ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಾತೋಶ್ರೀ ಶಂಕ್ರೆಮ್ಮಾತಾಯಿ ಪ್ರಾಥಮಿಕ ಶಾಲೆ ಕತಕನಹಳ್ಳಿಯ ವಿದ್ಯಾರ್ಥಿಗಳು ಹಿಟ್ಟಿನಹಳ್ಳಿ ಕ್ಲಸ್ಟರ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮವಾದ ಪ್ರತಿಭಾ ಕಾರಂಜಿ ಸ್ಪರ್ದೆಯಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಚೈತ್ರಾ ಬಿರಾದಾರ ಅಭಿನಯ ಗೀತೆ, ಮಾದೇಗೌಡ ಅಲ್ಲಾಪೂರ ಇಂಗ್ಲೀಷ ಕಂಠಪಾಠ, ಪ್ರದೀಪ ಹಂಡಿ ಮಿಮಿಕ್ರಿ ಈರಣ್ಣ ಬಿರಾದಾರ ಚಿತ್ರಕಲೆ, ಸೈದು ವಾಲಿಕಾರ ಕ್ಲೇಮಾಡಲಿಂಗ, ಲಕ್ಷ್ಮಿ ಮೋದಿ ಕಥೆೆ ಹೇಳುವುದು, ಸ್ಪಂದನಾ ಸೋಲಾಪೂರ ಕನ್ನಡ ಕಂಠಪಾಠದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕಾ ಮಟ್ಟದ ಸ್ಟರ್ದೇಯಲ್ಲಿ ಆಯ್ಕೆಯಾಗಿದ್ದಾರೆ, ಸಮೃದ್ದಿ ಕಲ್ಯಾಣಿ ದೇಶಭsಕ್ತಿಗೀತೆ, ಜವೇರಿಯಾ ದಳವಾಯಿ ಧಾರ್ಮಿಕ ಪಠಣ, ಸನ್ನಿಧಿ ಶಿರಮಗೊಂಡ ಪ್ರಬಂಧದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸುಕೃತಾ ಬಿರಾದಾರ ಇಂಗ್ಲೀಷ ಕಂಠಪಾಠ, ಅಖಿಲ ಬಡಿಗೇರ ಕಥೆ ಹೇಳುವುದು, ಮುಫಿಜ್ ಕೊಟೆಖಾನ ಕ್ಲೇಮಾಡಲಿಂಗ ಚೈತ್ರಾ ಬಬಲೇಶ್ವರ ದೇಶಭಕ್ತಿಗೀತೆ, ಗೌತಮಿ ಬಬಲೇಶ್ವರ ಪದ್ಯವಾಚನದಲ್ಲಿ ತೃತೀಯ ಸ್ಥಾನ ಪಡೆದು ತಮ್ಮ ಶಾಲೆಯ ಹಾಗೂ ತಂದೆ ತಾಯಿಯ ಹೆಸರು ತರುವಲ್ಲಿ ಯಶಸ್ವಿಯಾಗಿದ್ದಾರೆ. ಎಂದು ಹೇಳಲು ಹರ್ಷವೆನಿಸುತ್ತದೆ. ಈ ವಿದ್ಯಾರ್ಥಿಗಳಿಗೆ ಗುರು ಚಕ್ರವರ್ತಿ ಸದಾಶಿವ ವಿದ್ಯಾವರ್ದಕ ಸಂಸ್ಥೆಯ ಚೇರಮನ್ನರು ಶ್ರೀ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮತ್ತು ಸಂಸ್ಥೆಯ ಎಲ್ಲ ಸದಸ್ಯರು, ಎಕ್ಸಲಂಟ ಸಮೂಹ ಶಿಕ್ಷಣ ಸಂಸ್ಥೆ ವಿಜಯಪುರದ ಅಧ್ಯಕ್ಷರು ಬಸವರಾಜ ಎಸ್ ಕೌಲಗಿ ಹಾಗೂ ಸಂಸ್ಥೆಯ ಎಲ್ಲ ಸದಸ್ಯರು ಶಾಲೆಯ ಮುಖ್ಯಗುರುಗಳಾದ ಶ್ರೀ ಅರವಿಂದ ಬಿ ಪವಾರ ಮತ್ತು ಶಾಲೆಯ ಎಲ್ಲ ಸಿಬ್ಬಂದಿ ವರ್ಗ ಹಾಗೂ ಪಾಲಕವರ್ಗದವರು ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.

