ನ.೧೪ ರಿಂದ ನ.೧೮ ರ ವರೆಗೆ ತಡವಲಗಾ ಶ್ರೀ ಮರುಳಸಿದ್ದೇಶ್ವರ ಜಾತ್ರೆ | ಲಕ್ಷ ದೀಪೋತ್ಸವ
ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ಸುಕ್ಷೇತ್ರ ತಡವಲಗಾ ಜೋಡಗುಡಿ ಗ್ರಾಮದ ಶ್ರೀ ಮರುಳಸಿದ್ದೇಶ್ವರ ಕಾರ್ತಿಕ ಮಾಸದ ಪ್ರಯುಕ್ತ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಕಳಸಾರೋಹಣ ಹಾಗೂ ಸರಳ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ಶ್ರೀ ಮರುಳಸಿದ್ದೇಶ್ವರ ಮಹಾರಥೋತ್ಸವ ಹಾಗೂ ಲಕ್ಷ ದೀಪೋತ್ಸವ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಲಿವೆ ಎಂದು ತಡವಲಗಾ ಹಿರೇಮಠದ ಶ್ರೀ ಅಭಿನವ ರಾಚೋಟೇಶ್ವರ ಶ್ರೀಗಳು ತಿಳಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಅವರು ನ ೧೪ ರಿಂದ ೧೮ ರ ವರೆಗೆ ಬೃಹತ್ ಜಾನುವಾರು ಜಾತ್ರೆ ಮತ್ತು ೧೪ ರಂದು ಸಾಯಂಕಾಲ ೬ ಗಂಟೆಗೆ ಬಾಲ ವಾಗ್ಮೀ ಕುಮಾರಿ ಹಾರಿಕಾ ಮಂಜುನಾಥ ಇವರಿಂದ ಉಪನ್ಯಾಸ,
ನ. ೧೫ ರಂದು ಬೆಳಗ್ಗೆ ೧೦.೩೦ ಗಂಟೆಗೆ ತಡವಲಗಾ ಸಾಂಸ್ಕೃತಿಕ ಉತ್ಸವ ಉದ್ಘಾಟನೆ ಸಂಕೀರ್ಣ ಗೋಷ್ಠಿ ಕವಿಗೋಷ್ಠಿ ವಿಶ್ವ ಚೇತನ ಪ್ರಶಸ್ತಿ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ , ಮಧ್ಯಾನ್ಹ ೧ ಗಂಟೆಗೆ ಖ್ಯಾತ ಅಂಕಣಕಾರ ಮಂಜುನಾಥ ಜುನಗೊಂಡ ಇವರಿಂದ ಧರ್ಮ ಮತ್ತು ಭಾರತೀಯ ಸಂಸ್ಕೃತಿ ಹಾಗೂ ರವೀಂಧ್ರ ಬೆಳ್ಳಿ ಇವರಿಂದ ಸಾಯಯುವ ಕೃಷಿ ಮತ್ತು ಆಧುನಿಕ ತಾಂತ್ರಿಕತೆ ಅಳವಡಿಕೆ ಹಾಗೂ ಸಿದ್ದಪ್ಪ ಬಿದರಿ ಇವರಿಂದ ಜಾನಪದದಲ್ಲಿ ಜೀವನ ಮೌಲ್ಯಗಳು ಎಂಬ ಸಂಕೀರ್ಣ ಗೋಷ್ಠಿ ನಂತರ ಶಂಕರ ಬೈಚಬಾಳ ಗುರುರಾಜ ಲೂತಿ ಹಾಗೂ ಅನೇಕ ಕವಿಗಳಿಂದ ಕವಿಗೋಷ್ಠಿ ನಂತರ ಸಮಾರೋಪ ಹಾಗೂ ಪ್ರಶಸ್ತಿ ಸಮಾರಂಭ ನಡೆಯಲಿದೆ ನಂತರ ಸಮಾರೋಪ ಹಾಗೂ ಪ್ರಶಸ್ತಿ ಸಮಾರಂಭ ನಂತರ ಶಂಬು ಬಳಿಗಾರ ಇವರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
೧೬ ರಂದು ಮಧ್ಯಾನ್ಹ ೩ ಗಂಟೆಗೆ ತಡವಲಗಾ ಗ್ರಾಮದ ಮೂಲ ದೇವಾಲಯದಿಂದ ಜೋಡಗುಡಿಯ ವರೆಗೆ ಉಜೈನಿ ಹಾಗೂ ಕಾಶಿ ಪೀಠದ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಕುಂಭ ಮೆರವಣೆಗೆ ನಡೆಯಲಿದೆ. ನಂತರ ಪುರಾಣ ಮಹಾಮಂಗಲ ಹಾಗೂ ಧರ್ಮಸಭೆ ಹಾಗೂ ಗ್ರಾಮದ ನಿವೃತರಾದವರಿಗೆ ಸನ್ಮಾನ
ನ ೧೭ ರಂದು ಬೆಳಗ್ಗೆ ೯.೩೦ ಗಂಟೆಗೆ ಮಹಾಲಕ್ಷ್ಮಿ ದೇವಸ್ಥಾನದ ಕಳಸಾರೋಹಣ ಬೆಳಗ್ಗೆ ೧೧ ಗಂಟೆಗೆ ಸರಳ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ಸಾಯಂಕಾಲ ೫ ಗಂಟೆಗೆ ನೂತನ ಶ್ರೀ ಮರುಳಸಿದ್ದೇಶ್ವ ಮಹಾ ರಥೋತ್ಸವ ರಾತ್ರಿ ೭ ಗಂಟೆಗೆ ಲಕ್ಷ ದೀಪೋತ್ಸವ ನಂತರ ಕಾರ್ಯಕ್ರಮದಲ್ಲಿ ಮಠಾಧೀಶರು ರಾಜಕೀಯ ಗಣ್ಯರು ಉಪಸ್ಥಿತರಿರುವರು.
ಪತ್ರಿಕಾಗೋಷ್ಠಿಯಲ್ಲಿ ಶಿವಾನಂದಯ್ಯ ಶಾಸ್ತ್ರಿಗಳು ಜಿ.ಪಂ ಮಾಜಿ ಉಪಾಧ್ಯಕ್ಷ ಬಾಬು ಸಾವಕಾರ ಮೇತ್ರಿ, ಮಳಸಿದ್ದಪ್ಪ ಖಸ್ಕಿ, ಡಾ. ರಮೇಶ ಪೂಜಾರಿ, ಬಸವರಾಜ ಚವಡಿಹಾಳ, ಅಣ್ಣಪ್ಪ ಜಾಲವಾದ, ಮಲ್ಲಪ್ಪ ತೆನೆಹಳ್ಳಿ ಕುತುಬುದ್ದೀನ ಬಾಗವಾನ, ಧರೇಪ್ಪ ಖಸ್ಕಿ ಮತ್ತಿತರಿದ್ದರು.

