ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಕಡಣಿ ರಸ್ತೆಯಲ್ಲಿರುವ ಕೆ.ಪಿ.ಆರ್ ಸಕ್ಕರೆ ಕಾರ್ಖಾನೆ ಎದುರು ಕಟಾವು ವಾಹನ ಮಾಲೀಕರು ಮಂಗಳವಾರ ಧರಣಿ ಸತ್ಯಾಗ್ರಹ ಆರಂಭಿಸಿದರು.
ಕೆಪಿಆರ್ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ೨೦೨೩ ಮತ್ತು ೨೪ ನೇ ಸಾಲಿನ ಕಬ್ಬು ಕಟಾವು ಹಾಗೂ ಸಾಗಾಣಿಕೆ ಮಾಡಿದ ಗುತ್ತಿಗೆದಾರರ ಹೆಚ್ಚುವರಿ ಬಾಕಿ ಹಣ 114.ರೂಪಾಯಿಗಳು ನೀಡಬೇಕಾಗಿದ್ದು. ಅದರಲ್ಲಿ 57 ಹಾಗೂ 28.50 ನೀಡಿದ್ದು ಉಳಿದ ಹಣ ಈವರೆಗೂ ಪಾವತಿ ಮಾಡಿಲ್ಲ ಎಂದು ದೂರಿದರು.
ಸಂಘದ ಅಧ್ಯಕ್ಷ ಶಿಶಿಧರ ಮಾತನಾಡಿ ಕೆಲವು ವಾಹನ ಮಾಲೀಕರಿಗೆ ಟನ್ ಗೆ ಕೇವಲ 57 ರೂ. ಮಾತ್ರ ನೀಡಿದ್ದು ಬಾಕಿ ಹಣ ಪಾವತಿಸಲು ಆಡಳಿತ ಮಂಡಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದಕ್ಕೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಬಾಕಿ ಪಾವತಿವಾಗುವ ವರೆಗೂ ಧರಣಿ ನಿರಂತರವಾಗಿರುತ್ತದೆ ಎಂದರು.
ಅಧ್ಯಕ್ಷ ಶಶಿಧರ್ ನಾಯ್ಕೋಡಿ, ಉಪಾಧ್ಯಕ್ಷ ಮಹಾಂತೇಶ ಕತ್ತಿ, ಶಿವಕುಮಾರ್ ಮೇಲಿನಮನಿ, ರಾಜು ಮೇತ್ರಿ, ಕೆ ಆರ್ ಪೂಜಾರಿ, ದಾದಾ ಯಲಗಾರ ಲಕ್ಷ್ಮಣ ಗುಡ್ಡಳ್ಳಿ, ಮಹೇಶ್ ಹೂವಿನಹಳ್ಳಿ , ಲಕ್ಷ್ಮೀಪುತ್ರ ಬಾಗೇವಾಡಿ, ಗುಂಡು ಸೌದಾಗಾರ, ಚೆನ್ನಮಲ್ಲಪ್ಪ ಶಿವರಾಜ ಹಚಡದ ಮೊದಲಾದವರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

