ನಾದ ಕೆಡಿ ಗ್ರಾಮದ ಸಕ್ಕರೆ ಕಾರ್ಖಾನೆಗೆ ಬೃಹತ್ ಪ್ರಮಾಣದಲ್ಲಿ ಮುತ್ತಿಗೆ ಹಾಕಿ ರೈತರ ಪ್ರತಿಭಟನೆ
ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ಜಮಖಂಡಿ ಸಕ್ಕರೆ ಕಾರ್ಖಾನೆ ಘಟಕ ೨ ರ ನಾದ ಕೆಡಿ ಗ್ರಾಮದ ಸಕ್ಕರೆ ಖಾರ್ಖಾನೆ ಮುಂದೆ ತಾಲೂಕಿನ ಸುಮಾರು ಸಾವಿರಕ್ಕೂ ಹೆಚ್ಚು ರೈತರು ಬಾಳು ಮುಳಜಿಯವರ ನೇತೃತ್ವದಲ್ಲಿ ಮೊದಲು ಒಂದು ಟನ್ ಕಬ್ಬಿಗೆ ಕಾರ್ಖಾನೆಯವರು ದರ ನಿಗದಿ ಪಡಿಸಿ ನಂತರ ಕಾರ್ಖಾನೆ ಪ್ರಾರಂಭಿಸಿ ಎಂದು ಕಾರ್ಖಾನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಅಲ್ಲಿ ಮಾತನಾಡಿದ ರೈತ ಮುಖಂಡ ಬಾಳು ಮುಳಜಿಯವರು, ಜಿಲ್ಲಾಧಿಕಾರಿಗಳು ಟನ್ ಕಬ್ಬಿಗೆ ರೂ ೩೩೦೦ ರೂ ಎಂದು ಹೇಳುತ್ತಾರೆ, ಕಾರ್ಖಾನೆಯವರು ಎಫ್‌ಆರ್‌ಪಿ ಆಧಾರದ ಮೇಲೆ ಟನ್ ಕಬ್ಬಿಗೆ ಎಷ್ಟು ಹಣ ನೀಡಬೇಕೆಂದು ಒಂದು ವಾರದಲ್ಲಿ ಜಿಲ್ಲಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಕೋಡುವದಾಗಿ ಹೇಳುತ್ತಾರೆ. ಹೀಗಾಗಿ ರೈತರು ಗೊಂದಲದಲ್ಲಿದ್ದು ದರ ನಿಗದಿ ಮಾಡಿ ಕಾರ್ಖಾನೆ ಪ್ರಾರಂಭಿಸಬೇಕು. ಇಲ್ಲದಿದ್ದರೆ ಕಾರ್ಖಾನೆ ಪ್ರಾರಂಭ ಮಾಡಲು ಬಿಡುವದಿಲ್ಲ ಎಂದರು.
ಶ್ರೀಶೈಲ ಮದರಿ ಮಾತನಾಡಿ, ಜಿಲ್ಲಾಧಿಕಾರಿಗಳು ಮೊದಲು ದರ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಮುಂದೆ ಆಗುವ ಘಟನೆಗಳಿಗೆ ಜಿಲ್ಲಾದಿಕಾರಿಗಳು ಹೊಣೆಯಾಗುತ್ತಾರೆ ಎಂದರು.
ಪ್ರತಿಭಟನೆಯಲ್ಲಿ ಅಂಬುರಾಯ ಕವಟಗಿ, ಶರಣಪ್ಪ ಸಂಗೋಗಿ, ಸಂಗಣ್ಣ ದೇವರಮನಿ, ಮಹೇಶ ಹೂಗಾರ, ರ್ದಂರಾಜ ಸಾಲೋಟಗಿ, ಸುರೇಸ ಕುಲಕರ್ಣಿ, ಕಲ್ಯಾಣಿ ಹಿಟ್ನಳ್ಳಿ, ಕಾಂತಪ್ಪ ಗುಗದಡ್ಡಿ, ಶರಣು ರಾವೂರ, ಸುರೇಶ ರಜಪೂತ, ಶೇಖರ ಮಂದೋಲಿ, ಶರಣಪ್ಪ ಹಂಜಗಿ ಶ್ಯಾಮ ಹೊಸಮನಿ, ಶಿವಲಿಂಗ ನಾಗಠಾಣ, ಆಶೋಕ ಬಿರಾದಾರ, ಶ್ರೀಶೈಲ ಮದರಿ ಮತ್ತಿತರಿದ್ದರು.

