ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂಚಗೇರಿ ಆ ತತ್ವಧ್ಯಾತ್ಮ ಸಂಪ್ರದಾಯದ ಶಾಖಾಮಠವಾದ ವಿಜಯಪುರ ನಗರದ ಇಬ್ರಾಹಿಂಪುರದ ಶ್ರೀ ಜಯರಾಮೇಶ್ವರ ಮಠದ ಶ್ರೀ ಜಯರಾಮೇಶ್ವರ ಮಹಾರಾಜರ ಪುಣ್ಯಸ್ಮರಣೆ (ಜಾತ್ರಾಮಹೋತ್ಸವ)ಯನ್ನು ಬುಧವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.
ಪುಣ್ಯಸ್ಮರಣೆಯ ಅಂಗವಾಗಿ ಬೆಳಿಗ್ಗೆ ಶ್ರೀ ಜಯರಾಮೇಶ್ವರ ಮಹಾರಾಜರ ಗದ್ದುಗೆಗೆ ಪುಷ್ಪಾಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಲಾಯಿತು.
ಮಕ್ಕಳು ಮಹಿಳೆಯರೂ ಸೇರಿದಂತೆ ಬಹುಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಆಗಮಿಸಿ ಶ್ರೀ ಜಯರಾಮೇಶ್ವರರ ಗದ್ದುಗೆ ದರ್ಶನ ಪಡೆದರು. ಮಧ್ಯಾಹ್ನ ಪುಷ್ಪವೃಷ್ಟಿಯೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು. ನಂತರ ಅನ್ನಸಂತರ್ಪಣೆ ನಡೆಯಿತು.
ಶ್ರೀ ಜಯರಾಮೇಶ್ವರ ಮಹಾರಾಜರ ಮಠದ ಸೇವಾ ಸಮಿತಿ ಅಧ್ಯಕ್ಷ ನಂದಬಸು ಶಿವಣಗಿ, ಉಪಾಧ್ಯಕ್ಷ ಜಯರಾಮ ಡಂಬಳ, ಪ್ರಧಾನ ಕಾರ್ಯದರ್ಶಿ ಶಿವಪ್ಪ ಸರಗೆನ್ನವರ, ಕಾರ್ಯದರ್ಶಿ ಮಲ್ಲಪ್ಪ ಶಿರೋಳ, ಖಜಾಂಚಿ ಉದಯ ಶಿರೋಳ, ಸದಸ್ಯರಾದ ರಾಮಣ್ಣ ಗರಸಂಗಿ, ಕಿರಣ್ ಕೌಜಲಗಿ, ಶಂಕರ ಸುನಗ, ರಾಹುಲ ಕೊಲ್ಹಾರ, ಸುರೇಶ ಪೂಜಾರಿ, ವಿಠ್ಠಲ ಕೋರಿ, ಬೀರಪ್ಪ ಶಿವಣಗಿ, ರೇವಣಸಿದ್ದ ವಠಾರ, ಮಾಧು ದ್ಯಾಮಣ್ಣವರ, ಸೇರಿದಂತೆ ಹಲವಾರು ಯುವಕರು ಜಾತ್ರೆಯ ಯಶಸ್ವಿಗೆ ಶ್ರಮಿಸಿದರು. ಹಿರಿಯರಾದ ಕಾಳಪ್ಪ ಮನೋಚಾರಿ, ವಾಸುದೇವ ಸೋನಾರ ಮುಂತಾದವರು ಉಪಸ್ಥಿತರಿದ್ದರು.

