Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್ -2025 ಗೆ ವಿಜಯಪುರ ಹೊಟೇಲ್ ಅಸೋಸಿಯೇಶನ್ ರೂ.1.50 ಲಕ್ಷ ದೇಣಿಗೆ ನೀಡಿದ್ದಾರೆ.ಗುರುವಾರ ನಗರದಲ್ಲಿ ರನ್ ಕಮಿಟಿಯ ಪದಾಧಿಕಾರಿಗಳನ್ನು ಭೇಟಿಯಾದ ಅಸೋಸಿಯೇಶನ್ ಅಧ್ಯಕ್ಷ ಚಂದ್ರಕಾಂತ ಶೆಟ್ಟಿ, ಮಾಜಿ ಉಪಮೇಯರ ದಿನೇಶ ಹಳ್ಳಿ, ನಾಗರಾಜ ಇಜೇರಿ, ರವಿ ಗಚ್ಚಿನಕಟ್ಟಿ, ಶುಭಂ ಶಿಂಧೆ, ಸಿದ್ದು ಚಿಕ್ಕೊಡಿ ಹಾಗೂ ವಿ.ಎಂ.ಗೌಡರ ದೇಣಿಗೆ ಚೆಕ್ ನೀಡಿದರು.ಈ ಸಂದರ್ಭದಲ್ಲಿ ರನ್ ಕಮಿಟಿಯ ಸಂತೋಷ ಔರಸಂಗ, ವೀರೇಂದ್ರ ಗುಚ್ಚಟ್ಟಿ, ಶಿವನಗೌಡ ಪಾಟೀಲ, ಸೋಮಶೇಖರ ಸ್ವಾಮಿ, ಸಿದ್ದು ನಾಯ್ಕೊಡಿ, ಶ್ರೀಕಾಂತ ಅಂಗಡಿ ಮುಂತಾದವರು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಡಿಸೆಂಬರ್ 7 ರಂದು ರವಿವಾರ ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2025 ಓಟದಲ್ಲಿ ಪಾಲ್ಗೊಳ್ಳಲಿರುವ ಕ್ರೀಡಾಪಟುಗಳು ಓಡಲಿರುವ ಮಾರ್ಗ ಮತ್ತು ಓಟ ಪ್ರಾರಂಭವಾಗಲಿರುವ ಸ್ಥಳ, ಸಮಯ ಮತ್ತೀತರ ಮಾಹಿತಿಯನ್ನು ರನ್ ಕೋರ್ ಕಮಿಟಿ ಪ್ರಕಟಿಸಿದೆ.ಬೆಳಿಗ್ಗೆ 5.30 ರಿಂದಲೇ ನಗರದಲ್ಲಿ ಓಟ ನಡೆಯುವ ಮಾರ್ಗದಲ್ಲಿ ಝಿರೋ ಟ್ರಾಫಿಕ್ ವ್ಯವಸ್ಥೆ ಇರುವುದರಿಂದ ಎಲ್ಲ ವಿಭಾಗಗಳ ಕ್ರೀಡಾಪಟುಗಳು ನಸುಕಿನ ಜಾವ 5.30 ಗಂಟೆಯೊಳಗೆ ಕ್ರೀಡಾಂಗಣಕ್ಕೆ ಆಗಮಿಸಬೇಕು ಎಂದು ಸಂಘಟಕರು ಮನವಿ ಮಾಡಿದ್ದಾರೆ.ಒಟ್ಟು 18 ಕಡೆಗಳಲ್ಲಿ ಓಟಗಾರರಿಗೆ ಪುನಶ್ಚೇತನ ಹೊಂದಲು ಹೈಡ್ರೇಶನ್ ಪಾಯಿಂಟ್ ಗಳ ವ್ಯವಸ್ಥೆ ಮಾಡಲಾಗಿದೆ. ರೇಸ್, ರೂಟ್ ಮ್ಯಾಪ್, ಹೈಡ್ರೇಶನ್ ಪಾಯಿಂಟ್ಸ್ ಗಳಿಗಾಗಿ ಈಗಾಗಲೇ ಆಯಾ ಸಮಿತಿಯು ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿದೆ.ವಿಭಾಗವಾರು ಓಟಗಳು ಪ್ರಾರಂಭವಾಗುವ ಸಮಯ, ಸಾಗುವ ಮಾರ್ಗ, ಮುಕ್ತಾಯದ ರೂಟ್ ಮಾಹಿತಿ ಇಲ್ಲಿದೆ.21 ಕಿ. ಮೀ. ಓಟ, ಪ್ರಾರಂಭ ಸಮಯ ಬೆಳಿಗ್ಗೆ 6 ಗಂಟೆಗೆಓಟ ಪ್ರಾರಂಭ ಸ್ಥಳ- ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಿಂದ ಪ್ರಾರಂಭ.…

Read More

ಲೇಖನ- ಸುಧಾ ಪಾಟೀಲ (ಬೆಳಗಾವಿ)ವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ಕನ್ನಡ ಸಾಹಿತ್ಯದಲ್ಲಿ ಹಲವಾರು ಪ್ರಸಿದ್ದ ಮಹಿಳಾ ಸಾಹಿತಿಗಳಿದ್ದಾರೆ. ಇದರಲ್ಲಿ ಅಕ್ಕಮಹಾದೇವಿ ಅವರು ಕನ್ನಡದ ಮೊದಲ ಕವಯಿತ್ರಿ.ಅಕ್ಕಮಹಾದೇವಿ ಹನ್ನೆರಡನೆಯ ಶತಮಾನದ ಪ್ರಸಿದ್ಧ ವಚನಕಾರ್ತಿ. ಅಕ್ಕಮಹಾದೇವಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಉಡುತಡಿಯವರು. ಬಾಲ್ಯದಿಂದಲೇ ಶಿವನಲ್ಲಿ ಅಪಾರವಾದ ಭಕ್ತಿಯಿದ್ದ ಮಹಾದೇವಿಯಕ್ಕ ಕೌಶಿಕನೆಂಬ ರಾಜನೊಡನೆ ಆಗುತ್ತಿರುವ ಬಲವಂತದ ವಿವಾಹವನ್ನು ತೊರೆದು ಕಲ್ಯಾಣಕ್ಕೆ ಸಾಗುತ್ತಾರೆ. ಶರಣರೊಂದಿಗೆ ಆಧ್ಯಾತ್ಮಿಕ ಚರ್ಚೆಯಲ್ಲಿ ಪಾಲ್ಗೊಂಡು, ಎಲ್ಲ ಶರಣರ ಜೊತೆ ಕೂಡಿ ಇನ್ನಷ್ಟು ಪರಿಣಾಮಕಾರಿಯಾದ ವಚನ ಗಳನ್ನು ರಚಿಸಿ, ವಚನ ಸಾಹಿತ್ಯಕ್ಕೆ ತಮ್ಮದೇ ಆದ ಅಮೂಲ್ಯವಾದ ಕೊಡುಗೆಯನ್ನು ಕೊಟ್ಟು ನಂತರ ಶ್ರೀಶೈಲದ ಕದಳಿ ವನದಲ್ಲಿ ಐಕ್ಯರಾದರೆಂದು ಐತಿಹ್ಯ.ಅಕ್ಕಮಹಾದೇವಿ ಎಲ್ಲರಂತೆ ಜನಿಸಿದರೂ ಎಲ್ಲರಂತೆ ಬೆಳೆಯಲಿಲ್ಲ, ಎಲ್ಲರಂತೆ ಬಾಳಲಿಲ್ಲ. ಅಸಾಮಾನ್ಯರಂತೆ ಬೆಳೆದು ಪರಿಪೂರ್ಣಳಂತೆ ಬದುಕಿದರು. ಅಕ್ಕಮಹಾದೇವಿ ಒಟ್ಟು ಜೀವಿಸಿದುದು ಕೇವಲ ಇಪ್ಪತ್ತು ವರ್ಷ ಮಾತ್ರವಾದರೂ 2000 ವರ್ಷಗಳಲ್ಲಿ ಸಾಧಿಸಲಾರದುದನ್ನು ಸಾಧಿಸಿ “ಅದೇನು ಹೆಣ್ಣೋ ಜಗದ ಕಣ್ಣೋ” ಎಂಬಂತೆ ಮಿಂಚಿ -ಕೋರೈಸಿ ಕಣ್ಮರೆಯಾದರು.ಶರಣರ…

Read More

ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ಉಪನ್ಯಾಸಕರುವಿಜಯಪುರ ಉದಯರಶ್ಮಿ ದಿನಪತ್ರಿಕೆ ಹೋವಾರ್ಡ ವಾರನ್ ಬಫೆಟ್ ಅವರು “ಮಣ್ಣು ಜೀವಂತ ಪರಿಸರ ವ್ಯವಸ್ಥೆಯಾಗಿದೆ ಮತ್ತು ಇದು ರೈತರ ಅತ್ಯಂತ ಅಮೂಲ್ಯ ಆಸ್ತಿಯಾಗಿದೆ. ರೈತನ ಉತ್ಪಾದಕ ಸಾಮರ್ಥ್ಯವು ಅವನ ಅಥವಾ ಅವಳ ಮಣ್ಣಿನ ಆರೋಗ್ಯಕ್ಕೆ ನೇರವಾಗಿ ಸಂಬಂಧಿಸಿದೆ ಎಂದು ಹೇಳಿರುವದು ನೂರಕ್ಕೆ ನೂರರಷ್ಟು ಸತ್ಯವಾದ ಮಾತು. ಮಣ್ಣು ಎಂಬುದು ಭೂಮಿಯ ಮೇಲಿರುವ ಘನ, ದ್ರವ ಮತ್ತು ಅನಿಲ ರೂಪದ ವಸ್ತುಗಳಿಂದ ಕೂಡಿರುವ ಸಂಕೀರ್ಣವಾದ ವ್ಯವಸ್ಥೆಯಾಗಿದೆ. ಸಸ್ಯಗಳ ಬೆಳವಣಿಗೆಗೆ ನೆರವು ನೀಡುವ ಈ ಮಣ್ಣು ಜಗತ್ತಿನ ಆಹಾರ ಭದ್ರತೆಗೆ ತನ್ನದೇ ಆದ ಮಹತ್ತರವಾದ ಕೊಡುಗೆ ನೀಡುತ್ತಿದೆ. ಅದಕ್ಕೆ ಮಣ್ಣು ಎಂದರೆ ಭೂ ತಾಯಿ ಅಥವಾ ಭೂ ಮಾತೆ ಎಂತಲೂ ಕರೆಯುತ್ತಾರೆ. ಮಣ್ಣಿಲ್ಲದೇ ಜೀವ ಸಂಕುಲವೇ ಇಲ್ಲ ಎಂದರೆ ತಪ್ಪಾಗಲಾರದು.ನಮ್ಮ ಬದುಕಿನ ಎಲ್ಲ ಸ್ತರಗಳಲ್ಲೂ ಅತಿ ಅಗತ್ಯ ಹಾಗೂ ಪೂರಕವಾಗಿರುವ ಮಣ್ಣು ಇಂದು ವಿವಿಧ ಪ್ರಕಾರದ ಮಾಲಿನ್ಯಗಳಿಂದಾಗಿ ಕಲುಷಿತಗೊಳ್ಳುತ್ತಿದೆ. ಅದರಲ್ಲಿರುವ ಗುಣಮಟ್ಟ, ಪೋಷಕಾಂಶಗಳು ಮತ್ತು ಫಲವತ್ತತೆಯ ಮಟ್ಟ ಕಡಿಮೆಯಾಗುತ್ತಿದೆ.…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ದೈಹಿಕವಾಗಿ ಶೇ. 75ರಷ್ಟು ಅಸಮರ್ಥತೆ ಇದ್ದವರೂ ಇಂದು ಉನ್ನತ ಸಾಧನೆಯ ಶಿಖರವನ್ನೇರಿದ್ದಾರೆ. ಅಂತಹ ಮಹಾನ್ ಸಾಧಕರ ಆದರ್ಶಗಳನ್ನು ವಿಕಲಚೇತನರು ಪಾಲಿಸುವಂತೆ ವಿಶೇಷ ಚೇತನ ಮಕ್ಕಳ ತಾಲೂಕಾ ಸಂಪನ್ಮೂಲ ವ್ಯಕ್ತಿ ಗುರವ ಹೇಳಿದರು.ನಿವರಗಿ ಗ್ರಾಮದ ಕೆಜಿಎಸ್, ಎಚ್ ಪಿ ಎಸ್ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ನಿವರಗಿ ಇವರ ಸಂಯುಕ್ತ ಆಶ್ರಯದಲ್ಲಿ ಕೆ.ಜಿ.ಎಸ್. ನಿವರಗಿ ಶಾಲಾ ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ವಿಶ್ವ ವಿಶೇಷ ಚೇತನರ ದಿನಾಚರಣೆಯಲ್ಲಿ ಅವರು ಮಾತನಾಡಿದರು.ವಿಶೇಷ ಚೇತನರನ್ನು ಮುಖ್ಯ ವಾಹಿನಿಗೆ ಸೇರಿಸುವ ಕುರಿತು ಜನ ಜಾಗೃತಿ ಮೂಡಿಸಬೇಕು ಅವರು ಕೂಡ ನಮ್ಮಂತೆ ಪ್ರತಿಯೊಂದರಲ್ಲಿ ಭಾಗವಹಿಸುವಂತೆ ತಿಳಿಸಿಕೊಟ್ಟರು.ಮುಖ್ಯ ಗುರು ಸುನಿಲ ಎಳಮೇಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕಲಿಕೆ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ಸಮಾನ ಅವಕಾಶ ಕಲ್ಪಿಸಿ ಅವರು ಹಿಂಜರಿಯದಂತೆ ಮನವಲಿಸಿ ಪ್ರತಿ ರಂಗದಲ್ಲಿಯೂ ಮುನ್ನುಗ್ಗುವಂತೆ ನಾವೆಲ್ಲರೂ ನೋಡಿಕೊಳ್ಳಬೇಕೆಂದು ಕರೆಕೊಟ್ಟರು.ಪ್ರಾಸ್ತಾವಿಕವಾಗಿ ಸಿ.ಆರ್.ಪಿ ಪ್ರಕಾಶ್ ತಳವಾರ ಮಾತನಾಡಿದರು.ರಾಜು ಜಂಬಗಿ ಸ್ವಾಗತಿಸಿದರು, ಪ್ರಾರ್ಥನೆಯನ್ನು ಮಹದೇವ್ ಕಾಂಬಳೆ ಅತಿಥಿ ಶಿಕ್ಷಕರು ನಡೆಸಿಕೊಟ್ಟರು ವಂದನಾರ್ಪಣೆಯನ್ನು ಮುಖ್ಯ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣದ ಶಿವಾಜಿನಗರದಲ್ಲಿ ಮೊಹಮ್ಮದ್ ಮಾಜ್ ಎಂಬ ಪುಟ್ಟ ಬಾಲಕನನ್ನು ಯಾರೋ ದುಷ್ಕರ್ಮಿಗಳು ಮನೆಯಂಗಳದಿಂದ ಬುಧವಾರ ಬೆಳಗಿನ ಜಾವ ಅಪಹರಿಸಿದ ಘಟನೆ ನಡೆದಿದೆ.ಅಪಹರಣಕ್ಕೀಡಾದ ಬಾಲಕ ವಿದ್ಯಾನಗರದ ನವಗ್ರಹ ಹತ್ತಿರ ವೆಲ್ಡಿಂಗ್ ಶಾಪ್ ನಡೆಸುತ್ತಿರುವ ಚಾಂದ ಶೇಕ್ ಅವರ ಪುತ್ರನೆಂದು ತಿಳಿದು ಬಂದಿದೆ. ಪ್ರತ್ಯಕ್ಷದರ್ಶಿಗಳು ಹೇಳುವಂತೆ ಮಗು ಮನೆಯ ಮುಂದೆ ಆಟವಾಡುತ್ತಿದ್ದಾಗ ನೀಲಿ ಸೀರೆಯಲ್ಲಿ ಬಂದ ಇಳಿವಯಸ್ಸಿನ ಹೆಣ್ಣುಮಗಳು ಮಗುವನ್ನು ಅಪಹರಣ ಮಾಡಿದ್ದಾರೆ ಎಂದು ತಿಳಿದುಬಂದಿದೆ.ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ನಾಗರಿಕರು ವ್ಯಾಪಕ ಶೋಧ ನಡೆಸಿ, ಸ್ಥಳೀಯ ಶ್ರೀ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಅಪರಿಚಿತ ಮಹಿಳೆ ಮಗುವನ್ನು ಆಟವಾಡಿಸುತ್ತಿದ್ದುದು ತಿಳಿದು ಬಂದ ತಕ್ಷಣ ಪೊಲೀಸರು ಅಲ್ಲಿಗೆ ತೆರಳಿ ಅಪರಿಚಿತ ಮಹಿಳೆಯಿಂದ ಮಗುವನ್ನು ಸುರಕ್ಷಿತವಾಗಿ ಪಾಲಕರಿಗೆ ಒಪ್ಪಿಸಿದ್ದಾರೆ.ಮಗುವನ್ನು ಅಪಹರಿಸಿದ ಮಹಿಳೆಯನ್ನು ಠಾಣೆಗೆ ತಂದು ವಿಚಾರಿಸಿದಾಗ ಆ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ಪೊಲೀಸ ಮೂಲಗಳಿಂದ ತಿಳಿದು ಬಂದಿದೆ.

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಕಬ್ಬು ತುಂಬಿ ನಿಂತಿದ್ದ ಟ್ರ್ಯಾಕ್ಟರ್​​ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದು ನಾಲ್ವರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಿದ್ದಾಪುರ ಬಳಿ ಮಂಗಳವಾರ ತಡರಾತ್ರಿ ಸಂಭವಿಸಿದೆ.ಮೃತಪಟ್ಟ ಯುವಕರನ್ನು ವಿಶ್ವನಾಥ್ (17), ಪ್ರವೀಣ್ (22), ಗಣೇಶ (20) ಹಾಗೂ ಪ್ರಜ್ವಲ್ (17) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಸಿದ್ದಾಪುರ ಗ್ರಾಮದ ನಿವಾಸಿಗಳೆಂದು ತಿಳಿದುಬಂದಿದೆ.ಸಿದ್ದಾಪುರ ಬಳಿರುವ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುವ ಟ್ರ್ಯಾಕ್ಟರ​ನ್ನು ಬಿಜಾಪುರ-ಬೆಳಗಾವಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ಅತಿವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟ್ರ್ಯಾಕ್ಟರ್ ಕೆಳಗಡೆ ಕಾರು ಸಿಲುಕಿದ್ದು, ಅದರಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಕೊನೆಯುಸಿರೆಳೆದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು, ಟ್ರ್ಯಾಕ್ಟರ್ ಕೆಳಗಡೆ ಸಿಲುಕಿಕೊಂಡಿದ್ದ ಕಾರಿನಲ್ಲಿದ್ದ ಮೃತದೇಹಗಳನ್ನು ಸ್ಥಳೀಯರ ಸಹಾಯದಿಂದ ಹೊರತೆಗೆದಿದ್ದಾರೆ. ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವೃಕ್ಷಥಾನ್ ಹೆರಿಟೇಜ್ ರನ್ ಅಂಗವಾಗಿ ಆಯೋಜಿಸಲಾಗಿದ್ದ ಚಿತ್ರಕಲೆ ಮತ್ತು ನಿಬಂಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳ ಹೆಸರುಗಳನ್ನು ಸ್ಪರ್ಧೆಗಳ ಸಂಘಟನಾ ಸಮಿತಿ ಪ್ರಕಟಿಸಿದೆ.ಪ್ರಾಥಮಿಕ, ಪ್ರೌಢ ಮತ್ತು ಪಿ.ಯು ಕಾಲೇಜು ಹೀಗೆ ಮೂರು ವಿಭಾಗಗಳಲ್ಲಿ ಬಾಲಕರು ಹಾಗೂ ಬಾಲಕಿಯರಿಗಾಗಿ ಸ್ಪರ್ಧೆಯನ್ನು ಆಯೋಜಿಲಾಗಿತ್ತು. ಚಿತ್ರಕಲಾ ಸ್ಪರ್ಧೆಯಲ್ಲಿ ಸುಮಾರು 400 ಮತ್ತು ನಿಬಂಧ ಸ್ಪರ್ಧೆಯಲ್ಲಿ ಸುಮಾರು 370 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರಥಮ ಸ್ಥಾನ ರೂ.10 ಸಾವಿರ, ದ್ವಿತೀಯ ಸ್ಥಾನ ರೂ.7500, ತೃತೀಯ ಸ್ಥಾನ ರೂ.5 ಸಾವಿರ ಹಾಗೂ ಇಬ್ಬರಿಗೆ ಸಮಾಧಾನಕರ ಬಹುಮಾನವಾಗಿ ತಲಾ ರೂ.2500 ನೀಡಲಾಗುತ್ತಿದೆ.ಡಿಸೆಂಬರ್ 6 ಶನಿವಾರ ನಗರದ ಡಾ.ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಬೆ.10.30 ರಿಂದ ಆಯೋಜಿಸಲಾಗಿರುವ ಆಯಾ ವಿಷಯಾಧಾರಿತ ವಿಚಾರಗೋಷ್ಠಿಗಳ ಬಳಿಕ ಬಹುಮಾನ ವಿತರಣೆ ಮಾಡಲಾಗುವುದು ಎಂದು ಸ್ಪರ್ಧೆಗಳ ಸಂಘಟನಾ ಸಮಿತಿಯ ಅಮಿತ ಬಿರಾದಾರ, ಶಿವು ಕುಂಬಾರ ಹಾಗೂ ರಮೇಶ ಬಿರಾದಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸ್ಪರ್ಧೆಗಳ ವಿಭಾಗ ಮತ್ತು ವಿಜೇತರ ಹೆಸರುಗಳು ಇಂತಿವೆ. ನಿಬಂಧ ಸ್ಪರ್ಧೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂಚಗೇರಿ ಆ ತತ್ವಧ್ಯಾತ್ಮ ಸಂಪ್ರದಾಯದ ಶಾಖಾಮಠವಾದ ವಿಜಯಪುರ ನಗರದ ಇಬ್ರಾಹಿಂಪುರದ ಶ್ರೀ ಜಯರಾಮೇಶ್ವರ ಮಠದ ಶ್ರೀ ಜಯರಾಮೇಶ್ವರ ಮಹಾರಾಜರ ಪುಣ್ಯಸ್ಮರಣೆ (ಜಾತ್ರಾಮಹೋತ್ಸವ)ಯನ್ನು ಬುಧವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.ಪುಣ್ಯಸ್ಮರಣೆಯ ಅಂಗವಾಗಿ ಬೆಳಿಗ್ಗೆ ಶ್ರೀ ಜಯರಾಮೇಶ್ವರ ಮಹಾರಾಜರ ಗದ್ದುಗೆಗೆ ಪುಷ್ಪಾಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಲಾಯಿತು.ಮಕ್ಕಳು ಮಹಿಳೆಯರೂ ಸೇರಿದಂತೆ ಬಹುಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಆಗಮಿಸಿ ಶ್ರೀ ಜಯರಾಮೇಶ್ವರರ ಗದ್ದುಗೆ ದರ್ಶನ ಪಡೆದರು. ಮಧ್ಯಾಹ್ನ ಪುಷ್ಪವೃಷ್ಟಿಯೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು. ನಂತರ ಅನ್ನಸಂತರ್ಪಣೆ ನಡೆಯಿತು.ಶ್ರೀ ಜಯರಾಮೇಶ್ವರ ಮಹಾರಾಜರ ಮಠದ ಸೇವಾ ಸಮಿತಿ ಅಧ್ಯಕ್ಷ ನಂದಬಸು ಶಿವಣಗಿ, ಉಪಾಧ್ಯಕ್ಷ ಜಯರಾಮ ಡಂಬಳ, ಪ್ರಧಾನ ಕಾರ್ಯದರ್ಶಿ ಶಿವಪ್ಪ ಸರಗೆನ್ನವರ, ಕಾರ್ಯದರ್ಶಿ ಮಲ್ಲಪ್ಪ ಶಿರೋಳ, ಖಜಾಂಚಿ ಉದಯ ಶಿರೋಳ, ಸದಸ್ಯರಾದ ರಾಮಣ್ಣ ಗರಸಂಗಿ, ಕಿರಣ್ ಕೌಜಲಗಿ, ಶಂಕರ ಸುನಗ, ರಾಹುಲ ಕೊಲ್ಹಾರ, ಸುರೇಶ ಪೂಜಾರಿ, ವಿಠ್ಠಲ ಕೋರಿ, ಬೀರಪ್ಪ ಶಿವಣಗಿ, ರೇವಣಸಿದ್ದ ವಠಾರ, ಮಾಧು ದ್ಯಾಮಣ್ಣವರ, ಸೇರಿದಂತೆ ಹಲವಾರು ಯುವಕರು ಜಾತ್ರೆಯ ಯಶಸ್ವಿಗೆ ಶ್ರಮಿಸಿದರು. ಹಿರಿಯರಾದ ಕಾಳಪ್ಪ ಮನೋಚಾರಿ,…

Read More

ಇಂದು (ಡಿಸೆಂಬರ್ ೦೪) ಗಾಣಗಾಪುರ ದತ್ತ ಜಯಂತಿ ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಪ್ರಶಾಂತ ಕುಲಕರ್ಣಿಉಪನ್ಯಾಸಕರುಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯಸಿಂದಗಿವಿಜಯಪುರ ಜಿಲ್ಲೆPh:9845442237 ಉದಯರಶ್ಮಿ ದಿನಪತ್ರಿಕೆ ದತ್ತಾತ್ರೇಯರು ಭಾರತೀಯ ಸಂಪ್ರದಾಯದಲ್ಲಿ “ಆದಿಗುರು” ಮತ್ತು “ಅವಧೂತ ಚಿಂತನೆಯ ಪರಮಮೂರ್ತಿ” ಎಂದು ಪೂಜಿಸಲ್ಪಡುವ ಮಹಾಯೋಗಿಗಳು. ದತ್ತಸ್ವರೂಪವು ಕೇವಲ ದೈವಿಕ ರೂಪವಲ್ಲ; ಅದು ಪ್ರಕೃತಿಗತವಾಗಿ ಪರಮಸತ್ಯದಲ್ಲಿ ಲೀನವಾಗಿರುವ ಅವಧೂತ ಸ್ಥಿತಿಯ ಜೀವಂತ ಉದಾಹರಣೆ. ಅವಧೂತ ಎಂದರೆ ದೇಶ–ಕಾಲ–ಸಂಸ್ಕೃತಿ–ಕರ್ಮ– ಬಯಕೆ ಎಂಬ ಎಲ್ಲಾ ಬಂಧನಗಳನ್ನು ತೊರೆದು, ಮನುಷ್ಯನು ತನ್ನೊಳಗಿನ ಪರಬ್ರಹ್ಮದ ಜ್ಞಾನದಲ್ಲಿ ನಿರಂತರವಾಗಿ ನೆಲೆಸಿರುವ ಸ್ಥಿತಿ. ಈ ಕಾರಣಕ್ಕಾಗಿ ದತ್ತ ಆಚಾರ್ಯರನ್ನು “ಅವಧೂತ ಚಿಂತನೆಯ ಮಹಾಶಕ್ತಿ” ಹಾಗೂ “ಆದಿಗುರು” ಎಂದೂ ಭಕ್ತರು ಗೌರವಿಸುತ್ತಾರೆ. ದತ್ತನ ತತ್ತ್ವ ಭಾರತದಲ್ಲಿನ ಅನೇಕ ಸಂಪ್ರದಾಯಗಳಿಗೆ ಮೂಲಶಕ್ತಿ. ವಿಶೇಷವಾಗಿ ನಾಥಪಂಥದಲ್ಲಿ ದತ್ತಾತ್ರಯರು ಮೂಲ ಪ್ರೇರಕತ್ವ ವಹಿಸಿರುವುದಾಗಿ ಪರಂಪರೆ ಹೇಳುತ್ತದೆ. ದತ್ತನ ಆದೇಶದಿಂದಲೇ ರೂಪುಗೊಂಡ ನಾಥಸಂಪ್ರದಾಯದಲ್ಲಿ ಹಠಯೋಗ, ಧ್ಯಾನ, ಗುರು ಶಿಷ್ಯ ಭಕ್ತಿ ಮತ್ತು ಅವಧೂತ ತತ್ತ್ವಗಳಿಗೆ ಅತ್ಯಂತ ಪ್ರಾಮುಖ್ಯತೆ ನೀಡಲಾಗಿದೆ. ನಾಥಪಂಥದ ಶ್ರೇಷ್ಠ…

Read More