ಉದಯರಶ್ಮಿ ದಿನಪತ್ರಿಕೆ
ಚಡಚಣ: ದೈಹಿಕವಾಗಿ ಶೇ. 75ರಷ್ಟು ಅಸಮರ್ಥತೆ ಇದ್ದವರೂ ಇಂದು ಉನ್ನತ ಸಾಧನೆಯ ಶಿಖರವನ್ನೇರಿದ್ದಾರೆ. ಅಂತಹ ಮಹಾನ್ ಸಾಧಕರ ಆದರ್ಶಗಳನ್ನು ವಿಕಲಚೇತನರು ಪಾಲಿಸುವಂತೆ ವಿಶೇಷ ಚೇತನ ಮಕ್ಕಳ ತಾಲೂಕಾ ಸಂಪನ್ಮೂಲ ವ್ಯಕ್ತಿ ಗುರವ ಹೇಳಿದರು.
ನಿವರಗಿ ಗ್ರಾಮದ ಕೆಜಿಎಸ್, ಎಚ್ ಪಿ ಎಸ್ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ನಿವರಗಿ ಇವರ ಸಂಯುಕ್ತ ಆಶ್ರಯದಲ್ಲಿ ಕೆ.ಜಿ.ಎಸ್. ನಿವರಗಿ ಶಾಲಾ ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ವಿಶ್ವ ವಿಶೇಷ ಚೇತನರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ವಿಶೇಷ ಚೇತನರನ್ನು ಮುಖ್ಯ ವಾಹಿನಿಗೆ ಸೇರಿಸುವ ಕುರಿತು ಜನ ಜಾಗೃತಿ ಮೂಡಿಸಬೇಕು ಅವರು ಕೂಡ ನಮ್ಮಂತೆ ಪ್ರತಿಯೊಂದರಲ್ಲಿ ಭಾಗವಹಿಸುವಂತೆ ತಿಳಿಸಿಕೊಟ್ಟರು.
ಮುಖ್ಯ ಗುರು ಸುನಿಲ ಎಳಮೇಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕಲಿಕೆ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ಸಮಾನ ಅವಕಾಶ ಕಲ್ಪಿಸಿ ಅವರು ಹಿಂಜರಿಯದಂತೆ ಮನವಲಿಸಿ ಪ್ರತಿ ರಂಗದಲ್ಲಿಯೂ ಮುನ್ನುಗ್ಗುವಂತೆ ನಾವೆಲ್ಲರೂ ನೋಡಿಕೊಳ್ಳಬೇಕೆಂದು ಕರೆಕೊಟ್ಟರು.
ಪ್ರಾಸ್ತಾವಿಕವಾಗಿ ಸಿ.ಆರ್.ಪಿ ಪ್ರಕಾಶ್ ತಳವಾರ ಮಾತನಾಡಿದರು.
ರಾಜು ಜಂಬಗಿ ಸ್ವಾಗತಿಸಿದರು, ಪ್ರಾರ್ಥನೆಯನ್ನು ಮಹದೇವ್ ಕಾಂಬಳೆ ಅತಿಥಿ ಶಿಕ್ಷಕರು ನಡೆಸಿಕೊಟ್ಟರು ವಂದನಾರ್ಪಣೆಯನ್ನು ಮುಖ್ಯ ಗುರು ಎಸ್.ಎಂ. ಬನಸೋಡೆ ನಡೆಸಿಕೊಟ್ಟರು. ಬಹುಮಾನ ವಿತರಣೆಯನ್ನು ಕೆಜಿಎಸ್ ಶಾಲೆಯ ಮಹಿಳಾ ಸಿಬ್ಬಂದಿ ವರ್ಗದವರು ನಡೆಸಿಕೊಟ್ಟರು.
ಬಿ ಆರ್ ಸಿ ಕಾರ್ಯಾಲಯದ ಬಿ ಆಯ್ ಆರ್ ಟಿ ಗಳಾದ ಶ್ರೀ ಗುರವ ಹಾಗೂ ಮುಚ್ಚಂಡಿ ಸರ್ ಸಿ ಆರ್ ಪಿ ಗಳಾದ ಪ್ರಕಾಶ್ ತಳವಾರ ಮುಖ್ಯ ಗುರುಗಳಾದ ಶ್ರೀ ಸುನಿಲ್ ಯಳಮೇಲಿ, ಎಸ್ ಎಮ್ ಬನಸೋಡೆ, ಶಾಲಾ ಸಿಬ್ಬಂದಿ ವರ್ಗ ಮಕ್ಕಳು ಪಾಲಕರು ಉಪಸ್ಥಿತರಿದ್ದರು

