ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಡಿಸೆಂಬರ್ 7 ರಂದು ರವಿವಾರ ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2025 ಓಟದಲ್ಲಿ ಪಾಲ್ಗೊಳ್ಳಲಿರುವ ಕ್ರೀಡಾಪಟುಗಳು ಓಡಲಿರುವ ಮಾರ್ಗ ಮತ್ತು ಓಟ ಪ್ರಾರಂಭವಾಗಲಿರುವ ಸ್ಥಳ, ಸಮಯ ಮತ್ತೀತರ ಮಾಹಿತಿಯನ್ನು ರನ್ ಕೋರ್ ಕಮಿಟಿ ಪ್ರಕಟಿಸಿದೆ.
ಬೆಳಿಗ್ಗೆ 5.30 ರಿಂದಲೇ ನಗರದಲ್ಲಿ ಓಟ ನಡೆಯುವ ಮಾರ್ಗದಲ್ಲಿ ಝಿರೋ ಟ್ರಾಫಿಕ್ ವ್ಯವಸ್ಥೆ ಇರುವುದರಿಂದ ಎಲ್ಲ ವಿಭಾಗಗಳ ಕ್ರೀಡಾಪಟುಗಳು ನಸುಕಿನ ಜಾವ 5.30 ಗಂಟೆಯೊಳಗೆ ಕ್ರೀಡಾಂಗಣಕ್ಕೆ ಆಗಮಿಸಬೇಕು ಎಂದು ಸಂಘಟಕರು ಮನವಿ ಮಾಡಿದ್ದಾರೆ.
ಒಟ್ಟು 18 ಕಡೆಗಳಲ್ಲಿ ಓಟಗಾರರಿಗೆ ಪುನಶ್ಚೇತನ ಹೊಂದಲು ಹೈಡ್ರೇಶನ್ ಪಾಯಿಂಟ್ ಗಳ ವ್ಯವಸ್ಥೆ ಮಾಡಲಾಗಿದೆ. ರೇಸ್, ರೂಟ್ ಮ್ಯಾಪ್, ಹೈಡ್ರೇಶನ್ ಪಾಯಿಂಟ್ಸ್ ಗಳಿಗಾಗಿ ಈಗಾಗಲೇ ಆಯಾ ಸಮಿತಿಯು ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿದೆ.
ವಿಭಾಗವಾರು ಓಟಗಳು ಪ್ರಾರಂಭವಾಗುವ ಸಮಯ, ಸಾಗುವ ಮಾರ್ಗ, ಮುಕ್ತಾಯದ ರೂಟ್ ಮಾಹಿತಿ ಇಲ್ಲಿದೆ.
21 ಕಿ. ಮೀ. ಓಟ, ಪ್ರಾರಂಭ ಸಮಯ ಬೆಳಿಗ್ಗೆ 6 ಗಂಟೆಗೆ
ಓಟ ಪ್ರಾರಂಭ ಸ್ಥಳ- ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಿಂದ ಪ್ರಾರಂಭ. ಸ್ಟೇಶನ್ ರಸ್ತೆ, ಗೋಳಗುಮ್ಮಟ ಆವರಣ, ಕನಕದಾಸ ಸರ್ಕಲ್, ಅಂಬೇಡ್ಕರ್ ಸರ್ಕಲ್, ಗಗನ ಮಹಲ್, ಸಿ ಎಸ್ ಐ ಆಲ್ ಸೆಂಟ್ಸ್ ಚರ್ಚ್, ನರಸಿಂಹ ದೇವಸ್ಥಾನ, ಬಸವೇಶ್ವರ ಸರ್ಕಲ್, ಗಾಂಧಿ ಸರ್ಕಲ್, ಶಿವಾಜಿ ಸರ್ಕಲ್ ವೃತ್ತ, ವಾಟರ್ ಟ್ಯಾಂಕ್, ಇಬ್ರಾಹಿಂ ರೋಜಾ , ಸೈನಿಕ್ ಶಾಲೆಯ ಎರಡನೇ ದ್ವಾರದಿಂದ ಒಳ ಪ್ರವೇಶ, ಸೈನಿಕ್ ಶಾಲೆಯ ಮೂಲಕ ಮುಖ್ಯ ದ್ವಾರದ ಮೂಲಕ ನಿರ್ಗಮನ, ವಾಟರ್ ಟ್ಯಾಂಕ್ ಹತ್ತಿರ ಎಡಗಡೆ ತಿರುಗಿ ಸೋಲಾಪುರ ರಸ್ತೆ ಮೂಲಕ ಸಂಚಾರ, ಬಂಜಾರ ಕ್ರಾಸ್ ನಲ್ಲಿ ಯು ಟರ್ನ್ ಬಿ.ಎಲ್.ಡಿ.ಇ ಆಡಳಿತ ಕಚೇರಿ ಮೂಲಕ ಡೀಮ್ಡ್ ವಿಶ್ವವಿದ್ಯಾಲಯ, ಬಿ.ಎಲ್.ಡಿ.ಇ ಆಸ್ಪತ್ರೆಯ ಮುಖ್ಯ ಗೇಟ್ ಮೂಲಕ ಆಶ್ರಮ ರಸ್ತೆ, ಬಿ.ಎಲ್.ಡಿ.ಇ ಎಂಜಿನಿಯರಿಂಗ್ ಕಾಲೇಜು, ಜ್ಞಾನಯೋಗಾಶ್ರಮ, ನಂತರ ಆಶ್ರಮ ರಸ್ತೆಯ ಮೂಲಕ ಶ್ರೀ ಸಿದ್ದೇಶ್ವರ ದೇವಸ್ಥಾನ, ಗಾಂಧಿ ಚೌಕ್, ಬಸವೇಶ್ವರ ಚೌಕ್, ಬಾರಾ ಕಮಾನ್ ಒಳ ಆವರಣ, ಮುಕ್ತಾಯ- ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣ.
10 ಕಿ. ಮೀ. ಓಟ, ಪ್ರಾರಂಭ ಸಮಯ- ಬೆಳಿಗ್ಗೆ 6.30ಕ್ಕೆ
ಓಟ ಪ್ರಾರಂಭ ಸ್ಥಳ- ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ-ಸ್ಟೇಶನ್ ರಸ್ತೆ, ಗೋಳಗುಮ್ಮಟ ಒಳ ಆವರಣ ಮೂಲಕ, ಕನಕದಾಸ ಸರ್ಕಲ್, ಅಂಬೇಡ್ಕರ್ ಸರ್ಕಲ್, ಗಗನಮಹಲ, ಸಿ ಎಸ್ ಐ ಆಲ್ ಸೆಂಟ್ಸ್ ಚರ್ಚ್, ಶ್ರೀ ನರಸಿಂಹ ದೇವಸ್ಥಾನ, ಬಸವೇಶ್ವರ ಚೌಕ್, ಗಾಂಧಿ ಚೌಕ, ಶಿವಾಜಿ ಚೌಕ, ವಾಟರ್ ಟ್ಯಾಂಕ್, ಇಬ್ರಾಹಿಂ ರೋಜಾ ಯುಟರ್ನ್ ಮಾಡಿ ವಾಟರ್ ಟ್ಯಾಂಕ್ ಶಿವಾಜಿ ಚೌಕ್, ಬಸವೇಶ್ವರ ಚೌಕ್, ಬಾರ ಕಮಾನ ಒಳ ಆವರಣ, ಮುಕ್ತಾಯ- ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ.
5 ಕಿ. ಮೀ. ಓಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಓಟಗಾರರು ಹೆಸರು ನೋಂದಾಯಿಸಿರುವುದರಿಂದ ಐದು ಬ್ಯಾಚುಗಳಲ್ಲಿ ಓಟ ನಡೆಸಲಾಗುತ್ತಿದೆ. ಬಿಬ್ ಸಂಖ್ಯೆಗೆ ಅನುಗುಣವಾಗಿ ಎ, ಬಿ, ಸಿ, ಡಿ ಹಾಗೂ ಇ ಗುಂಪುಗಳನ್ನಾಗಿ ಮಾಡಿ ತಲಾ 10 ನಿಮೀಷಗಳ ಅಂತರದಲ್ಲಿ ಓಟಗಳನ್ನು ಆಯೋಜಿಸಲಾಗಿದೆ.
5 ಕಿ. ಮೀ. ಓಟ
ಎ ಗ್ರುಪ್- ಬಿಬ್ ಸಂಖ್ಯೆ- 50001 ರಿಂದ 55054: ಓಟ ಪ್ರಾರಂಭ ಸಮಯ- ಬೆಳಿಗ್ಗೆ 7 ಗಂಟೆಗೆ
ಬಿ. ಗ್ರುಪ್ ಬಿಬ್ ಸಂಖ್ಯೆ- 55055 ರಿಂದ 59554: ಓಟ ಪ್ರಾರಂಭ ಸಮಯ- ಬೆಳಿಗ್ಗೆ 7.10 ಗಂಟೆಗೆ
ಸಿ. ಗ್ರುಪ್ ಬಿಬ್ ಸಂಖ್ಯೆ- 50555 ರಿಂದ 64054: ಓಟ ಪ್ರಾರಂಭ ಸಮಯ- ಬೆಳಿಗ್ಗೆ 7.20 ಗಂಟೆಗೆ
ಡಿ. ಗ್ರುಪ್ ಬಿಬ್ ಸಂಖ್ಯೆ- 64055 ರಿಂದ 68554: ಓಟ ಪ್ರಾರಂಭ ಸಮಯ- ಬೆಳಿಗ್ಗೆ 7.30 ಗಂಟೆಗೆ
ಇ. ಗ್ರುಪ್ ಬಿಬ್ ಸಂಖ್ಯೆ- 68555 ರಿಂದ 71600: ಓಟ ಪ್ರಾರಂಭ ಸಮಯ- ಬೆಳಿಗ್ಗೆ 7.40 ಗಂಟೆಗೆ
ಓಟ ಪ್ರಾರಂಭ ಸ್ಥಳ- ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ, ಸ್ಟೇಶನ್ ರಸ್ತೆ, ಗೋಳಗುಮ್ಮಟ ಆವರಣ, ಮರಳಿ ಕನಕದಾಸ ಚೌಕ್, ಬಸವೇಶ್ವರ ಚೌಕ್, ಗಾಂಧಿಚೌಕ್ ಮೂಲಕ ಯು ಟರ್ನ್, ಬಸವೇಶ್ವರ ಚೌಕ್, ಕನಕದಾಸ ಚೌಕ್, ಮುಕ್ತಾಯ- ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ.
ಇದೇ ವೇಳೆ ಓಟದಲ್ಲಿ ಪಾಲ್ಗೋಳ್ಳುವ ಓಟಗಾರರಿಗೆ ನೀರು, ಉಪ್ಪು, ಹಣ್ಣುಗಳು, ಪಾನಕ ಮತ್ತೀತರ ಚೇತೋಹಾರಿ ಪಾನೀಯಗಳನ್ನು ನೀಡುವ ಮೂಲಕ ದಣಿವು ತಣಿದು ಪುನಶ್ಚೇತನ ನೀಡಲು 18 ಕಡೆಗಳಲ್ಲಿ ಹೈಡ್ರೇಶನ್ ಪಾಯಿಂಟ್ಸ್ ಗಳನ್ನು ಮಾಡಲಾಗಿದ್ದು, ನಗರದ ಸಂಘ- ಸಂಸ್ಥೆಗಳು ಮತ್ತು ಗಣ್ಯರು ಇವುಗಳ ಪ್ರಾಯೋಜಕತ್ವ ವಹಿಸಿದ್ದಾರೆ.
ಹೈಡ್ರೇಶನ್ ಪಾಯಿಂಟ್ಸ್ ಗಳು ಮತ್ತು ಪ್ರಾಯೋಜಕತ್ವ ವಹಿಸಿರುವವರ ಮಾಹಿತಿ ಇಲ್ಲಿದೆ.
- ಡಾ. ಚೌಧರಿ ಹಾಸ್ಪಿಟಲ್ ಕ್ರಾಸ್- ಡಾ. ಶಂಕರಗೌಡ ಪಾಟೀಲ ನರ್ಸಿಂಗ್ ಹೋಂ
- ಗೊಳಗುಮ್ಮಟ ಆವರಣ- ಮಾಜಿ ಉಪಮೇಯರ್ ಮತ್ತು ಕಾರ್ಪೋರೇಟರ್ ದಿನೇಶ್ ಹಳ್ಳಿ
- ದರ್ಬಾರ್ ಹೈ ಸ್ಕೂಲ್ ಗ್ರೌಂಡ್ ಹತ್ತಿರ- ಕೆ. ಎ. 28 ಆಫ್ ರೋಡರ್ಸ್
- ಗಗನ ಮಹಲ- ವಿಜಯಪುರ ಸಮಾನ ಮನಸ್ಕರರು
- ಬಸವೇಶ್ವರ ಸರ್ಕಲ್- ಸ್ಫೂರ್ತಿ ಫೌಂಡೇಶನ್
- ಗಾಂಧಿ ಚೌಕ್- ಅನುಗ್ರಹ ಕಣ್ಣಿನ ಆಸ್ಪತ್ರೆ
- ಶಿವಾಜಿ ಸರ್ಕಲ್- ಶ್ರೀರಾಮ ನವಮಿ ಉತ್ಸವ ಸಮಿತಿಯ ಉಮೇಶ ವಂದಾಲ
- ವಾಟರ್ ಟ್ಯಾಂಕ್ ಕ್ರಾಸ್- ಎ. ಪಿ. ಗ್ರುಪ್
- ಇಬ್ರಾಹಿಂ ರೋಜಾ- ಇಬ್ರಾಹಿಂ ರೋಜಾ ಈದ್ಗಾ ಸಮಿತಿ
- ಸೈನಿಕ ಸ್ಕೂಲ್- ಸೈನಿಕ್ ಸ್ಕೂಲ್
- ಜಿಲ್ಲಾಸ್ಪತ್ರೆ- ಜಿಲ್ಲಾ ಸರಕಾರಿ ಆಸ್ಪತ್ರೆ
- ಸೋಲಾಪುರ ರೋಡ್- ಚಾಲುಕ್ಯ ನಗರ ಹತ್ತಿರ- ಸವಿ ವಾಟರ್
- ಬಿ.ಎಲ್.ಡಿ.ಇ ಕ್ಯಾಂಪಸ್- ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ
- ಜ್ಞಾನಯೋಗಾಶ್ರಮ- ಜ್ಞಾನಯೋಗಾಶ್ರಮ
- ಶ್ರೀ ಸಿದ್ದೇಶ್ವರ ದೇವಸ್ಥಾನ- ಶ್ರೀ ಸಿದ್ಧೇಶ್ವರ ಬ್ಯಾಂಕ್
- ಬಂಜಾರಾ ಕ್ರಾಸ್- ಬಾಬಾ ಸ್ಟೀಲ್ಸ್ ನ ಬಾಬು ಚವಾಣ್
- ಹ್ಯಾಪಿ ಕೇಕ್ಸ್-ಆಶ್ರಮ ರಸ್ತೆ ಇಂಜಿನಿಯರಿಂಗ್ ಕಾಲೇಜ್ ಹತ್ತಿರ
- ಶ್ರೀ ಸಿದ್ದೇಶ್ವರ ಪೆಟ್ರೋಲಿಯಂ(ಬಿ ಎಲ್ ಡಿ ರೋಡ್) ಶ್ರೀ ಸಿದ್ಧೇಶ್ವರ ಪೆಟ್ರೋಲಿಯಂ.
ವೃಕ್ಷಥಾನ್ ಹೆರಿಟೇಜ್ ರನ್-2025 ಓಟ ಪ್ರಾರಂಭಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ ಎಂದು ಸಮಿತಿಯ ಪ್ರಮುಖರಾದ ಸಂಕೇತ ಬಗಲಿ, ಸಂದೀಪ ಮಡಗೊಂಡ, ಸೋಮಶೇಖರ ಸ್ವಾಮಿ, ಸಂತೋಷ ಔರಂಸಗ ಹಾಗೂ ಶ್ರೀಕಾಂತ ಅಂಗಡಿ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

