ಉದಯರಶ್ಮಿ ದಿನಪತ್ರಿಕೆ
ಹೊನವಾಡ: ನಿತ್ಯ ಸಂಚಾರದಲ್ಲಿ ಅನಾನುಕೂಲತೆ ಊಂಟಾಗಿ ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ್ ಅವರು ಸ್ಪಂದಿಸಿ ವಿದ್ಯಾರ್ಥಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿದ್ದಾರೆ
ನಿತ್ಯ ಸಂಚರಿಸಲು ವಿಜಯಪುರ-ಹೊನವಾಡ-ತೆಲಸಂಗದವರೆಗೆ ಎರಡು ಸಿಟಿ ಬಸ್ಸುಗಳ ಸೇವೆ ಕಲ್ಪಿಸಿ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಅನುಕೂಲ ಮಾಡಿದ್ದಾರೆ.
ಬುಧವಾರ ಬಂದ ಎರಡು ಬಸ್ಸುಗಳಿಗೆ ಸಚಿವರ ಆಪ್ತ ಸಹಾಯಕರಾದ ಸಂತೋಷ ಲೋಕುರಿ ಅವರು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣ ಅಧಿಕಾರಿಗಳು, ಗ್ಯಾರಂಟಿ ಯೋಜನೆಯ ಸಮಿತಿಯ ಎಲ್ಲ ಸದಸ್ಯರು, ಮಾಜಿ ತಾಲುಕಾ ಪಂಚಾಯತ್ ಅಧ್ಯಕ್ಷರಾದ ಸಿದ್ದು ಬೆಳಗಾವಿ, ಮಾಜಿ ಗ್ರಾ ಪಂ ಅಧ್ಯಕ್ಷರಾದ ದುಂಡಪ್ಪಾ ವಾಲಿಕಾರ, ಮುಖಂಡರಾದ ಸುರೇಶ ಪಾಟೀಲ, ವಿಜಯಕುಮಾರ ಹಿರೇಮಠ, ದುಂಡಪ್ಪಾ ಮಾಲಗಾರ, ಸಂಜಯಕುಮಾರ ಯಚ್ಚಿ, ಭೀಮರಾಯ ಮೋಳೆ, ಅರುಣ ಉಪ್ಪಾರ, ಸುರೇಶ ನರಳೆ, ಅನೀಲ ನಾಟಿಕಾರ, ಗ್ರಾಮದ ಹಿರಿಯರು, ಅನೇಕ ಯುವಕರು ಉಪಸ್ಥಿತರಿದ್ದರು.

