್ಕೋಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗ್ರಾಮೀಣ ಬಾಗದ ಮಕ್ಕಳಿಗಾಗಿ ಆರಂಭಿಸಿದ ಈ ಸಂಸ್ಥೆ ಇಂದು ಪ್ರಾಥಮಿಕ ದಿಂದ ಪದವಿ ಮಹಾವಿದ್ಯಾಲಯದವರೆಗೆ ಒಂದೆ ಸಂಸ್ಥೆಯಲ್ಲಿ ಕಲಿಯುವಂತೆ ವ್ಯವಸ್ಥೆ ಮಾಡಲಾಗಿದೆ ಅದಕ್ಕೆ ಜನರ ಸಹಕಾರದಿಂದ ಈ ಮಟ್ಟಕ್ಕೆ ಬೆಳದಿದೆ ಎಂದು ಹೆಳಿದರು ಎಂದರು. ಮಕ್ಕಳು ಶಿಕ್ಷಣದಲ್ಲಿ ಉತ್ತಮ‌‌‌ ಸಾಧನೆ ಮಾಡಬೇಕು ಎಂದರೆ ಶಿಕ್ಷರಷ್ಟೆ ಪಾಲಕರ ಜವಾಬ್ದಾರಿ ಮುಖ್ಯವಾಗಿದೆ ಎಂದು ಹೇಳಿದರು.ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೆತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಿ ಅಭಿನಂದಿಸಿದರು.ರಾಂಪೂರದ ನಿತ್ಯಾನಂದ ಮಹಾರಾಜರು ಸಾನಿದ್ಯ ವಹಿಸಿದ್ದರು. ಮುಖ್ಯ ಶಿಕ್ಷಕ ಜಿ.ಕೆ. ಅಂಬೂರೆ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್.ಆರ್. ಪೂಜಾರ,…

Read More

ವಿಧಾನಸಭೆಯಲ್ಲಿ ದಾಖಲೆಯ 17ನೇ ಬಜೆಟ್ ಮಂಡಿಸಿದ ಬಳಿಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಸುದ್ದಿಗೋಷ್ಠಿ ಬೆಂಗಳೂರು: 2026-27ನೇ ಸಾಲಿನ ಆಯವ್ಯಯದಲ್ಲಿ ರಾಜ್ಯದ ಜನರ ಭರವಸೆಗಳನ್ನು ಈಡೇರಿಸುವ ಜೊತೆಗೆ ವಿತ್ತೀಯ ಶಿಸ್ತನ್ನೂ ಪಾಲಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.ಶುಕ್ರವಾರ ವಿಧಾನಸಭೆಯಲ್ಲಿ ದಾಖಲೆಯ 17ನೇ ಬಜೆಟ್ ಮಂಡಿಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ, 2017ರಲ್ಲಿ ಜಿಎಸ್‌ಟಿ ಜಾರಿಗೆ ಬಂದಿದ್ದು, 8 ವರ್ಷಗಳ ನಂತರ ದರ ತರ್ಕಬದ್ಧಗೊಳಿಸಿದರು. ಇದರಿಂದ ಶೇ.10 ರಷ್ಟಿದ್ದ ರಾಜ್ಯದ ತೆರಿಗೆ ಸಂಗ್ರಹಣೆ, ಈಗ ಶೇ.4 ಕ್ಕೆ ಇಳಿದಿದೆ. ಕೆಲವು ರಾಜ್ಯಗಳು ಕೇಂದ್ರದ ದರ ಪರಿಷ್ಕರಣೆಯಿಂದ ತೊಂದರೆಗೊಳಗಾಗಿದ್ದು, ಇದುವರೆಗೂ ಚೇತರಿಸಿಕೊಂಡಿಲ್ಲ ಎಂದರು.ಜಿಎಸ್‌ಟಿ ಸಂಗ್ರಹಣೆಯಲ್ಲಿ ಮಹಾರಾಷ್ಟ್ರ ನಂತರ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕೇಂದ್ರದ ಈ ಹೊಸ ನೀತಿಯಿಂದ ರಾಜ್ಯಕ್ಕೆ ಸುಮಾರು ಸುಮಾರು ₹10 ಸಾವಿರ ಕೋಟಿಯಷ್ಟು ನಷ್ಟವಾಗಿದೆ. ಮುಂದಿನ ವರ್ಷ ₹15,000 ಕೋಟಿಯಷ್ಟು ನಷ್ಟವಾಗಲಿದೆ. ಕೇಂದ್ರ ಸರ್ಕಾರ ಅಸಹಕಾರ ಮತ್ತು ಮಲತಾಯಿ ಧೋರಣೆ ತೋರುತ್ತಿದೆ. ಆದರೂ ನಮ್ಮ ಬಜೆಟ್ ನಲ್ಲಿ ಹೆಚ್ಚು ವಿತ್ತೀಯ…

Read More

ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸುರೇಶ ಶಡಶ್ಯಾಳ ನೇತೃತ್ವದಲ್ಲಿ ಅಪರಜಿಲ್ಲಾಧಿಕಾರಿಗೆ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತದ ಜನಗಣತಿ 2026ರ ಮನೆ ಪಟ್ಟಿ ಜನಗಣತಿ ಕಾರ್ಯಕ್ಕೆ ವಿಶೇಷ ಪ್ರಕರಣ ಹೊಂದಿರುವ ನೌಕರರಿಗೆ ಮತ್ತು ಶಿಕ್ಷಕರಿಗೆ ಮನೆ ಪಟ್ಟಿ ಹಾಗೂ ಜನಗಣತಿ ಕಾರ್ಯದಿಂದ ವಿನಾಯಿತಿ ನೀಡಬೇಕೆಂದು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸುರೇಶ ಶಡಶ್ಯಾಳ ನೇತೃತ್ವದಲ್ಲಿ ಅಪರಜಿಲ್ಲಾಧಿಕಾರಿ ಡಾ.ಔದ್ರಾಮ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.ಮನವಿ ಸಲ್ಲಿಸಿ ಮಾತನಾಡಿದ ಸುರೇಶ ಶಡಶ್ಯಾಳ ಈಗಾಗಲೇ ವರ್ಗಾವಣೆಯಾದ ಶಿಕ್ಷಕರು, ವಿಶೇಷ ಚೇತನ ನೌಕರರಿಗೆ ಹಾಗೂ ಗರ್ಭಿಣಿ ಮಹಿಳಾ ನೌಕರರಿಗೆ ತೀವ್ರತರವಾದ ಕಾಯಿಲೆಯುಳ್ಳ ಸರ್ಕಾರಿ ನೌಕರರಿಗೆ, ಒಂದು ವರ್ಷದ ಮಗು ಇರುವ ಮಹಿಳಾ ನೌಕರರಿಗೆ ಈಗಾಗಲೇ ಬಿ. ಎಲ್. ಓ ಆಗಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಹಾಗೂ ಶಿಕ್ಷಕರಿಗೆ 55 ವರ್ಷ ಮೀರಿದ ಪುರುಷ ನೌಕರರಿಗೆ, 50 ವರ್ಷ ಮೀರಿದ ಮಹಿಳಾ ನೌಕರರಿಗೆ ಭಾರತದ ಜನಗಣತಿ ಮನೆ ಪಟ್ಟಿ ಕಾರ್ಯಕ್ಕೆ ವಿನಾಯಿತಿ ನೀಡಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ನೌಕರರ…

Read More