ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವೃಕ್ಷಥಾನ್ ಹೆರಿಟೇಜ್ ರನ್ ಅಂಗವಾಗಿ ಆಯೋಜಿಸಲಾಗಿದ್ದ ಚಿತ್ರಕಲೆ ಮತ್ತು ನಿಬಂಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳ ಹೆಸರುಗಳನ್ನು ಸ್ಪರ್ಧೆಗಳ ಸಂಘಟನಾ ಸಮಿತಿ ಪ್ರಕಟಿಸಿದೆ.
ಪ್ರಾಥಮಿಕ, ಪ್ರೌಢ ಮತ್ತು ಪಿ.ಯು ಕಾಲೇಜು ಹೀಗೆ ಮೂರು ವಿಭಾಗಗಳಲ್ಲಿ ಬಾಲಕರು ಹಾಗೂ ಬಾಲಕಿಯರಿಗಾಗಿ ಸ್ಪರ್ಧೆಯನ್ನು ಆಯೋಜಿಲಾಗಿತ್ತು. ಚಿತ್ರಕಲಾ ಸ್ಪರ್ಧೆಯಲ್ಲಿ ಸುಮಾರು 400 ಮತ್ತು ನಿಬಂಧ ಸ್ಪರ್ಧೆಯಲ್ಲಿ ಸುಮಾರು 370 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರಥಮ ಸ್ಥಾನ ರೂ.10 ಸಾವಿರ, ದ್ವಿತೀಯ ಸ್ಥಾನ ರೂ.7500, ತೃತೀಯ ಸ್ಥಾನ ರೂ.5 ಸಾವಿರ ಹಾಗೂ ಇಬ್ಬರಿಗೆ ಸಮಾಧಾನಕರ ಬಹುಮಾನವಾಗಿ ತಲಾ ರೂ.2500 ನೀಡಲಾಗುತ್ತಿದೆ.
ಡಿಸೆಂಬರ್ 6 ಶನಿವಾರ ನಗರದ ಡಾ.ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಬೆ.10.30 ರಿಂದ ಆಯೋಜಿಸಲಾಗಿರುವ ಆಯಾ ವಿಷಯಾಧಾರಿತ ವಿಚಾರಗೋಷ್ಠಿಗಳ ಬಳಿಕ ಬಹುಮಾನ ವಿತರಣೆ ಮಾಡಲಾಗುವುದು ಎಂದು ಸ್ಪರ್ಧೆಗಳ ಸಂಘಟನಾ ಸಮಿತಿಯ ಅಮಿತ ಬಿರಾದಾರ, ಶಿವು ಕುಂಬಾರ ಹಾಗೂ ರಮೇಶ ಬಿರಾದಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಪರ್ಧೆಗಳ ವಿಭಾಗ ಮತ್ತು ವಿಜೇತರ ಹೆಸರುಗಳು ಇಂತಿವೆ.
ನಿಬಂಧ ಸ್ಪರ್ಧೆ
ಪ್ರಾಥಮಿಕ ಶಾಲೆ ಬಾಲಕರ ವಿಭಾಗ:
ಕಗ್ಗೊಡ ಗ್ರಾಮದ ಪಕೃತಿ ಪ್ರಾಥಮಿಕ ಕನ್ನಡ ಶಾಲೆಯ ಶ್ರೇಯಸ್ ಇಬ್ರಾಹಿಂಪುರ ಪ್ರಥಮ, ಚಿಕ್ಕರೂಗಿ ಕೆ.ಬಿ.ಎಚ್.ಪಿ.ಎಸ್ ಆನಂದ ಕಟ್ಟಿಮನಿ ದ್ವಿತೀಯ, ವಿಜಯಪುರ ನಗರದ ಆಕ್ಟ್ ಶಾರದಾ ಶಾಲೆಯ ಓಂಪ್ರೀತ ಮನಗೂಳಿ ತೃತೀಯ ಹಾಗೂ ವೇದ ಅಕಾಡೆಮಿಯ ವಿಶ್ವನಾಥ ಅಜೂರ, ಶ್ರೀ ಬಿ.ಎಂ.ಪಾಟೀಲ ಪಬ್ಲಿಕ್ ಶಾಲೆಯ ಶಿವರಾಜ ಬಬಲೇಶ್ವರ ಸಮಾಧಾನಕರ ಬಹುಮಾನ ಪಡೆದಿದ್ದಾರೆ.
ಪ್ರಾಥಮಿಕ ಶಾಲೆ ಬಾಲಕಿಯರ ವಿಭಾಗ
ಚಿಕ್ಕರೂಗಿ ಎಚ್.ಪಿ.ಎಸ್ ಶಾಲೆಯ ಸೇವಂತಿ ಚಂಡಕಿ ಪ್ರಥಮ, ಕಗ್ಗೊಡ ಪ್ರಕೃತಿ ಪ್ರಾಥಮಿಕ ಶಾಲೆಯ ಸ್ಪೂರ್ತಿ ರಾಠೋಡ ದ್ವಿತೀಯ, ಇಟ್ಟಂಗಿಹಾಳ ಎಕ್ಸಲೆಂಟ್ ಪ್ರಾಥಮಿಕ ಶಾಲೆಯ ಐಶ್ವರ್ಯಾ ಡೊಣಗಿ ತೃತೀಯ ಹಾಗೂ ಚಿಕ್ಕರೂಗಿ ಎಚ್.ಪಿ.ಎಸ್ ಶಾಲೆಯ ಲಕ್ಷ್ಮೀ ಹಡಪದ ಮತ್ತು ಮಯೂರಿ ಬನಸೊಡೆ ಸಮಾಧಾನಕರ ಬಹುಮಾನ ಗಳಿಸಿದ್ದಾರೆ.
ಪ್ರೌಢ ಶಾಲೆ ಬಾಲಕರ ವಿಭಾಗ
ಮಮದಾಪುರ ಕೆ.ಪಿ.ಎಸ್ ಶಾಲೆಯ ಶ್ರೀಶೈಲ ವಾಡೇದ ಪ್ರಥಮ, ವಿಜಯಪುರ ವೇದ ಅಕಾಡೆಮಿಯ ಅಜ್ಮಲ್ ಕೂಡಗಿ ದ್ವಿತೀಯ, ಅಫ್ನಾನ್ ಬಾಗವಾನ ತೃತೀಯ ಮತ್ತು ಪ್ರಜ್ವಲ ಬೊಮ್ಮನಹಳ್ಳಿ ಹಾಗೂ ಮಂಜು ಪಾಟೀಲ ಸಮಾಧಾನಕರ ಬಹುಮಾನ ಪಡೆದಿದ್ದಾರೆ.
ಪ್ರೌಢ ಶಾಲೆ ಬಾಲಕಿಯರ ವಿಭಾಗ
ವಿಜಯಪುರ ವೇದ ಅಕಾಡೆಮಿಯ ಲಕ್ಷ್ಮೀ ಬಗಾತಿ ಪ್ರಥಮ, ಕಗ್ಗೊಡ ಪ್ರಕೃತಿ ಪ್ರೌಢ ಶಾಲೆಯ ಸ್ನೇಹಾ ಕೆಂಗನಾಳ ದ್ವಿತೀಯ, ವಿಜಯಪುರ ಪದ್ಮಾವತಿ ಪ್ರೌಢ ಶಾಲೆಯ ಐಶ್ವರ್ಯಾ ಯಾದವ ತೃತೀಯ ಮತ್ತು ಸೋಮದೇವರಹಟ್ಟಿ ದುರ್ಗಾದೇವಿ ಪ್ರೌಢಶಾಲೆಯ ವೇದಿಕಾ ಚವ್ಹಾಣ ಹಾಗೂ ವೇದ ಅಕಾಡೆಮಿಯ ಅನುಪ್ರಿಯಾ ಜಾಧವ ಸಮಾಧಾನಕರ ಬಹುಮಾನ ಪಡೆದಿದ್ದಾರೆ.
ಪಿ ಯು ಕಾಲೇಜು ಬಾಲಕರ ವಿಭಾಗ
ವಿಜಯಪುರ ನಗರದ ಎಸ್.ಎಸ್.ಪಿ.ಯು ಕಾಲೇಜಿನ ಗುರು ಹಂಡಿ ಪ್ರಥಮ, ಎ.ಎಸ್.ಪಾಟೀಲ ವಾಣೀಜ್ಯ ಕಾಲೇಜಿನ ಅಕ್ಷಯ ಕುಲಕರ್ಣಿ ದ್ವಿತೀಯ ಹಾಗೂ ಎಸ್.ಎಸ್.ಪಿ.ಯು ಕಾಲೇಜಿನ ಗುರುನಾಥ ರಾಠೋಡ ತೃತೀಯ ಸ್ಥಾನ ಪಡೆದಿದ್ದಾರೆ.
ಪಿ ಯು ಕಾಲೇಜು ಬಾಲಕಿಯರ ವಿಭಾಗ
ವಿಜಯಪುರ ನಗರದ ಎಕ್ಸಲೆಂಟ್ ಪಿಯು ಕಾಲೇಜಿನ ಭಾಗ್ಯಶ್ರೀ ಡೊಣಗಿ ಪ್ರಥಮ, ಎಸ್.ಎಸ್.ಪಿ.ಯು ಕಾಲೇಜಿನ ಭಾರತಿ ಚಿಂಚಲಿ, ಶ್ರೇಯಾ ಮಂಗಾನವರ ತೃತೀಯ ಮತ್ತು ಭೀಮವ್ವ ಧರೆನ್ನವರ ಹಾಗೂ ಎಸ್.ಬಿ.ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ರಜನಿ ಕುಂಬಾರ ಸಮಾಧಾನಕರ ಬಹುಮಾನ ಪಡೆದಿದ್ದಾರೆ.
ಚಿತ್ರಕಲೆ ಸ್ಪರ್ಧೆ
ಪ್ರಾಥಮಿಕ ಶಾಲೆ ಬಾಲಕರ ವಿಭಾಗ
ವಿಜಯಪುರ ವೇದ ಅಕಾಡೆಮಿಯ ಶ್ರವಣ ಎಸ್.ಭಟ ಪ್ರಥಮ, ಪಿ.ಎಂ.ಸಿ ಕೇಂದ್ರೀಯ ವಿದ್ಯಾಲಯದ ಸುಕ್ತಿಜ್ ಎಸ್.ಚೋರಗಿ ದ್ವಿತೀಯ, ವೇದ ಅಕಾಡೆಮಿಯ ಆದಿಲ್ ಎಸ್. ಕೊರಬು ತೃತೀಯ ಮತ್ತು ವೇದ ಅಕಾಡೆಮಿಯ ಬಸವರಾಜ ಎಸ್. ತೋಟಗೇರ ಹಾಗೂ ಉಕ್ಕಲಿ ಕೆ.ಬಿ.ಎಂ.ಪಿ.ಎಸ್ ಶಾಲೆಯ ರಾಕೇಶ ಜಿ. ಗವಳಗಿ ಸಮಾಧಾನಕರ ಬಹುಮಾನ ಪಡೆದಿದ್ದಾರೆ.
ಪ್ರಾಥಮಿಕ ಶಾಲೆ ಬಾಲಕಿಯರ ವಿಭಾಗ
ವಿಜಯಪುರ ನಗರದ ನಳಂದಾ ಶಾಲೆಯ ಪ್ರಣೀತಾ ಎ. ಜಂಡೆ ಪ್ರಥಮ, ಆಕ್ಟ್ ಶಾರದಾ ಪಬ್ಲಿಕ್ ಶಾಲೆಯ ಶ್ರೀನಿಧಿ ಎಸ್ ದ್ವಿತೀಯ, ಎಕ್ಸಲೆಂಟ್ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ ಐಶ್ವರ್ಯ ಡೊಣಗಿ ತೃತೀಯ ಮತ್ತು ಆಲ್ ಅಮಿನ್ ಉರ್ದು ಪ್ರಾಥಮಿಕ ಶಾಲೆಯ ಅಲಿಶಾ ಎಸ್. ಅತ್ತಾರ ಹಾಗೂ ಶ್ರೀ ಬಿ.ಎಂ.ಪಾಟೀಲ ಪಬ್ಲಿಕ್ ಶಾಲೆಯ ಪ್ರಜ್ಞಾ ಪಿ ಶಿಂಧೆ ಸಮಾಧಾನಕರ ಬಹುಮಾನ ಪಡೆದಿದ್ದಾರೆ.
ಪ್ರೌಢ ಶಾಲೆ ಬಾಲಕರ ವಿಭಾಗ
ವಿಜಯಪುರ ಶಾಂತಿನಿಕೇತನ ಇಂಟರನ್ಯಾಶನಲ್ ಶಾಲೆಯ ಅಫ್ರೋಜ್ ಬಂದಲಗಿ ಪ್ರಥಮ, ಲೊಯೋಲಾ ಆಂಗ್ಲ ಮಾಧ್ಯಮ ಶಾಲೆಯ ತೌಶೀಫ್ ಎಂ. ಹೊರ್ತಿ ದ್ವಿತೀಯ, ತಾಳಿಕೋಟೆ ಜಿ.ಎಚ್.ಎಸ್ ಶಾಲೆಯ ಕಾರ್ತಿಕ ಎ ಲಮಾಣಿ ತೃತೀಯ ಮತ್ತು ತಿಡಗುಂದಿ ಬಿ.ವಿ.ವಿ.ಎಚ್.ಎಸ್ ಶಾಲೆಯ ಸಂದೀಪ ಡಿ. ಚವ್ಹಾಣ ಹಾಗೂ ವಿಜಯಪುರ ನಗರದ ಚೇತನಾ ಆಂಗ್ಲ ಮಾಧ್ಯಮ ಶಾಲೆಯ ಪ್ರಜ್ವಲ ಜಂಡೆ ಸಮಾಧಾನಕರ ಬಹುಮಾನ ಪಡೆದಿದ್ದಾರೆ.
ಪ್ರೌಢ ಶಾಲೆ ಬಾಲಕಿಯರ ವಿಭಾಗ
ವಿಜಯಪುರ ಪ್ರೇರಣಾ ಪಬ್ಲಿಕ್ ಶಾಲೆಯ ಅಪೂರ್ವ ಪಿ. ಲಮಾಣಿ ಪ್ರಥಮ, ಗಣಿಹಾರ ಜಿ.ಎಂ.ಪಿ.ಎಸ್ ಶಾಲೆಯ ಸಮೀನಾ ಶೇಖ ದ್ವಿತೀಯ, ವಿಜಯಪುರ ಶಾಂತಿನಿಕೇತನ ಶಾಲೆಯ ಸ್ನೇಹಲತಾ ಎಸ್. ಪಾಟೀಲ ತೃತೀಯ ಮತ್ತು ಆಕ್ಟ್ ಶಾರದಾ ಪಬ್ಲಿಕ್ ಶಾಲೆಯ ದಿವ್ಯಾ ಎಸ್. ಹೂಗಾರ ಹಾಗೂ ಪ್ರೇರಣ ಪಬ್ಲಿಕ್ ಶಾಲೆಯ ಅಂಜಲಿ ಪಿ. ಲಮಾಣಿ ಸಮಾಧಾನಕರ ಬಹುಮಾನ ಪಡೆದಿದ್ದಾರೆ.
ಪಿ ಯು ಕಾಲೇಜು ಬಾಲಕರ ವಿಭಾಗ
ವಿಜಯಪುರ ನಗರದ ಬಂಜಾರಾ ಪಿ.ಯು ಕಾಲೇಜಿನ ಉಮೇಶ ಪಾಟೋಡೆ ಪ್ರಥಮ, ಎಸ್.ಬಿ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ವಿಶಾಲ ಪವಾರ ದ್ವಿತೀಯ ಹಾಗೂ ಎಸ್.ಎಸ್ ಪಿ ಯು ಕಾಲೇಜಿನ ವಿನಾಯಕ ಎ ಕೋಟ್ಯಾಳ ತೃತೀಯ ಸ್ಥಾನ ಪಡೆದಿದ್ದಾರೆ.
ಪಿ ಯು ಕಾಲೇಜು ಬಾಲಕಿಯರ ವಿಭಾಗ
ವಿಜಯಪುರ ನಗರದ ಎಕ್ಸಲೆಂಟ ಪಿ ಯು ಕಾಲೇಜಿನ ಭಾಗ್ಯಶ್ರೀ ಎಸ್. ಡೊಣಗಿ ಪ್ರಥಮ, ಬಿ.ಎಲ್.ಡಿ.ಇ ಎಸ್.ಬಿ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಮೇಘಾ ಎ ಬಿಂಜಲಭಾವಿ ದ್ವಿತೀಯ ಮತ್ತು ಸೆಂಟ ಜೋಸೆಫ್ ಪಿಯು ಕಾಲೇಜಿನ ಸಿಮ್ರಾನ್ ಡಿ. ಕೊಲಕಾರ ತೃತೀಯ ಹಾಗೂ ಎಸ್.ಎಸ್.ಪಿ.ಯು ಕಾಲೇಜಿನ ರಕ್ಷಾ ಡಿ. ಮಾಂಗಡೆ ಸಮಾಧಾನಕರ ಬಹುಮಾನ ಪಡೆದಿದ್ದಾರೆ.

