ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್ -2025 ಗೆ ವಿಜಯಪುರ ಹೊಟೇಲ್ ಅಸೋಸಿಯೇಶನ್ ರೂ.1.50 ಲಕ್ಷ ದೇಣಿಗೆ ನೀಡಿದ್ದಾರೆ.
ಗುರುವಾರ ನಗರದಲ್ಲಿ ರನ್ ಕಮಿಟಿಯ ಪದಾಧಿಕಾರಿಗಳನ್ನು ಭೇಟಿಯಾದ ಅಸೋಸಿಯೇಶನ್ ಅಧ್ಯಕ್ಷ ಚಂದ್ರಕಾಂತ ಶೆಟ್ಟಿ, ಮಾಜಿ ಉಪಮೇಯರ ದಿನೇಶ ಹಳ್ಳಿ, ನಾಗರಾಜ ಇಜೇರಿ, ರವಿ ಗಚ್ಚಿನಕಟ್ಟಿ, ಶುಭಂ ಶಿಂಧೆ, ಸಿದ್ದು ಚಿಕ್ಕೊಡಿ ಹಾಗೂ ವಿ.ಎಂ.ಗೌಡರ ದೇಣಿಗೆ ಚೆಕ್ ನೀಡಿದರು.
ಈ ಸಂದರ್ಭದಲ್ಲಿ ರನ್ ಕಮಿಟಿಯ ಸಂತೋಷ ಔರಸಂಗ, ವೀರೇಂದ್ರ ಗುಚ್ಚಟ್ಟಿ, ಶಿವನಗೌಡ ಪಾಟೀಲ, ಸೋಮಶೇಖರ ಸ್ವಾಮಿ, ಸಿದ್ದು ನಾಯ್ಕೊಡಿ, ಶ್ರೀಕಾಂತ ಅಂಗಡಿ ಮುಂತಾದವರು ಉಪಸ್ಥಿತರಿದ್ದರು.

