ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮುಖ್ಯಮಂತ್ರಿಯವರ ಮೂಲಕಸೌಕರ್ಯ ಅಭಿವೃದ್ಧಿ ಯೋಜನೆಯಡಿ ನಗರಾಭಿವೃದ್ಧಿ ಇಲಾಖೆಯಡಿ ವಿವಿಧ ಸಮುದಾಯ ಭವನಗಳ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ ಎಂದು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ತಿಳಿಸಿದ್ದಾರೆ.
ವಾ.ನಂ.2ರ ದರ್ಗಾದ ಕರಿಸಿದ್ದೇಶ್ವರ ದೇವಸ್ಥಾನ ಹತ್ತಿರ ರೂ.50 ಲಕ್ಷ, ವಾ.ನಂ.13ರ ಶಹಾಪೇಟೆಯ ಮಹಾದೇವಪ್ಪ ದೇವಸ್ಥಾನ ಹತ್ತಿರ ರೂ.25 ಲಕ್ಷ, ವಾ.ನಂ.8ರ ವೆಂಕಟರಮಣ ಗಲ್ಲಿಯ ವೆಂಕಟೇಶ್ವರ ದೇವಸ್ಥಾನ ಹತ್ತಿರ ರೂ.25 ಲಕ್ಷ, ವಾ.ನಂ.2ರ ಶಕ್ತಿನಗರದ ಶಿವಶಿಂಪಿ ಸಮಾಜದ ಸಮುದಾಯ ಭವನ ರೂ.25 ಲಕ್ಷ, ವಾ.ನಂ.17 ರಂಭಾಪುರ ರಾಮಲಿಂಗೇಶ್ವರ ದೇವಸ್ಥಾನ ಹತ್ತಿರ ರೂ.15 ಲಕ್ಷ, ವಾ.ನಂ.22 ವಿವೇಕನಗರದ ಜಾಗೃತ ಹನುಮಾನ ದೇವಸ್ಥಾನದ ಹತ್ತಿರ ರೂ.15 ಲಕ್ಷ, ವಾ.ನಂ.24ರ ಕಮಲಖಾನ ಬಜಾರ್ ಈಶ್ವರಲಿಂಗ ದೇವಸ್ಥಾನ ಹತ್ತಿರ ರೂ.15 ಲಕ್ಷ, ವಾ.ನಂ.23ರ ಪಿಡಿಜೆ ಸ್ಕೂಲ್ ಹತ್ತಿರದ ಅಖಿಲ ಭಾರತ ಮಧ್ವ ಮಹಾಂಡಳ ರೂ.25 ಲಕ್ಷ, ವಾ.ನಂ.21ರ ಗುರುಪಾದೇಶ್ವರ ನಗರದ ಯೋಗಿಶ್ವರ ಯಾಜ್ಞವಲ್ಕ್ಯ ಮಂದಿರ ನಿರ್ಮಾಣ ರೂ.15 ಲಕ್ಷ, ವಾ.ನಂ.2ರ ಗಂಗಾಪುರಂ ಬಡಾವಣೆಯ ಮರ್ಚಂಟ್ಸ್ ಅಸೋಸಿಯೇಶನ್ ರೂ.15 ಲಕ್ಷ, ವಾ.ನಂ.3ರ ಜೋರಾಪುರ ಪೇಠ ಪುರಾತನ ಹನುಮಾನ ಮಂದಿರ ಹತ್ತಿರ ರೂ.20 ಲಕ್ಷ, ವಾ.ನಂ.31ರ ಅಡಕಿಗಲ್ಲಿ ಮಾರುತಿ ದೇವಸ್ಥಾನ ಟ್ರಸ್ಟ್ ಕಮಿಟಿ ರೂ.20 ಲಕ್ಷ, ವಾ.ನಂ.33ರ ರೇಡಿಯೋ ಕೇಂದ್ರದ ಹತ್ತಿರ ವೇದಮಾತಾ ಗಾಯಿತ್ರಿ ಪ್ರತಿಷ್ಠಾನ ಟ್ರಸ್ಟ್ ರೂ.15 ಲಕ್ಷ, ವಾ.ನಂ.7ರ ವಿಠ್ಠಲ ಮಂದಿರ ಹತ್ತಿರ ರೂ.25 ಲಕ್ಷ, ವಾ.ನಂ.2ರ ಅಫಜಲಪೂರ ಟಕ್ಕೆ ಮಲ್ಲಿಕಾರ್ಜುನ ದೇವಸ್ಥಾನ ಹತ್ತಿರ ರೂ.15 ಲಕ್ಷ, ವಾ.ನಂ.35ರ ಸ್ವಾತಂತ್ರ್ಯ ಯೋಧರ ಕಾಲೊನಿ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ರೂ.20 ಲಕ್ಷ, ವಾ.ನಂ.6ರ ಶಹಾಪುರ ಅಗಸಿ ಕಲಾಲ ಗಲ್ಲಿ ಸೂರ್ಯವಂಶ ಕ್ಷತ್ರೀಯ ಕಲಾಲ ಖಾಟಿಕ ಸಮಾಜ ಸಂಘ ರೂ.15 ಲಕ್ಷ, ವಾ.ನಂ.21ರ ಗುರುಪಾದೇಶ್ವರ ನಗರ ಕುಮದಾ ನಗರದ ಸವಿತಾ ಸಮಾಜ ರೂ.20 ಲಕ್ಷ, ವಾ.ನಂ.21ರ ಇಬ್ರಾಹಿಂಪುರ ಮಲ್ಲಿಕಾರ್ಜುನ ದೇವಸ್ಥಾನ ಹತ್ತಿರ ರೂ.20 ಲಕ್ಷ ದಲ್ಲಿ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿಗಳಿಗೆ ಅನುಮೋದನೆ ದೊರಕಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

